ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಅಯ್ಯೋ ಕೋತಿ ಕಾಟ ಅಂತ ತಲೆ ಚಚ್ಕೋಬೇಡಿ, ವಾನರರಿಗೆ ಮಾನವೀಯತೆಯಿಂದ ಆಹಾರ ನೀಡಿ

1 min read

ಅಯ್ಯೋ ಕೋತಿ ಕಾಟ ಅಂತ ತಲೆ ಚಚ್ಕೋಬೇಡಿ
ವಾನರರಿಗೆ ಮಾನವೀಯತೆಯಿಂದ ಆಹಾರ ನೀಡಿ
ಇದರಿಂದ ಕೋತಿ ಪ್ರಾಣವನ್ನು ಉಳಿದು, ಕಾಟವೂ ತಪ್ಪುತ್ತದೆ

ಅರಣ್ಯ ನಾಶ ಮತ್ತು ಸತತ ಬರ ಎಂಬುದು ಜಾನರ ಮೇಲೆ ಮಾತ್ರವಲ್ಲದೆ ವನ್ಯಜೀವಿಗಳ ಮೇಲೂ ತೀವ್ರವಾದ ಪರಿಣಾಮವನ್ನೇ ಬೀರಿದೆ. ಅರಣ್ಯದಲ್ಲಿ ಆಹಾರ ಮತ್ತು ಕುಡಿಯುವ ನೀರಿಲ್ಲದೆ ವನ್ಯಜೀವಿಗಳ ಪರದಾಟ ಹೇಳತೀರದಾಗಿದ್ದು, ಅದೇ ರೀತಿಯ ಪರದಾಟ ಕೋತಿಗಳೂ ಅನುಭವಿಸುತ್ತಿವೆ.

ಅರಮ್ಯದಲ್ಲಿರುವ ಹಲವು ಪ್ರಾಣಿಗಳು ನೀರು ಮತ್ತು ಆಹಾರಕ್ಕಾಗಿ ನಾಡಿನತ್ತ ಬಂದು, ನಾಯಿಗಳಿಗೆ ಸಿಲುಕಿ ಸಾವನ್ನಪ್ಪುವ ಸುದ್ದಿಗಳೂ ಆಗಾಗ ಬರುತ್ತಿದ್ದು, ಕೋತಿಗಳ ಮಾನವರೊಂದಿಗೆ ಬೆರೆತರೂ ಇತ್ತೀಚಿನ ದಿನಗಳಲ್ಲಿ ಅವುಗಳ ಕಾಟ ತೀವ್ರವಾಗಿದೆ ಎಂಬ ಆರೋಪಗಳಿವೆ. ಕಾಡಿನಲ್ಲಿ ಸಹಜವಾಗಿ ಸಿಗುತ್ತಿದ್ದ ಹಣ್ಣುಗಳು ಬರದ ಪರಿಣಾಮ ಸಿಗುತ್ತಿಲ್ಲ. ಇನ್ನು ಅರಣ್ಯ ಎಂಬುದು ಮಾನವನ ಭೂ ದಾಹಕ್ಕೆ ದಿನೇ ದಿನೇ ಬಲಿಯಾಗುತ್ತಲೇ ಇದೆ. ಇದರಿಂದ ಕೋತಿಗಳು ವಿಧಿಯಿಲ್ಲದೆ ನಾಡಿನತ್ತ ಲಗ್ಗೆ ಇಡುತ್ತಿವೆ.

ಎಲ್ಲಾ ವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವ ವಾನರ ಜನರ ಮನೆಗಳಿಗೇ ನುಗ್ಗಿ ಆಹಾರ ಕದಿಯುವುದರಿಂದ ಮಕ್ಕಳು, ಹಿರಿಯರು ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಯಾರದೇ ಕೈಯಲ್ಲಿರುವ ಆಹಾರವನ್ನು ಕಸಿದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಸಹಜವಾಗಿಯೇ ಮಂಗಗಳ ವಿರುದ್ಧ ಮಾನವನ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಂಗಗಳ ನಿಯಂತ್ರಣಕ್ಕೆ ಸಂಬAಧಿಸಿದ ಪುರಸಭೆ ನಗರಸಭೆಗಳ ಮೇಲೆ ಒತ್ತಡ ಹೇರುತ್ತಲೇ ಇದೆ.

