ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಗಣಪತಿ ಪ್ರತಿಷ್ಠಾಪನೆಗೆ ನಿಯಮ ಪಾಲನೆ ಕಡ್ಡಾಯ

1 min read

ಗಣಪತಿ ಪ್ರತಿಷ್ಠಾಪನೆಗೆ ನಿಯಮ ಪಾಲನೆ ಕಡ್ಡಾಯ

ಜಾಗೃತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ನಿಯಮ ಉಲ್ಲಂಘಿಸದ0ತೆ ಸಾರ್ವಜನಿಕರಿಗೆ ಮನವಿ

ಗಣೇಶ ಹಬ್ಬ ಬಂದ್ರೆ ತಮ್ಮ ಏರಿಯಾಗಳಲ್ಲಿ ಯಾವ ರೀತಿ ಗಣಪತಿ ಪ್ರತಿಷ್ಠಾಪಿಸಬೇಕು ಎಂಬ ಉತ್ಸಾಹ ಎಲ್ಲರಲ್ಲಿಯೂ ಇರುತ್ತೆ ಆದರೆ ಇದಕ್ಕೆಲ್ಲಾ ಸರ್ಕಾರ ಕೆಲವು ನಿಯಮಗಳನ್ನು ಹೊರಡಿಸಿದ್ದು ಅದರಂತೆ ಇಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಮಟ್ಟದ ಶಾಂತಿ ಸಭೆಯನ್ನು ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಹೌದು, ಚಿಕ್ಕಬಳ್ಳಾಪುರ ನಗರದ ಪೊಲೀಸ್ ಭವನದಲ್ಲಿ ಇಂದು ಎಸ್ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಜಿಲ್ಲಾಮಟ್ಟದ ಸಾರ್ವಜನಿಕರ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು. ಗಣೇಶೋತ್ಸವದ ಸಂದರ್ಭದಲ್ಲಿ ಎಲ್ಲರೂ ಕಾನೂನು ಮತ್ತು ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದ್ದಾ ರೆ. ಗಣೇಶನ ವಿಸರ್ಜನೆಗಾಗಿ ನಿಗಧಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜನೆ ಮಾಡಬೇಕು, ಮತ್ತು ಎಲ್ಲಾ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿದ್ದು ಹಬ್ಬವನ್ನು ಆಚರಿಸುವಾಗ, ಸ್ಥಳೀಯ ಸಂಸ್ಥೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಪರ್ಮಿಷನ್ ಕಡ್ಡಾಯವಾಗಿದೆ ಎಂದು ತಿಳಿಸಿದರು.

ವಿದ್ಯುತ್ ತಂತಿಗಳು ಮತ್ತು ಇತರ ಸೌಲಭ್ಯಗಳ ಬಗ್ಗೆ ವಿಶೇಷ ಪರಿಶೀಲನೆ ನಡೆಸಿ, ಅವುಗಳ ಸುರಕ್ಷತೆ ಖಚಿತಪಡಿಸಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಏಕ ಗವಾಕ್ಷಿ ಯೋಜನೆಯಡಿ ಇವೆಲ್ಲಾ ಅನುಮತಿಗಳನ್ನು ನೀಡಲಾಗುತ್ತಿದ್ದು, ಗಣೇಶೋತ್ಸವ ಕಾರ್ಯಕ್ರಮಗಳ ಪಟ್ಟಿ ಮತ್ತು ಕಾರ್ಯಕ್ರಮದ ವಿವರಗಳನ್ನು ಸರಿಯಾಗಿ ಸಲ್ಲಿಸಬೇಕು. ಎಲ್ಲಾಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿಯುತವಾಗಿರಬೇಕು, ಮತ್ತು ಅಶ್ಲೀಲ ನೃತ್ಯಗಳನ್ನು ನಿರ್ಬಂಧಿಸಲಾಗಿದ್ದು ಜನಸಾಮಾನ್ಯರಿಗೆ ಹಾನಿ ಉಂಟಾಗದಅತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಯಿತು.

ಮೆರವಣಿಗೆಯ ಸಮಯದಲ್ಲಿ ಯಾವುದೇ ರೀತಿಯ ಡಿಜೆ ಅಥವಾ ಲೌಡ್ ಸ್ಪೀರ್ಕ ಬಳಸಬಾರದು, ಈ ನಿಯಮವನ್ನು ಉಲ್ಲಂಘಿಸಿದರೆ ಅದನ್ನು ಜಪ್ತಿ ಮಾಡಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆಗಳನ್ನು ಕೆರಳಿಸುವಂತಹ ಯಾವುದೇ ರೀತಿಯ ಪ್ರಚಾರವನ್ನು ಮಾಡಬಾರದು. ಈ ನಿಯಮಗಳನ್ನು ಪಾಲಿಸುವುದರ ಮೂಲಕ ಹಬ್ಬವನ್ನು ಹರ್ಷೋದ್ಗಾರದಿಂದ ಮತ್ತು ಶಾಂತಿಯುತವಾಗಿ ಆಚರಿಸಿದರೆ ಅಂತಹವರಿಗೆ ಬೆಸ್ಟ್ ಆರ್ಗನೈರ್ಸ ಪ್ರಶಸ್ತಿ ನೀಡಲಾಗುವುದೆಂದು ಶಾಂತಿ ಸಭೆಯಲ್ಲಿ ತಿಳಿಸಿದರು.

ಒಟ್ಟಾರೆ ಚಿಕ್ಕಬಳ್ಳಾಪುರ ಜಿಲ್ಲೆಯಾಧ್ಯಂತ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಾಕಷ್ಟು ಮುತವರ್ಜಿ ನಡೆಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

About The Author

Leave a Reply

Your email address will not be published. Required fields are marked *