ನ.11ರಂದು ಜಿಲ್ಲಾ ಕೇಂದ್ರದಲ್ಲಿ ಒನಕೆ ಓಬವ್ವ ಜಯಂತಿ
1 min readನ.11ರಂದು ಜಿಲ್ಲಾ ಕೇಂದ್ರದಲ್ಲಿ ಒನಕೆ ಓಬವ್ವ ಜಯಂತಿ
ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸಾಮಾನ್ಯ ಗೃಹಿಣಿಯಾಗಿದ್ದ ಒನಕೆ ಓಬವ್ವ ಚಿತ್ರದುರ್ಗದ ಕೋಟೆ ವಶಪಡಿಸಿಕೊಳ್ಳಲು ಹೈದರಾಲಿ ಕುತಂತ್ರ ವಿಲಗೊಳಿಸಿ, ಕೋಟೆ ಮತ್ತು ಜನತೆಯನ್ನು ರಕ್ಷಿಸಿದ ವೀರ ಮಹಿಳೆಯಾಗಿದ್ದು, ಇಂತಹ ವೀರ ವನಿತೆಗೆ ನವೆಂಬರ್ 11 ರಂದು ಜಿಲ್ಲೆಯಲ್ಲಿ ಅದ್ದೂರಿಯಾಗಿ ಓಬವ್ವ ಜಯಂತಿ ಏರ್ಪಡಿಸಲಾಗಿದ್ದು, ಸಿದ್ದತೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಒನಕೆ ಓಬವ್ವ ಜಯಂತೋತ್ಸವ ಸಮಿತಿ ಸೋಮವಾರ ನಡೆಯಲಿರುವ ಒನಕೆ ಓಬವ್ವ ಜಯಂತಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಚಿನ್ನಪ್ಪ ಮತ್ತು ಚಿನ್ನಮ್ಮನ ಮಗಳು ಓಬವ್ವನ ಕುರಿತು ಚಿಕ್ಕಬಳ್ಳಾಪುರದ ಉಪನ್ಯಾಸಕ ಮುನಿರಾಜು ಉಪನ್ಯಾಸ ನೀಡಲಿದ್ದಾರೆ. ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೆರವೇರಿಸಲಿದ್ದು, ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನವೆಂಬರ್ 11 ಸೋಮವಾರ ಬೆಳಗ್ಗೆ 10.30ಕ್ಕೆ ಅಂಬೇಡ್ಕರ್ ಭವನದಿಂದ ಕಲಾತಂಡಗಳ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ ಹೊರಟು ಎಂ.ಜಿ ರಸ್ತೆಯ ಜೈ ಭೀಮ್ ಮೆಮೋರಿಯಲ್ ಹಾಸ್ಟೆಲ್‌ನಲ್ಲಿ ಬಾಬಾ ಸಾಹೇಬರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಗಣ್ಯರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೆಂಕಟರಮಪ್ಪ, ರಾಮಪ್ಪ, ಮಮತಾ ಮೂರ್ತಿ, ಪಿವಿ ವೆಂಕಟೇಶ್, ನಾರಾಯಣಸ್ವಾಮಿ, ಕೃಷ್ಣಪ್ಪ, ಗಣೇಶ್, ಮಂಜುನಾಥ್, ಕೃಷ್ಣಮೂರ್ತಿ, ಚಿಕ್ಕನರಸಿಂಹಪ್ಪ ಇದ್ದರು.