ನಾಳೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿಲಿರೋ ವಿಪಕ್ಷನಾಯಕ ಆಶೋಕ್
1 min readವಕ್ಫ್ಗೆ ಆಸ್ತಿ ಪರಧಾರೆ ಪ್ರಕರಣಕ್ಕೆ ಡೀಮ್ಸ್ ಫಾರೆಸ್ಟ್ ಪ್ರತ್ಯಾಸ್ತç
ನಾಳೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿಲಿರೋ ವಿಪಕ್ಷನಾಯಕ ಆಶೋಕ್
ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿರುವ ಬಿಜೆಪಿ
ವಿಪಕ್ಷನಾಯಕ ಆರ್. ಆಶೋಕ್ ವಿರುದ್ದ ಎಂಸಿ ಸುಧಾಕರ್ ಆಕ್ರೋಶ
ನೀವು ಕಂದಾಯ ಸಚಿವರಾಗಿದ್ದಾಗ ರೈತರ ಸಾವಿರಾರು ಎಕೆರೆ ಡೀಮ್ಡ್ ಫಾರೆಸ್ಟ್ ಆಗಿದೆ
ಮೊದಲು ಆ ರೈತರಿಗೆ ಆದ ಅನ್ಯಾಯದ ವಿರುದ್ದ ಹೋರಾಟ ಮಾಡಿ
ಅವರಿಗೆ ನ್ಯಾಯ ಕೊಡಿಸಿ ವಕ್ಫ್ ಹೆಸರಲ್ಲಿ ರಾಜಕೀಯ ಮಾಡಬೇಡಿ
ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ದೇವಾಲಯಗಳ ಆಸ್ತಿ ವಕ್ಫ್ಗೆ ಪರಧಾರೆ ಮಾಡಿರುವ ಆರೋಪದಡಿ ಬಿಜೆಪಿ ನಡೆಸಲಿರುವ ವಕ್ಫ್ ಜಿಹಾದ್ ಹೋರಾಟಕ್ಕೆ ಪ್ರತಿ ಅಸ್ತçವಾಗಿ ಚಿಕ್ಕಬಳ್ಳಾಪುರದಲ್ಲಿ ಡೀಮ್ಸ್ ಫಾರೆಸ್ಟ್ ಪ್ರತ್ಯಾಸ್ತç ಬಿಡಬೇಕಾಗುತ್ತದೆ ಎಂದು ಸಚಿವ ಡಾ ಎಂ ಸಿ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ವಕ್ಫ್ ಆಸ್ತಿ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡಿದರು. ನಾಳೆ ಚಿಕ್ಕಬಳ್ಳಾಪುರಕ್ಕೆ ವಿಪಕ್ಷ ನಾಯಕ ಆರ್. ಆಶೋಕ್ ಪ್ರತಿಭಟನೆಗೆ ಆಗಮಿಸುತ್ತಿದ್ದು, ಪ್ರತಿಭಟನೆ ನಡೆಸೋಕೆ ಮುನ್ನಾ ತಾವು ಕಂದಾಯ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ 49 ಸಾವಿರಕ್ಕೂ ಹೆಚ್ಚು ಎಕೆರೆ ಭೂಮಿ ಡೀಮ್ಢ್ ಫಾರೆಸ್ಟ್ ಆಗಿದೆ. ಆದರಲ್ಲಿ ಬರೋಬ್ಬರಿ 11,088 ಎಕೆರೆ ರೈತರಿಗೆ ಮಂಜೂರಾಗಿದ್ದ ಭೂಮಿಯೂ ಇದೆ ಎಂದರು.
ಹಾಗೆ ಡೀಮ್ಡ್ ಫಾರೆಸ್ಟ್ ಆದ ರೈತರು ಈಗ ನೀವು ಮಾಡಿರೋ ಹೊಣೆಗೇಡಿತನದಿಂದ ಪರದಾಡುತ್ತಿದ್ದು, ಆ ರೈತರಿಗೆ ಮೊದಲು ನ್ಯಾಯ ಕೊಡಿ ಅಂತ ವಾಗ್ದಾಳಿ ನಡೆಸಿದರು.