ಪುರಾತನ ಹನುಮ ವಿಗ್ರಹ ತೆರುವು ಮಾಡಿದ ಅಧಿಕಾರಿಗಳು
1 min readಪುರಾತನ ಹನುಮ ವಿಗ್ರಹ ತೆರುವು ಮಾಡಿದ ಅಧಿಕಾರಿಗಳು
ರಸ್ತೆ ಅಗಲೀಕರಣದ ಹಿನ್ನೆಲೆ ಅಡ್ಡಿಯಾಗಿದ್ದ ವಿಗ್ರಹ
ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಪುರಾತನ ಆಂಜನೇಯಸ್ವಾಮಿ ವಿಗ್ರಹ ತೆರುವು ಕಾರ್ಯಾಚರಣೆ ಇಂದು ನಡೆಸಲಾಯಿತು. ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ವಿಗ್ರಹವನ್ನು ಕೈವಾರದ ಅಮರನಾರಾಯಣಸ್ವಾಮಿ ದೇವಾಲಯದಲ್ಲಿ ಇರಿಸಲಾಗಿದೆ.
ಕೈವಾರ ಕ್ರಾಸ್‌ನಲ್ಲಿದ್ದ ಪುರಾತನ ಆಂಜನೇಯಸ್ವಾಮಿ ವಿಗ್ರಹವನ್ನು ರಸ್ತೆ ಅಗಲಿಕರದ ಹಿನ್ನಲೆಯಲ್ಲಿ ತೆರುವುಗೊಳಿಸಲಾಯಿತು. ಸುಮಾರು ಶತಮಾನದಷ್ಟು ಹಿಂದೆ ಇಲ್ಲಿ ಈ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಈ ಪ್ರದೇಶದ ಜನರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಪೂಜೆ ಸಲ್ಲಿಸುತ್ತಿದ್ದರು. ಈ ಹಿಂದೆ ಇದ್ದ ರಸ್ತೆಯ ಪಕ್ಕದಲ್ಲಿದ್ದ ಆಂಜನೇಯ ವಿಗ್ರಹ ಇದೀಗ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಅಡ್ಡಿಯಾಗಿತ್ತು.
ಹಾಗಾಗಿ ಕೈವಾರ ಕ್ರಾಸ್ ಬಳಿ ಇದ್ದ ಪುರಾತನ ಕಾಲದ ಹನುಮಂತನ ವಿಗ್ರಹ ವನ್ನು ಲೋಕಾಪಯೋಗಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ ತೆರುವು ಮಾಡಲಾಯಿತು. ಸುಮಾರು ನೂರು ವರ್ಷಗಳ ಇತಿಹಾಸವಿರುವ ಪುರಾತನ ಹನುಮಂತನ ವಿಗ್ರಹಕ್ಕೆ ಈ ಭಾಗದ ಜನರು ಪೂಜೆ ಸಲ್ಲಿಸುತ್ತಿದ್ದರು. ಈಗ ರಸ್ತೆ ಅಗಲಿಕರಣ ಮಾಡುತ್ತಿರುವ ಹಿನ್ನಲೆ ವಿಗ್ರಹವನ್ನು ತೆರುವು ಮಾಡಲಾಗಿದೆ.
ತೆರುವು ಮಾಡಿದ ವಿಗ್ರಹವನ್ನು ಕೈವಾರ ಕ್ಷೇತ್ರದ ಅಮರಾನಾರಯಣ ಸ್ವಾಮಿ ದೇವಸ್ಥಾನಕ್ಕೆ ರವಾನಿಸಿದ್ದಾರೆ. ತೆರವು ಕಾರ್ಯಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.