ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಜಿಲ್ಲಾಡಳಿತದಿಂದ ಆದೇಶ ವಾಪಸ್, ವಾರ್ಡುಗಳಿಗೆ ಹಂಚಲು ನಿರ್ಧಾರ

1 min read

ವಿವಾಧಿತ ಆದೇಶ ವಾಪಸ್ ಪಡೆದ ಜಿಲ್ಲಾಡಳಿತ

15ನೇ ಹಣಕಾಸು ಯೋಜನೆಯ ಹಣ ಒಂದೇ ವಾರ್ಡಿಗೆ

ಜಿಲ್ಲಾಡಳಿತದಿಂದ ಆದೇಶ ವಾಪಸ್, ವಾರ್ಡುಗಳಿಗೆ ಹಂಚಲು ನಿರ್ಧಾರ

ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಚ್

ತೀವ್ರ ವಿವಾದಕ್ಕೆ ಗುರಿಯಾಗಿದ್ದ ಈ ಹಿಂದಿನ ನಗರಸಭೆ ಆಯುಕ್ತರ ಆದೇಶ ಕೊನೆಗೂ ರದ್ದು ಮಾಡಲಾಗಿದೆ. ಸದಸ್ಯರ ತೀವ್ರ ವಿರೋಧ ಕಾರಣಕ್ಕೆ ಜಿಲ್ಲಾಡಳಿತ ಆದೇಶ ರದ್ದು ಮಾಡುವ ಜೊತೆಗೆ ವಿವಿಧ ವಾರ್ಡುಗಳ ತುರ್ತು ಕಾಮಗಾರಿಗಳಿಗೆ ಅನುದಾನ ಹಂಚಲು ನಿರ್ಧರಿಸಲಾಗಿದೆ. ಇದರಿಂದ ಅನದಾನ ಎಲ್ಲಾ ವಾರ್ಡುಗಳಿಗೂ ಹಂಚಿಕೆಯಾಗಲಿದ್ದು, ನಗರಸಭಾ ಸದಸ್ಯರು ನಿರಾಳರಾಗಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ನಗರಸಭೆ ಎಂದರೆ ಹಾಗೆ. ಸದಾ ಒಂದಲ್ಲ ಒಂದು ವಿವಾದಕ್ಕೆ ಪದೇ ಪದೇ ಗುರಿಯಾಗುತ್ತಲೇ ಇದೆ. ಇತ್ತೀಚಿಗೆ ಅಂತಹ ವಿವಾದವೊಂದು ತೀವ್ರ ಸಂಚಲನ ಉಂಟು ಮಾಡಿತ್ತು. 2024-25ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ನಗರಸಭೆಗೆ ಬಂದಿದ್ದ ಅನುದಾನದಲ್ಲಿ ಬರೋಬ್ಬರಿ 3.3 ಕೋಟಿ ಅನುದಾನವನ್ನು ಒಂದೇ ವಾರ್ಡಿಗೆ ನೀಡಿ ಹಿಂದಿನ ಆಯುಕ್ತರಾಗಿದ್ದ ಮಂಜುನಾಥ್ ಅವರು ಆದೇಶ ನೀಡಿದ್ದರು. ಇದರಿಂದ ಉಳಿದ 26 ವಾರ್ಡುಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲಲಾಧಿಕಾರಿಗಳ ಬಳಿ ನಿಯೋಗ ಹೋಗಿ ಆದೇಶ ರದ್ದು ಮಾಡಲು ಕೋರಿದ್ದರು.

15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಸುಮಾರು 3.3 ಕೋಟಿಯಷ್ಟು ಅನುದಾನವನ್ನು ನಗರದ 4ನೇ ವಾರ್ಡಿಗೆ ನಡೀಲಾಗಿತ್ತು. ಅದರಲ್ಲೂ ವಾರ್ಡಿನ ಖಾಸಗಿ ಬಡಾವಣೆಯೊಂದರ ರಸ್ತೆಗಳ ದುರಸ್ತಿಗಾಗಿ ಈ ಅನುದಾನ ನೀಡಲಾಗಿದೆ ಎಂಬುದು ಸದಸ್ಯರ ಗಂಭೀರ ಆರೋಪವಾಗಿತ್ತು. ಅಲ್ಲದೆ ಅನುದಾನ ಹಂಚಿಕೆ ವಿಚಾರದಲ್ಲಿ ನಗರಸಭೆಯ ಚುನಾಯಿತ ಪ್ರತಿನಿಧಿಗಳ ಯಾವುದೇ ಅನುಮತಿ ಪಡೆಯದೆ, ಸಭೆ ಕರೆದು ಚರ್ಚೆ ಮಾಡದೆ ಏಕ ಮುಖವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸದಸ್ಯರು ಆರೋಪಿಸಿದ್ದರು.

