ನ.೧೧ ಒಕ್ಕಲಿಗರ ಕಲ್ಯಾಣ ಮಂಪದಲ್ಲಿ ಒನಕೆ ಓಬವ್ವ ಜಯಂತಿ.
1 min read
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡ ಜಿ.ಸಿ.ವೆಂಕಟರೋಣಪ್ಪ
ವೀರವನಿತೆ ಒನಕೆ ಓಬವ್ವ ೧೮ ನೇ ಶತಮಾನದಲ್ಲಿ ಜೀವಿಸಿದ್ದು ಚಿತ್ರದುರ್ಗದ ಕೋಟೆಯನ್ನು ಕಾವಲು ಕಾಯುವ ಕಾಯಕ ಮಾಡುತ್ತಿದ್ದ ದಿಟ್ಟ ಮಹಿಳೆಯಾಗಿದ್ದರು. ಹೈದರಾಲಿ ಸೈನಿಕರನ್ನು ಸದೆಬಡಿದು ಕೋಟೆಯನ್ನು ಉಳಿಸುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವೀರವನಿತೆಯಾಗಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇವರ ಬದುಕು ಭಾರತೀಯ ಮಹಿಳೆಯರಿಗೆ ಆದರ್ಶವಾಗಿದೆ. ಇಂತಹ ವೀರವನಿತೆಯ ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡಲು ಸರಕಾರ ಮುಂದಾಗಿರುವುದಕ್ಕೆ ಸಮಿತಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನವೆಂಬರ್ ೧೧ ರಂದು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯುವ ಜಯಂತಿ ಹಲವು ವಿಶೇಷಗಳನ್ನು ಹೊಂದಿದೆ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು ಸಚಿವರು ಸೇರಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗಿಯಾಗಲಿದ್ದು ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಎಲ್ಲಾ ಸಮುದಾಯದ ೪೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ವೀರವನಿತೆ ಒನಕೆ ಓಬವ್ವ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಂ.ಸುಮಿತ್ರ ಭಾಗಿಯಾಗುವರು ಎಂದು ತಿಳಿಸಿದರು.