ಚಿಕ್ಕಬಳ್ಳಾಪುರ ಪೊಲೀಸರಿಂದ ನಟೋರಿಯಸ್ ಕಿಡ್ನಾಪರ್ಸ್ ಅರೆಸ್ಟ್
1 min readಚಿಕ್ಕಬಳ್ಳಾಪುರ ಪೊಲೀಸರಿಂದ ನಟೋರಿಯಸ್ ಕಿಡ್ನಾಪರ್ಸ್ ಅರೆಸ್ಟ್
80 ಲಕ್ಷ ವಸೂಲಿ ಮಾಡಿದ್ದ ಕುಖ್ಯಾತ ಕಿಡ್ನಾಪರ್ ಎಡೆಮುರಿ ಕಟ್ಟಿದ ಪೋಲಿಸರು
ಚಿಕ್ಕಬಳ್ಳಾಪುರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ನಟೋರಿಯಸ್ ಕಿಡ್ನಾಪರ್ಸ್ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರೆ. ನಟೋರಿಯಸ್ ಕಿಡ್ನಾಪರ್ ಲೋಹಿತ್ ಅಲಿಯಾಸ್ ರೋಹಿತ್ ಗ್ಯಾಂಗ್ ನ ಪ್ರವೀಣ್ ಅಲಿಯಾಸ್ ನೇಪಾಳಿ, ಸಂತೋಷ್, ವೆಂಕಟೇಶ್, ಭರತ್ ನಾಯಕ್, ಪ್ರಸನ್ನ ಹಾಗೂ ಚಿಕ್ಕಬಳ್ಳಾಪುರ ನಗರದ ಬರ್ಕತ್ ಬಂಧಿಸಿದ್ದರೆ.
ಚಿಕ್ಕಬಳ್ಳಾಪುರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ನಟೋರಿಯಸ್ ಕಿಡ್ನಾಪರ್ಸ್ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರೆ. ನಟೋರಿಯಸ್ ಕಿಡ್ನಾಪರ್ ಲೋಹಿತ್ ಅಲಿಯಾಸ್ ರೋಹಿತ್ ಗ್ಯಾಂಗ್ ನ ಪ್ರವೀಣ್ ಅಲಿಯಾಸ್ ನೇಪಾಳಿ, ಸಂತೋಷ್, ವೆಂಕಟೇಶ್, ಭರತ್ ನಾಯಕ್, ಪ್ರಸನ್ನ ಹಾಗೂ ಚಿಕ್ಕಬಳ್ಳಾಪುರ ನಗರದ ಬರ್ಕತ್ ಬಂಧಿಸಿದ್ದರೆ. ಚಿಕ್ಕಬಳ್ಳಾಪುರ ನಗರದ ಕಾಂಗ್ರೆಸ್ ಮುಖಂಡ ಸಮೀವುಲ್ಲಾ ಆಲಿಯಾಸ್ ಸಮ್ಮು ಎಂಬಾತನನ್ನ ಕಿಡ್ನಾಪ್ ಮಾಡಿ 18 ಲಕ್ಷ ವಸೂಲಿ ಮಾಡಿದ್ದರು.
ಈ ಅಪಹರಣದ ನಂತರ ಕುಡುವತಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ನವೀನ್ ಎಂಬುವರನ್ನ ಕಿಡ್ನಾಪ್ ಮಾಡಿ ಬರೋಬ್ಬರಿ 60 ಲಕ್ಷ ವಸೂಲಿ ಮಾಡಿ ಬಿಟ್ಟು ಕಳುಹಿಸಿದ್ದಾರೆ. ಎರಡು ಪ್ರಕರಣ ಸಂಬಂಧ ಎಸ್ಪಿ ಕುಶಾಲ್ ಚೌಕ್ಸೆ, ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಕಳೆದ ಸುಮಾರು 20 ದಿನಗಳಿಂದ ಕಿಡ್ನಾಪರ್ಸ್ ಗೆ ಬಲೆ ಬೀಸಿದ್ದ ಪೊಲೀಸರು ಹರಸಹಾಸ ಪಟ್ಟು ಸಿನಿಮೀಯ ಶೈಲಿಯಲ್ಲಿ ಎಲ್ಲರನ್ನೂ ಬಂಧಿಸಿದ್ದರೆ. ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್ ಮುಖ್ಯಸ್ಥ ಲೋಹಿತ್ ಆಲಿಯಾಸ್ ರೋಹಿತ್ ಈ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಮೇಲೆ ಆಟ್ಯಾಕ್ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣದ ಪ್ರಮುಖ ರೂವಾರಿಯಾಗಿದ್ದನೆ. ಸ್ಥಳೀಯವಾಗಿ ಚಿಕಿತ್ಸೆಯ ಬರ್ಕತ್ ಸಮೀವುಲ್ಲಾ ಹಾಗೂ ನವೀನ್ ಮಾಹಿತಿ ಹಂಚಿಕೊಂಡು ಕಿಡ್ನಾಫಿಂಗ್ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.