ಒತ್ತಡ ಬದಿಗಿಟ್ಟು ಕ್ರೀಡೆಯಲ್ಲಿ ಭಾಗಿಯಾದ ಅಧಿಕಾರಿಗಳು
1 min readಒತ್ತಡ ಬದಿಗಿಟ್ಟು ಕ್ರೀಡೆಯಲ್ಲಿ ಭಾಗಿಯಾದ ಅಧಿಕಾರಿಗಳು
ಕಬ್ಬಡ್ಡಿ, ವಾಲಿಬಾಲ್‌ನಲ್ಲಿ ತೊಡೆತಟ್ಟಿ ನಿಂತ ಮಹಿಳಾ ಸಿಬ್ಬಂದಿ
ಸಿಕ್ಸರ್, ಬೌಂಡರಿ ಸಿಡಿಸಿ ಕುಣಿದಾಡಿದ ಸಿಬ್ಬಂದಿ
ನoಜನಗೂಡು ತಾಲೂಕು ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇಂದು ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭಮಿಸಿದರು. ಕಚೇರಿಯ ಎಲ್ಲ ಒತ್ತಡಗಳನ್ನು ಮರೆತು ಕ್ರೀಡೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ನಂಜನಗೂಡು ತಾಲೂಕು ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇಂದು ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭಮಿಸಿದರು. ಕಚೇರಿಯ ಎಲ್ಲ ಒತ್ತಡಗಳನ್ನು ಮರೆತು ಕ್ರೀಡೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟಕ್ಕೆ ಶಿವಕುಮಾರ್ ಕಾಸ್ನೂರ್ ಚಾಲನೆ ನೀಡಿದರು. ಪುರುಷರಿಗಾಗಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು.
ರೋಚಕ ಪಂದ್ಯದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಗೆಲುವು ಸಾಧಿಸಿದರು. ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಕಂದಾಯ ಇಲಾಖೆಯ ಮಹಿಳಾ ಸಿಬ್ಬಂದಿ ಭಾಗವಹಿಸಿ ಗಮನ ಸೆಳೆದರು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯದಲ್ಲಿ ಪುರುಷರನ್ನೂ ನಾಚಿಸುವಂತೆ ಉತ್ಸಾಹದಿಂದ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ಇನ್ನು ವಾಲಿಬಾಲ್ ಪಂದ್ಯದಲ್ಲಿ ವೇಗವಾದ ಸರ್ವ್ಗಳನ್ನ ಮಾಡುವ ಮೂಲಕ ತಮ್ಮಲ್ಲೂ ಕ್ರೀಡಾ ಪ್ರತಿಭೆ ಇದೆ ಎಂದು ನಿರೂಪಿಸಿದರು.
ಕೆಲಸದ ಒತ್ತಡಗಳನ್ನ ಬದಿಗಿಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡೆಗಳಿಗೆ ಸಾರ್ವಜನಿಕರೂ ಪ್ರೋತ್ಸಾಹ ನೀಡಿ ಹುರಿದುಂಬಿಸಿದರು. ಒಟ್ಟಾರೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನ ಪ್ರದರ್ಶಿಸಿದರು.