ಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ
1 min readಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ
ನಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಕಾರ್ಯಕ್ರಮ
ನಮ್ಮ ಊರಿಗೆ ನಮ್ಮ ಶಾಸಕ ಎಂಬ ಹೆಸರಿನಲ್ಲಿ ಪ್ರತಿ ಹಳ್ಳಿಗೂ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ಅ ಗ್ರಾಮದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಕೊಡಿಸುವ ಕೆಲಸ ಶಾಸಕ ಪ್ರದೀಪ್ ಈಶ್ವರ್ ಮಾಡಿದ್ದಾರೆ
ಶಾಸಕ ಪ್ರದೀಪ್ ಈಶ್ವರ್ ಶಾಸಕರಾದ ಮೇಲೆ ಸಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಆರಂಭಿಸಿದ್ದಾರೆ. ಈಗ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ಆರಂಭಿಸಿದ್ದಾರೆ.
ಸಾರ್ವಜನಿಕರಿಗೆ ಸಿಗುವ ಕೆಲಸ ಮಾಡುತ್ತಿದ್ದು ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಹೆಸರಿನಲ್ಲಿ ಈಗಾಗಲೇ ಮುದ್ದೇನಹಳ್ಳಿ ಪಂಚಾಯತಿಗೆ ಸೇರಿದ 17 ಹಳ್ಳಿಗಳಿಗೆ ಶಾಸಕರು ಭೇಟಿ ಕೊಟ್ಟು ಸಾರ್ವಜನಿಕರ ಕುಂದು ಕೊರತೆಗಳನ್ನು ನಿಗಿಸುವ ಕೆಲಸ ಮಾಡಿದರು.
ಇಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಶಾಸಕ ಪ್ರದೀಪ್ ಈಶ್ವರ್, ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಶಾಸಕರ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ನಂದಿ ಪಂಚಾಯತಿಯ ಸಿಂಗಾಟಕದರೆನಹಳ್ಳಿ, ಮಡಕಹೊಸಳ್ಳಿ, ಸುಲ್ತಾನ್ ಪೇಟೆ, ಬೈರನಾಯಕನಹಳ್ಳಿ, ನಂದಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಧಿಕಾರಿಗಳನ್ನು ಗ್ರಾಮಸ್ಥರನ್ನು ಮುಖಾಮುಖಿ ಕೂರಿಸಿ ಸಮಸ್ಯೆಗಳಿಗೆ ಅಲ್ಲೆ ಇತ್ಯರ್ಥ ಮಾಡುವ ಕೆಲಸ ಮಾಡಿದರು. ಶಾಸಕರಿಗೆ ಪ್ರತಿ ಗ್ರಾಮದಲ್ಲೂ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು.. ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶಿಲ್ದಾರ್, ಸರ್ವೆ ಡಿಪಾರ್ಟ್ಮೆಂಟ್, ಆಹಾರ ನಾಗರೀಕ ಸರಬರಾಜು ಅಧಿಕಾರಿಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.