ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 28, 2024

Ctv News Kannada

Chikkaballapura

ಅನುಮತಿ ಪಡೆಯದೆ ಹಾಕಿದ್ದ ಫ್ಲೆಕ್ಸ್ ತೆರುವು ಮಾಡಿದ ಅಧಿಕಾರಿಗಳು

1 min read

ನಗರಸಭೆ ಅಧಿಕಾರಿಗಳಿಂದಲೇ ಅಧ್ಯಕ್ಷರ ಫ್ಲೆಕ್ಸ್ ತೆರುವು
ಅನುಮತಿ ಪಡೆಯದೆ ಹಾಕಿದ್ದ ಫ್ಲೆಕ್ಸ್ ತೆರುವು ಮಾಡಿದ ಅಧಿಕಾರಿಗಳು
ಪೊಲೀಸರು, ನಗರಸಭೆ ಅಧ್ಯಕ್ಷರ ನಡುವೆ ಮಾತಿನ ಚಕಮಕಿ

ಕನಕ ಜಯಂತಿ ಪ್ರಯುಕ್ತ ನಗರದ ಪ್ರಮುಖ ರಸ್ತೆಯಲ್ಲಿ ಹಾಕಿದ್ದ ಫ್ಲೆಕ್ಸ್ ವಿಚಾರ ಇಂದು ಕೆಲ ಕಾಲ ಉದ್ರಿಕ್ತ ಪರಿಸ್ಥಿತಿಗೆ ಕಾರಣವಾಯಿತು. ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಸಂಸದ ಡಾ.ಕೆ. ಸುಧಾಕರ್ ಅವರ ಭಾವಚಿತ್ರಗಳಿದ್ದ ಫ್ಲೆಕ್ಸ್ಗಳನ್ನು ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಹಾಕಲಾಗಿತ್ತು. ಈ ಫ್ಲೆಕ್ಸ್ ತೆರುವುಗೊಳಿಸಲು ನಗರಸಭೆ ಅಧಿಕಾರಿಗಳೇ ಮುಂದಾಗಿದ್ದು ಕುತೂಹಲಕ್ಕೆ ಕಾರಣವಾಯಿತು.

ಚಿಕ್ಕಬಳ್ಳಾಪುರ ನಗರದಲ್ಲಿ ಫ್ಲೆಕ್ಸ್ ರಾಜಕೀಯ ಹೊಸದೇನಲ್ಲಿ. ಆದರೆ ನಗರಸಭೆ ಅಧ್ಯಕ್ಷರ ಫ್ಲೆಕ್ಸ್ಗಳನ್ನು ನಗರಸಭೆ ಅಧಿಕಾರಿಗಳೇ ತೆರುವು ಮಾಡುವ ಮೂಲಕ ಹೊಸ ಭಾಷ್ಯ ಬರೆಯುವಲ್ಲಿ ಯಶಸ್ವಿಯಾಗಿದ್ದು ಇಂದಿನ ವಿಶೇಷವಾಗಿದೆ. ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಸಂಸದ ಡಾ.ಕೆ. ಸುಧಾಕರ್ ಅವರ ಭಾವಚಿತ್ರ ಇರುವ ಹತ್ತಾರು ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಆದರೆ ಬೆಳ್ಳಂಬೆಳಗ್ಗೆ ನಗರಸಭೆ ಅಧಿಕಾರಿಗಳು ಅವುಗಳನ್ನು ತೆರುವು ಮಾಡಲು ಮುಂದಾದರು.

ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಸೇರಿದಂತೆ ಇತರೆ ಅಧಿಕಾರಿಗಳು ತಮ್ಮದೇ ಫ್ಲೆಕ್ಸ್ ತೆರುವುಗೊಳಿಸಲು ಮುಂದಾಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಬಿಬಿ ರಸ್ತೆಗೆ ಆಗಮಿಸಿದ ನಗರಸಭೆ ಅಧ್ಯಕ್ಷರು, ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಆದರೆ ಜಿಲ್ಲಾಧಿಕಾರಿಗಳಿಂದಲೇ ಸ್ಪಷ್ಟ ಆದೇಶ ಬಂದಿರುವ ಕಾರಣ ತೆರುವು ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದರು. ಅಲ್ಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪೊಲೀಸರು ನಗರಸಭೆ ಅಧ್ಯಕ್ಷರನ್ನು ಫ್ಲೆಕ್ಸ್ ತೆರುವು ಅಡ್ಡಿಪಡಿಸದಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಕೇವಲ ತಮ್ಮ ಫ್ಲೆಕ್ಸ್ ಮಾತ್ರ ತೆರುವು ಮಾಡಲಾಗುತ್ತಿದೆ. ಶಾಸಕರ ಫ್ಲೆಕ್ಸ್ ತೆರುವು ಮಾಡುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷರು ಪೊಲೀಸರನ್ನು ಪ್ರಶ್ನಿಸಿದರು. ಆದರೆ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್ಗಳ ತೆರುವು ಮಾಡಲು ರತಕ್ಷಣೆಯನ್ನು ಅಧಿಕಾರಿಗಳು ಕೋರಿದ್ದು, ಅವರಿಗೆ ರಕ್ಷಣೆ ನೀಡಲು ಮಾತ್ರ ತಾವು ಬಂದಿರುವುದಾಗಿ ಫ್ಲೆಕ್ಸ್ ವಿಚಾರ ಏನೇ ಇದ್ದರೂ ತಮಗೆ ಸಂಬ0ಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದರಿಂದ ಅನಿವಾರ್ಯವಾಗಿ ನಗರಸಭೆ ಅಧ್ಯಕ್ಷರು ಮೌನ ವಹಿಸುವಂತಾಯಿತು.

ಇನ್ನು ನಗರಸಭೆ ಅಧ್ಯಕ್ಷ ಗದೇಂದ್ರ ಹಾಕಿದ್ದ ಫ್ಲೆಕ್ಸ್ಗಾಗಲೀ, ಶಾಸಕರ ಭಾವಚಿತ್ರ ಇರುವ ಫ್ಲೆಕ್ಸ್ಗಾಗಲೀ ನಗರಸಬೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಸ್ಪಷ್ಟಪಡಿಸಿದ್ದು, ಕೇವಲ ನವಗರಸಭೆ ಅಧ್ಯಕ್ಷರ ಫ್ಲೆಕ್ಸ್ ಮಾತ್ರ ತೆರುವು ಮಾಡಿ, ಇತರೆ ಫ್ಲೆಕ್ಸ್ಗಳನ್ನು ಯಾಕೆ ತೆರುವು ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದ್ದಾರೆ. ಒಟ್ಟಿನಲ್ಲಿ ಈವರೆಗೂ ಮುಖ್ಯರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಫ್ಲೆಕ್ಸ್ಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಧಿಕಾರಿಗಳ ಕ್ರಮ ಶ್ಲಾಘನೀಯವಾಗಿದೆ.

ಆದರೆ ಈ ಫ್ಲೆಕ್ಸ್ ತೆರುವು ಎಂಬುದು ಕೇವಲ ಒಂದು ಪಕ್ಷಕ್ಕೆ ಇಲ್ಲವೇ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರದೆ, ಪಕ್ಷಾತೀತವಾಗಿ ಎಲ್ಲರ ಫ್ಲೆಕ್ಸ್ಗಳನ್ನು ತೆರುವು ಮಾಡುವ ಮೂಲಕ ಹೊಸ ಸಂದೇಶ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ. ಇಲ್ಲವಾದರೆ ಈ ಫ್ಲೆಕ್ಸಾಸುರ ಹಾವಳಿ ಹೀಗೆ ಮುಂದುವರಿಯಲಿದೆ ಎಂಬುದರಲ್ಲಿ ಸಂಶಯವಿಲ್ಲ.

About The Author

Leave a Reply

Your email address will not be published. Required fields are marked *