ಅನುದಾನ ಇನ್ನೇನು ಬಿಡುಗಡೆಯಾಗುವ ಹಂತದಲ್ಲಿ ಎಚ್ಚೆತ್ತುಕೊಂಡ ನಗರಸಭಾ ಸದಸ್ಯರು, ಆಗಿನ ಆಯುಕ್ತರು ಮಾಡಿದ್ದ ಆದೇಶ ವಿರೋಧಿಸಿ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿದ್ದರು. ಈ ವೇಳೆ ಆಯುಕ್ತರ ಆದೇಶ ರದ್ದು ಪಡಿಸಲು ಕೋರಿ ಬರೋಬ್ಬರಿ 26 ಮಂದಿ ಸದಸ್ಯರು ಮನವಿ ಪತ್ರಕ್ಕೆ ಸಹಿ ಹಾಕಿದ್ದರು. ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ವೇಳೆ ಆದೇಶ ರದ್ದುಪಡಿಸುವ ಜೊತೆಗೆ ನೂತನ ಆದೇಶ ಮಾಡಿ, ಎಲ್ಲಾ ವಾರ್ಡುಗಳಿಗೆ ಅನುದಾನ ಸಮಾನವಾಗಿ ಹಂಚಿಕೆ ಮಡಾಉವ ಭರವಸೆಯನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೀಡಿದ್ದರು.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ನಡೀಇದ ಭರವಸೆಯಿಂತೆ ಆಗಿನ ಆಯುಕ್ತರು ನೀಡಿದ ಆದೇಶ ರದ್ದುಪಡಿಸುವ ಜೊತೆಗೆ ಹೊಸದಾಗಿ ನಿಯಮಾನುಸಾರ ಅನುದಾನ ಹಂಚಿಕೆ ಮಾಡಿ ಕ್ರಮ ವಹಿಸುವಂತೆ ಸೂಚಿಸಿ ಹಾಲಿ ನಗರಸಭಾ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಇದರಿಂದ ೧೫ನೇ ಹಣಕಾಸು ಯೋಜನೆಯ ಅನುದಾನ ಇದೀಗ ಎಲ್ಲ ವಾರ್ಡುಗಳಿಗೆ ಹಂಚಿಕೆಯಾಗಲಿದ್ದು, ವಾರ್ಡುಗಳಲ್ಲಿ ತುರ್ತಾಗಿ ಆಗಬೇಕಾದ ಕಾಮಗಾರಿಗಳನ್ನು ನಡೆಸಲು ಸಹಕಾರಿಯಾಗಲಿದೆ ಎಂದು ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಹಿಂದಿನ ಆಯುಕ್ತರ ಆದೇಶ ರದ್ದು ಪಡಿಸಿ, ಅನುದಾನವನ್ನು ನಿಯಮಾನುಸಾರ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ವಾರ್ಡುಗಳಲ್ಲಿ ಕಾಮಗಾರಿಗಳು ಆರಂಭವಾಗಿವೆ. ನಗರದ ೫ನೇ ವಾರ್ಡಿನ ಪ್ರಶಾಂತ ನಗರದಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗಳಿಗೆ ಹೊಸ ಪಂಪು ಮೋಟಾರುಗಳನ್ನು ಇಂದು ಅಳವಡಿಸಲಾಗಿದೆ. ಈ ಹಿಂದೆ ಇದ್ದ ಪೈಪು, ಪಂಪು ಮೋಡಾರುಗಳು ದುರಸ್ತಿಯಾಗಿ, ನಾಗರಿಕರಿಗೆ ನೀರು ಸರಬರಾಡು ಮಾಡಲು ತೀವ್ರ ಸಮಸ್ಯೆ ಆಗಿದ್ದು, ಇದನ್ನು ಪರಿಹರಿಸಲು ಈಗಾಗಲೇ ಕ್ರಮ ವಹಿಸಲಾಗಿದೆ.

ಅಲ್ಲದೆ ೫ನೇ ವಾರ್ಡಿನ ತಿಮ್ಮಕ್ಕ ಬಡಾವಣೆಯಲ್ಲಿ ಮುಖ್ಯ ರಸ್ತೆ ದುರಸ್ತಿ ಮತ್ತು ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಅನುದಾನ ಅಗತ್ಯವಿದ್ದು, ೧೫ನೇ ಹಣಕಾಸು ಯೋಜನೆಯ ಅನುದಾನ ಮತ್ತು ನಗರೋತ್ಥಾನ ಅನುದಾನದಲ್ಲಿ ನೀಡಿದರೆ, ತಿಮ್ಮಕ್ಕ ಬಡಾವಣೆಯ ಮುಖ್ಯ ರಸ್ತೆ ದುರಸ್ತಿ ಮತ್ತು ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ವಾರ್ಡಿನ ಸದಸ್ಯ ನಾಗರಾಜ್.ಜೆ ಆಗ್ರಹಿಸಿದ್ದಾರೆ.