ಆದರೆ ನಾಡಿನಲ್ಲಿರುವ ಮಂಗಗಳ ನಿಯಂತ್ರಣ ಹೇಗೆ ಎಂಬುದು ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಸರ್ಕಾರಗಳಿಗೆ ಅರ್ಥವಾಗದ ಯP್ಷÀ ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಪ್ರಭುದ್ಧರು ಮಂಗಗಳಿಗೆ ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆ ಮಾಡಿಸಲು ಸಲಹೆ ನೀಡಿದ್ದರು. ಆದರೆ ಅದು ಎಲ್ಲಿಯೂ ಅನುಷ್ಠಾನವಾದ ಬಗ್ಗೆ ಮಾಹಿತಿ ಇಲ್ಲ. ಮಂಗ ಮತ್ತು ಮಾನವನ ಘರ್ಷಣೆ ಮುಂದುವರಿದಿರುವಾಗಲೇ ಇಲ್ಲೊಂದು ಮನ ಕಲುಕುವ ಘಟನೆ ವರದಿಯಾಗಿದೆ.

ಬಾಗೇಪಲ್ಲಿ ಪಟ್ಟಣದ ಡಿವಿಜಿ ರಸ್ತೆಯ ಸಿವಿಲ್ ನ್ಯಾಯಾಲಯ ಆವರಣ ಮತ್ತು ಚಿತ್ರಾವತಿ ಮೇಲ್ಸೇತುವೆ ಬಳಿ ಮಂಗಗಳು ಆಹಾರವಿಲ್ಲದೆ ನರಕ ಯಾತನೆ ಅನುಭವಿಸುತ್ತಿವೆ. ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬೇವಿನ ಮರದ ಮೇಲೆ ಹಾಗೂ ಗೋಡೆಯ ಮೇಲೆ ಕುಳಿತು ಆಹಾರ ಮತ್ತು ನೀರಿಗಾಗಿ ಕಾದು ನೋಡುತ್ತಿವೆ. ಕೋತಿಗಳು ಆಹಾರ ಇಲ್ಲದೆ ಹುಲ್ಲು ಕಸ ಕಡ್ಡಿ ತಿಂದು ಮರದ ಮೇಲೆ ಜೀವನ ಮಾಡುತ್ತಿವೆ.

ಕೋತಿಗಳು ದಿನನಿತ್ಯ ಜನರು ಬರುವ ಸಂದರ್ಭದಲ್ಲಿ ನಂದಿನಿ ಪಾರ್ಲರ್ ಬಳಿ ಬಂದು ಆಹಾರ ಕೊಡುತ್ತಾರೇನೋ ಅಂತ ಆಸೆಯಿಂದ ಎದುರು ನೋಡುತ್ತಿವೆ. ಆದರೆ ಮಾನವೀಯತೆ ಮರೆತ ಜನರು ಆಹಾರ ನೀಡುವುದರಿರಲಿ, ದೊಣ್ಣೆಯಿಂದ ಕೋತಿಗಳನ್ನು ಓಡಿಸಲು ಮುಂದಾಗುತ್ತಿದ್ದಾರೆ. ಇದರಿಂದ ಕೋತಿಗಳು ನಿರಾಸೆಯಿಂದ ಮತ್ತೆ ಮರ ಏರಬೇಕಾದ ಸ್ಥಿತಿ ಎದುರಾಗುತ್ತಿದೆ. ಆದರೆ ಕೋತಿಗಳು ಆಹಾರವಿಲ್ಲದೆ ಬಳಲುತ್ತಿರುವುದನ್ನು ನೋಡಿ ನಂದಿನಿ ಪಾರ್ಲರ್ ಮಾಲೀಕ ವೆಂಕಟಸ್ವಾಮಿ ತಮ್ಮ ಸ್ವಂತ ಹಣದಿಂದ ನಂದಿನಿ ಹಾಲಿನ ಪ್ಯಾಕೆಟ್ ಗಳನ್ನು ಕೋತಿಗಳಿಗೆ ನೀಡುತ್ತಿದ್ದಾರೆ.

