ಮೂಲ ವಾರಸುದಾರರಿಗೆ ಜಮೀನು ನೀಡಿದ ಅಧಿಕಾರಿಗಳು
1 min readಮೂಲ ವಾರಸುದಾರರಿಗೆ ಜಮೀನು ನೀಡಿದ ಅಧಿಕಾರಿಗಳು
ಜಿಲ್ಲಾಧಿಕಾರಿಗಳ ಆದೇಶದಿಂದ ಅಧಿಕಾರಿಗಳಿಂದ ಕರ್ತವ್ಯ
ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಸುಗ್ಗನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತಹಶೀಲ್ದಾರ್ ಬಿ ಆರತಿ ಅವರು ಮೂಲ ವಾರಸುದಾರರಿಗೆ ಜಮೀನು ಬಿಡಿಸಿಕೊಟ್ಟ ಘಟನೆ ನಡೆಯಿತು.
ಕಳೆದ ಅನೇಕ ವರ್ಷಗಳಿಂದ ಜಮೀನಿಗಾಗಿ ರೈತ ಬೆಟ್ಟಸ್ವಾಮಿ ಕುಟುಂಬ ಹೋರಾಟ ಮಾಡಿದ್ದು. ಬೇರೆಯವರ ಹೆಸರಿಗೆ ನೋಂದಣಿಯಾಗಿತ್ತು. ಹೀಗೆ ಆಗಿದ್ದ ನೋಂದಣಿಯನ್ನು ಅಸಿಂಧುಗೊಳಿಸಿ ಮೂಲ ವಾರಸುದಾರರಿಗೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಜಮೀನು ಅಳತೆ ಮಾಡಿ, ಬೆಟ್ಟಸ್ವಾಮಿ ಅವರಿಗೆ ನೀಡಲಾಯಿತು. ಮೂಲ ಜಮೀನಿನ ವಾರಸುದಾರ ಡಿಎಸ್‌ಎಸ್ ಮುಖಂಡ ಸಿಎಸ್ ಪುರ ಬೆಟ್ಟಸ್ವಾಮಿ ಮಾತನಾಡಿ, ಬಹಳ ವರ್ಷಗಳ ಹೋರಾಟದ ಲವಾಗಿ ಇಂದು ನ್ಯಾಯ ದೊರಕಿಸಿಕೊಟ್ಟ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಶಿವಮೊಗ್ಗ ಎಂ. ಗುರುಮೂರ್ತಿ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾರ ಶೆಟ್ಟಿಹಳ್ಳಿ ಬಸವರಾಜು, ಸಂಘಟನಾ ಸಂಚಾಲಕ ಜಿ ಅರಿವೇಸಂದ್ರ ಕೃಷ್ಣಪ್ಪ, ನರೇಂದ್ರ ಕುಮಾರ್, ಮಹಿಳಾ ಘಟಕದ ನಂದಿನಿ ರಮೇಶ್, ಜಗದೀಶ್ ಅಭಿಷೇಕ್ ಹಾಜರಿದ್ದರು.