ಪತಿ ಸಮಾಧಿಯ ಪಕ್ಕದಲ್ಲಿ ಪತ್ನಿಯನ್ನು ಮಣ್ಣು ಮಾಡಲು ವಿರೋಧ
1 min read
ಪತಿ ಸಮಾಧಿಯ ಪಕ್ಕದಲ್ಲಿ ಪತ್ನಿಯನ್ನು ಮಣ್ಣು ಮಾಡಲು ವಿರೋಧ
ಎರಡನೇ ಪತ್ನಿಯಾದ ಕಾರಣ ಮೊದಲ ಪತ್ನಿ ಕಡೆಯವರಿಂದ ವಿರೋಧ
ಪೊಲೀಸರು, ಕಂದಾಯ ಅಧಿಕಾರಿಗಳ ಮನವೊಲಿಕೆಯಿಂದ ಸುಖಾಂತ್ಯ
ವೃದ್ದೆಯೊಬ್ಬರು ಮೃತಪಟ್ಟಿದ್ದು, ಪತಿಯ ಸಮಾಧಿ ಪಕ್ಕ ಮಣ್ಣು ಮಾಡಲು ಮುಂದಾದ ಸಂಬ0ಧಿಕರಿಗೆ ಅಡ್ಡಿಪಡಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸರ್ಲಹಳ್ಳಿಯಲ್ಲಿ ನಡೆದಿದೆ.
ವೃದ್ದೆ ಸುಬ್ಬಮ್ಮ ಎಂಬುವರು ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸರ್ಲಹಳ್ಳಿಯಲ್ಲಿ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದ್ದರು, ಹಳೆ ಪದ್ದತಿಯಂತೆ ಪತ್ನಿ ಮೃತಪಟ್ಟರೆ ಆಕೆಯ ಪತಿ ಸಮಾಧಿ ಪಕ್ಕದಲ್ಲೆ ಮಣ್ಣು ಮಾಡುತ್ತಿದ್ದರು, ಆದರೆ ಸುಬ್ಬಮ ಎರಡನೇ ಪತ್ನಿ ಆಗಿರುವುದರಿಂದ ಮೊದಲ ಪತ್ನಿ ಸಂಬ0ಧಿಕರು ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅಡ್ಡಿ ಪಡಿಸಿದರು.
ಹಲವು ಗಂಟೆಗಳ ಕಾಲ ಹೈಡ್ರಾಮ ನಡೆದು, ಸಂಬ0ಧಿಕರ ಜಮೀನು ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಪ್ರಕರಣ ವಿಚಾರಣೆ ಹಂತದಲ್ಲಿದು ಪ್ರಕರಣ ಇತ್ಯರ್ಥವಾಗದೆ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ, ನಂತರ ಎಸಿ ಅವರ ಆದೇಶದ ಮೇರೆಗೆ ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ತಾಲ್ಲೂಕು ದಂಡಾಧಿಕಾರಿ ಜಿ.ಎನ್ ಸುಧೀಂದ್ರ ಮತ್ತು ಗೌನಿಪಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮಧ್ಯ ಪ್ರವೇಶಿಸಿ, ಎರಡು ಕಡೆವರ ಮನವೊಲಿಸಿ ಅಂತ್ಯ ಸಂಸ್ಕಾರ ಮಾಡಲು ಅನುವು ಮಾಡಿಕೊಡಲಾಯಿತು.
ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಯಲ್ಪಾಡು, ಗೌನಿಪಲ್ಲಿ ಮತ್ತು ಶ್ರೀನಿವಾಸಪುರ ಪೊಲೀಸ್ ಠಾಣಾ ಸಿಬ್ಬಂದಿ ಸೂಕ್ತ ಬಂದೂಬಸ್ತ್ ಕಲ್ಪಿಸಲಾಗಿತ್ತು. ಕೊನೆಗೂ ವಿವಾದ ಸುಖಾಂತ್ಯವಾಗಿದ್ದು, ಪತಿ ಸಮಾಧಿಯ ಪಕ್ಕದಲ್ಲಿಯೇ ಪತ್ನಿಯಯನ್ನು ಮಣ್ಣು ಮಾಡಲಾಯಿತು.