ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂದೆ

1 min read

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂದೆ
ಜನಪ್ರತಿನಿಧಿಗಳ ಸ್ವಾರ್ಥಕ್ಕೆ ಬಡವರ ಕೆಲಸಗಳಿಗೆ ತಡೆ
ರಾಜ್ಯ ರೈತಸಂಘ, ಕರ್ನಾಟಕ ದಲಿತ ಸಂಘದಿ0ದ ಆಕ್ರೋಶ

ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಲ್ಲಿರುವ ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಪದೇ ಪದೇ ವರ್ಗಾವಣೆ ಮಾಡುವ ಮೂಲಕ ಬಡವರ ಕೆಲಸಗಳಿಗೆ ತಡೆಯೊಡ್ಡುವ ಕೆಲಸಕ್ಕೆ ಜನಪ್ರತಿನಿಧಿಗಳು ಮುಂದಾಗಿದ್ದು, ಕೂಡಲೇ ಈ ವ್ರಾಗವಣೆ ದಂದೆಯನ್ನು ಕೈಬಿಡದಿದ್ದರೆ ಅನಿರ್ಧಿಷ್ಠಾವಧಿ ಹೋರಾಟ ಹಮ್ಮಿಕೊಳ್ಳುವುದಾಗಿ ರೈತಸಂಘದ ಅಧ್ಯಕ್ಷ ಜಿಜೆ ಹಳ್ಳಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ರೈತಸಂಘ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ಜಿಜೆ ಹಳ್ಳಿ ನಾರಾಯಣಸ್ವಾಮಿ, ಜಿಲ್ಲೆಯಲ್ಲಿ ವರ್ಗಾವಣೆ ದಂದೆ ಆರಂಭವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡವರ ಕೆಲಸಗಳು ಪೂರ್ಣಗೊಳ್ಳದೆ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಎನಪ್ರತಿನಿಧಿಗಳು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ವರ್ಗಾವಣೆ ಮಾಡುವ ಕೆಲಸಕ್ಕೆ ಮುಂದಾಗಿರುವುದು ಕ್ಷಮಿಸಲಾರದ ಅಪರಾಧವಾಗಿದ್ದು, ಜನಪ್ರತಿನಿಧಿಗಳ ಇಂತಹ ಕ್ರಮ ಖಂಡಿಸಿ ದಲಿತ ಪರ, ರೈತಪರ ಸಂಘಟನೆಗಳಿ0ದ ಶೀಘ್ರದಲ್ಲಿಯೇ ಅನಿರ್ಧಿಷ್ಠಾವಧಿ ಭರಣಿ ಹಮ್ಮಿಕೊಳ್ಳಲಾಗುವುದು. ದಲಿತಪರ, ರೈತಪರ ಆಡಳಿತ ನೀಡುವುದಾಗಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಅಧಿಕಾರಿಗಳ ವರ್ಗಾವಣೆ ದಂದೆಯಲ್ಲಿ ತೊಡಗಿ ಬಡ ಜನರ ಕೆಲಸಗಳು ನಡೆಯದಂತೆ ಮಾಡುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಈ ವರ್ಗಾವಣೆ ದಂದೆಯಲ್ಲಿ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಿರತರಾಗಿದ್ದು, ಅವರ ಕಾನೂನು ಬಾಹಿರ ಸ್ವಂತ ಕೆಲಸಗಳು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅಧಿಕಾರಿಗಳನ್ನು ಇಷ್ಟ ಬಂದ ರೀತಿಯಲ್ಲಿ ವರ್ಗಾವಣೆ ಮಾಡುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ಅಧಿಕಾರಿ ಬರಲು ಭಯ ಪಡುವ ರೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಶಾಸಕರ ಬೆಂಬಲಿಗರ ಕೆಲಸ ಮಾಡಿಕೊಡದ ಯಾವುದೇ ಅಧಿಕಾರಿಯನ್ನು ಸರ್ಕಾರದ ಮೇಲೆ ಒತ್ತಡ ತಂದು ವರ್ಗಾವಣೆ ಮಾಡಿಸುವ ಮಟ್ಟಕ್ಕೆ ಶಾಸಕರ ಬೆಂಬಲಿಗರು ಮುಟ್ಟಿರುವುದು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಭಯಪಡುವಂತಾಗಿದೆ ಎಂದರು.

ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಅಶ್ವಿನ್ ಅವರನ್ನು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಲಾಗಿದೆ. ಅವರ ವರ್ಗಾವಣೆ ರದ್ದು ಕೋರಿ ಸೋಮವಾರ ಕಂದಾಯ ಸಚಿವರಿಗೆ ಮನವಿ ಮಾಡಲಾಗುವುದು. ಆಗಲೂ ಅವರ ವರ್ಗಾವಣೆ ರದ್ದು ಮಾಡದಿದ್ದರೆ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಭರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಅಧಿಕಾರಿಗಳು ತಾವು ಹೇಳಿದ ಕೆಲಸಗಳನ್ನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಜನಪ್ರತಿನಿದಿಗಳ ಮಾತು ಕೇಳದ ಕಾರಣಕ್ಕೆ ಎಸಿ ಅಶ್ವಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆಯೂ ಇದೇ ರೀತಿಯ ವರ್ಗಾವಣೆಗಳಾದಾಗ ತಮ್ಮ ಸಂಘಟನೆಯಿ0ದ ಹೋರಾಟಗಳನ್ನು ನಡೆಸಿದ್ದು, ಈಗಲೂ ಹೋರಾಟ ತೀವ್ರ ರೂಪದಲ್ಲಿ ನಡೆಸಲಾಗುತ್ತದೆ ಎಂದರು.

ಪದೇ ಪದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಿಂದ ಬಡವರ ಕೆಲಸಗಳು ಮುಂದಕ್ಕೆ ಹೋಗುವಂತಾಗಿದೆ. ಜನಪ್ರತಿನಿಧಿಗಳಾದವರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರೋದು ಖಂಡನೀಯ. ಸಾರ್ವಜನಿಕರ ಕೆಲಸಕ್ಕಿಂತ ಶಾಸಕರು, ಸಚಿವರ ಕೆಲಸವೆ ಇವರಿಗೆ ಮುಖ್ಯವಾಗಿದೆ. ಹಾಗೆ ಕೇಳದ ಅಧಿಕರಿಗಳನ್ನು ವರ್ಗಾವಣೆ ಮಾಡುವ, ತಮಗೆ ಇಷ್ಟ ಬಂದ ಅಧಿಕಾರಿಗಳು ತರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಬಡವರ ಕೆಲಸಗಳು ಮೂಲೆಗುಂಪಾಗುತ್ತಿದ್ದು, ಇಂತಹ ಕೃತ್ಯ ಖಂಡನೀಯ ಎಂದರು.

ಶಾಸಕರು, ಉಸ್ತುವಾರಿ ಸಚಿವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಎತ್ತಂಗಡಿ ಮಾಡುವುದು ಸರಿಯಲ್ಲ, ವರ್ಗಾವಣೆ ದಂದೆ ಬಿಟ್ಟು ಅಧಿಕಾರಿಗಳಿಂದ ಕೆಲಸ ಮಾಡಿಸಲು ಜನಪ್ರತಿನಿಧಿಗಳಾದವರು ಮುಂದಾಗಬೇಕು. ವರ್ಗಾವಣೆ ದಂದೆ ಹೀಗೇ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು. ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಹಣವನ್ನು ತಮ್ಮ ಇಷ್ಟ ಬಂದ ರೀತಿಯಲ್ಲಿ ಗ್ಯಾರೆಂಟಿಗಳಿಗೆ ಬಳಸುತ್ತಿದ್ದು, ಇದನ್ನು ಖಂಡಿಸಿ ಪ್ರತಿಭಟನೆ ನಡೆಸದೆ, ಸರ್ಕಾರದೊಂದಿಗೆ ಕೆಲ ದಲಿತ ನಾಯಕರು ಶಾಮೀಲಾಗಿರುವ ಕಾರಣ ಹೋರಾಟಗಳು ನಡೆಯುತ್ತಿಲ್ಲ. ಆದರೆ ನಾವು ಈ ಸಂಬ0ಧ ಹೋರಾಟ ನಡೆಸಲು ಮುಂದಾಗುವುದಾಗಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ನಾರಾಯಣಸ್ವಾಮಿ, ಮಂಜುನಾಥ್ ಸೇರಿದಂತೆ ಇತರರು ಇದ್ದರು.

About The Author

Leave a Reply

Your email address will not be published. Required fields are marked *