ಇತ್ತೀಚಿಗೆ ಕೋತಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಂಟಿತವಾಗುತ್ತಿದೆ. ಬೆಟ್ಟ, ಕಾಡು ಎಲ್ಲಿ ನೋಡಿದರೂ ಯಥೇಚ್ಛವಾಗಿ ಸಿಗುತ್ತಿದ್ದ ಆಹಾರ ತಿಂದು, ಅರಣ್ಯದಲ್ಲಿಯೇ ಸಿಗುವ ನೀರು ಸೇವಿಸಿ, ಕಾಡಿನಲ್ಲಿಯೇ ವಾಸಿಸುತ್ತಿದ್ದ ಕೋತಿಗಳು, ಇದೀಗ ವಾತಾವರಣ ವೈಪರಿತ್ಯದಿಂದ ಅನಿವಾರ್ಯವಾಗಿ ಜನವಸತಿ ಪ್ರದೇಶಗಳತ್ತ ಮುಖ ಮಾಡಿವೆ. ಆದರೆ ಹಾಗೆ ಜನವಸತಿ ಪ್ರದೇಶಗಳಿಗೆ ಬಂದ ಮಂಗಗಳನ್ನು ಓಡಿಸಲು ಜನರು ಹಲವಾರು ಮಾರ್ಗಗಳತ್ತ ಮೊರೆಹೋದ ಪರಿಣಾಮ ಸಹಜವಾಗಿಯೇ ಮಂಗಗಳಲ್ಲಿಯೂ ಹಲವು ರೌಡಿ ಕೋತಿಗಳಾಗಿ ಪರಿವರ್ತನೆಯಾಗಿವೆ.

ಹಾಗೆ ರೌಡಿ ಕೋತಿಗಳು ಜನರ ಮೇಲೆ ಎರಗುತ್ತಿದ್ದು, ಅವು ಜನರನ್ನು ಗಾಯಗೊಳಿಸಿಯಾದರೂ ಆಹಾರ ಸಂಪಾನೆ ಮಾಡಿಕೊಳ್ಳುವತ್ತ ಮುನ್ನಡೆಯುತ್ತಿವೆ. ಇದರಿಂದ ಸಾಧು ಕೋತಿಗಳ ಬಗ್ಗೆಯ ಜನರು ಆತಂಕ ಪಡುವಂತಾಗಿದ್ದು, ಎಲ್ಲಾ ಕೋತಿಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿರುವ ಜನ ಮನೆಯ ಬಳಿ ಬರುವ ಕೋತಿಗಳನ್ನು ದೊಣ್ಣೆಯಿಂದಲೋ, ಇತರೆ ಆಯುಧಗಳನ್ನು ತೋರಿಯೋ ಬೆದರಿಸಿ ಓಡಿಸುತ್ತಿದ್ದಾರೆ.

ಇದರಿಂದ ಹಸಿವಿನಿಂದ ಬಳಲುತ್ತಿರುವ ಮಂಗಗಳು ಮರದ ಮೇಲೆ ಕುಳಿತು, ಕೆಳಗೆ ಇಳಿಯಲಾಗದೆ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತಾ ಜೀವಿಸುತ್ತಿವೆ. ಮಂಗನಿAದ ಮಾನವ ಎಂದು ಇತಿಹಾಸದ ಪುಟಗಳು ಹೇಳುತ್ತವೆ.ಆದರೆ ಕೋತಿಗಳ ಜೀವನ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಆಹಾರ ನೀರು ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿವೆ. ಪರಿಸರ ಎಷ್ಟು ಮುಖ್ಯವೋ ಅದರೊಂದಿಗೆ ಪ್ರಾಣಿ ಪಕ್ಷಿಗಳು ಅಷ್ಟೇ ಮುಖ್ಯ ಆದ್ದರಿಂದ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಪ್ರಾಣಿ ಸಂಕುಲವನ್ನು ಉಳಿಸಬೇಕಾಗಿದೆ.

About The Author

Leave a Reply

Your email address will not be published. Required fields are marked *