ಅಲ್ಲದೆ ಇದೇ ಬಡವಾಣೆಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳು ಇಂದಿಗೂ ಮಣ್ಣಿನ ರಸ್ತೆಗಳೇ ಇದ್ದು, ಅವುಗದಳನ್ನು ಸಿಸಿ ರಸ್ತೆಗಳಾಗಿ ಅಭಿವೃದ್ಧಿ ಪಡಿಸಲು ಅನುದಾನದ ಅಗತ್ಯವಿದೆ. ತಿಮ್ಮಕ್ಕ ಬಡಾವಣೆ ನಗರದ ಪ್ರತಿಷ್ಟಿತ ಬಡಾವಣೆಗಳಲ್ಲಿ ಒಂದಾಗಿದ್ದು, ಇಂತಹ ಬಡಾವಣೆಯಿಂದ ಹೆಚ್ಚಿನ ರೀತಿಯಲ್ಲಿ ತೆರಿಗೆಯೂ ವಸೂಲಿಯಾಗಿ, ನಗರಸಭೆಗೆ ಆದಾಯ ಬರುತ್ತಿದೆ. ಹಾಗಿದ್ದರೂ ಈ ಬಡಾವಣೆಯ ರಸ್ತೆಗಳು ಇಂದಿಗೂ ದುರಸ್ತಿಯಾಗದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ರಸ್ತೆಗಳ ಅಭಿವೃದ್ಧಿ ಮಾಉವ ಮೂಲಕ ನಾಗರಿಕರ ಸಮಾಧಾನ ಮಾಡುವುದು ನಗರಸಬೆಯ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಒಂದೇ ವಾರ್ಡಿಗೆ ಅನುದಾನ ನೀಡಿ, ಆದೇಶಿಸಿದ್ದ ಆದೇಶ ರದ್ದಾಗಿದ್ದು, ಹಾಲಿ ನಗರಸಭಾ ಆ?ಉಕ್ತರಾದ ಉಮಾಶಂಕರ್ ಅವರು ವಾರ್ಡುಗಳ ಸದಸ್ಯರೊಂದಿಗೆ ಚರ್ಚೆ ನಡೆಸಿ, ನಿಯಮಾನುಸಾರ ಅನುದಾನ ಹಂಚಿ, ಅಭಿವೃದ್ಧಿ ಕಮಾಗಾರಿಗಳಿಗೆ ಅನುದಾನ ನೀಡುವ ಭರವಸೆ ಇದ್ದು, ವಾರ್ಡುಗಳಲ್ಲಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳನ್ನು ಆ ಅನುದಾನದಲ್ಲಿ ಮುಗಿಸಲು ನಗರಸಭಾ ಸದಸ್ಯರು ಪಟ್ಟಿ ಸಿದ್ಧಪಡಿಸುವಂತ್ತ ಗಮನ ಹರಿಸಿದ್ದಾರೆ.

ಇನ್ನು 15ನೇ ಹಣಕಾಸು ಯೋಜನೆಯ ಅನುದಾನ ಒಂದೇ ವಾರ್ಡಿಗೆ ನೀಡಿರುವ ಬಗ್ಗೆ ಸಿಟಿವಿ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದರಿಂದ ನಗರಸಭಾ ಸದಸ್ಯರು ಎಚ್ಚೆತ್ತು ಜಿಲ್ಲಾಧಿಕಾರಿಗಳ ಬಳಿ ನಿಯೋಗ ಹೋಗಿ ಆದೇಶ ರದ್ದು ಮಡಾಉವ ಜೊತೆಗೆ ನಿಯಮಾನುಸಾರ ಅನುದಾನ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದರು. ನಂತರ ನಗರಸಭಾ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿರುವ ಬಗ್ಗೆಯೂ ಸಿಟಿವಿ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಒಮದೇ ವಾರ್ಡಿಗೆ ಅನುದಾನ ನೀಡುವ ಮೂಲಕ ನಗರದ ಇತರೆ ವಾರ್ಡುಗಳನ್ನು ನಿರ್ಲಕ್ಷ ಮಾಡಲಾಗಿದೆ ಎಂದು ಸಿಟಿವಿ ವಿವರವಾಗಿ ವರದಿ ಪ್ರಸಾರ ಮಾಡಿತ್ತು.

ಈ ವರದಿಯಿಂದ ಎಚ್ಚೆತ್ತ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಆದೇಶ ರದ್ದು ಪಡಿಸುವ ಜೊತೆಗೆ ನಗರದ ಇತರಕೆ ವಾರ್ಡುಗಳಿಗೆ ಅನುದಾನ ನಿಯಮಾನುಸಾರ ಹಂಚಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್ ಆಗಿದೆ.

 

About The Author

Leave a Reply

Your email address will not be published. Required fields are marked *