ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 20, 2025

Ctv News Kannada

Chikkaballapura

110ನೇ ಗ್ರಾಮ ತಲುಪಿದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ

1 min read

110ನೇ ಗ್ರಾಮ ತಲುಪಿದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ

ಮಂಡಿಕಲ್ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಸಮಸ್ಯೆ ಆಲಿಸಿದ ಶಾಸಕ

ಫೆಬ್ರವರಿ 2ಕ್ಕೆ ಗೌರಿಬಿದನೂರಿಗೆ ಮುಖ್ಯಮಂತ್ರಿ ಸಿದ್ದು ಆಗಮನ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುವ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಇಂದಿಗೆ 110 ಹಳ್ಳಿಗಳನ್ನ ಮುಗಿಸಿದೆ. ಇಂದು ಮಂಡಿಕಲ್ ಪಂಚಾಯಿತಿ ವ್ಯಾಪ್ತಿಯ ಮಂಡಿಕಲ್, ಗುಂಡ್ಲುಮ0ಡಿಕಲ್, ಕಾಕಲಚಿಂತ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಜನರ ಸಮಸ್ಯೆ ಆಲಿಸಿದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಗರ ಪ್ರದೇಶಕ್ಕೆ ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ, ಗ್ರಾಮೀಣ ಪ್ರದೇಶಕ್ಕೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಮೂಲಕ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದು, ಇಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಪಂಚಾಯಿತಿ ವ್ಯಾಪ್ತಿಯ ಮಂಡಿಕಲ್ ಮತ್ತು ಗುಂಡ್ಲಮ0ಡಿಕಲ್‌ಗೆ ಭೇಟಿ ನೀಡಿದ್ದು, ಇಂದಿಗೆ 110 ಗ್ರಾಮಗಳ ಭೇಟಿ ಮುಗಿಸಿದ್ದಾರೆ. ಇಂದು ಭೇಟಿ ನೀಡಿದ ಗ್ರಾಮಗಳಲ್ಲೂ ಅಲ್ಲಿನ ಜನರ ಅಹವಾಲು ಸ್ವೀಕರಿಸಿ, ಒಂದು ಕಿಲೋಮೀಟರ್ ಉದ್ದದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ, ಮಂಡಿಕಲ್ ಮತ್ತು ಗುಂಡ್ಲಮ0ಡಿಕಲ್‌ನಲ್ಲಿ ಸ್ಮಶಾಸಣಕ್ಕೆ ಜಮೀನು ಕೇಳಿದ್ದಾರೆ, ಅದಕ್ಕೆ ಎರಡು ಎಕರೆ ಜಮೀನು ಮೀಸಲಿಡಲು ಅಧಿಕಾರಿಗಳಿಗೆ ತಿಳಿಸಿದ್ದು, ಸರ್ಕಾರಿ ಜಮೀನು ಎಲ್ಲಿದೆ ಪತ್ತೆ ಮಾಡಲು ಸೂಚಿಸಲಾಗಿದೆ. ಗುಂಡ್ಲಮ0ಡಿಕಲ್ ನಲ್ಲಿ ಶೌಚಾಲಯದ ಕೊರತೆ ನೀಗಿಸಲು ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಚೇನಹಳ್ಳಿ ತಾಲ್ಲೂಕು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರುವುದರಿಂದ ಅಧಿಕಾರಿಗಳ ಸಮಯ ನೋಡಿ ಭೇಟಿ ನೀಡುವುದಾಗಿ ಹೇಳಿದರು.

ಗೌಡಗೆರೆ ಪಂಚಾಯಿತಿ ಬಂದರಹಳ್ಳಿ ಸಮಸ್ಯೆ ಗಮನಕ್ಕೆ ಬಂದಿದ್ದು, ಆ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು. ಪ್ರೆಬ್ರವರಿ ೨ಕ್ಕೆ ಗೌರಿಬಿದನೂರಿಗೆ ಸಿಎಂ ಸಿದ್ದರಾಮಯ್ಯ ಬರ್ತಿದ್ದಾರೆ. ಆ ಬಾಗದ ಅಧಿಕಾರಿಗಳು ಅಲ್ಲಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಬರದಿಂದ ಚಾಲನೆ ನೀಡಲಾಗುತ್ತಿದೆ. ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಈ ವೇಳೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಎಸ್‌ಪಿ ಶ್ರೀನಿವಾಸ್, ನಾಗಭೂಷಣ್, ಶಂಕರ್ ಇದ್ದರು.

About The Author

Leave a Reply

Your email address will not be published. Required fields are marked *