ಫುಟ್‌ಪಾತ್ ಒತ್ತುವರಿ ಸ್ವಯಂ ತೆರವುಗೊಳಿಸಲು ಸೂಚನೆ
1 min readಫುಟ್‌ಪಾತ್ ಒತ್ತುವರಿ ಸ್ವಯಂ ತೆರವುಗೊಳಿಸಲು ಸೂಚನೆ
ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಮೂರು ದಿನ ಕಾಲವಕಾಶ
ನಗರಸಭೆ ಆಯುಕ್ತರಿಂದ ಫುಟ್‌ಪಾತ್ ವ್ಯಾಪಾರಿಗಳಿಗೆ ಎಚ್ಚರಿಕೆ
ಚಿಂತಾಮಣಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ರಸ್ತೆಗಳ ಒತ್ತುವರಿ, ಫುಟ್‌ಪಾತ್ ಒತ್ತುರಿ ತೆರವುಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪೌರಾಯುಕ್ತ ಜಿ.ಎನ್. ಚಲಪತಿ ಹೇಳಿದರು.
ಚಿಂತಾಮಣಿ ನಗರದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ಅಂಗಡಿಗಳಿಗೆ ಭೇಟಿ ನೀಡಿ, ವ್ಯಾಪಾರಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಅಲ್ಲದೆ ಈ ವೇಳೆ ಮಾತನಾಡಿ,ಇತ್ತೀಚೆಗೆ ನಗರದಲ್ಲಿ ಬೈಕ್ ಅಪಘಾತದಲ್ಲಿ ದಂಪತಿಗಳು ರಸ್ತೆಯ ಮೃತಪಟ್ಟಿದ್ದರು. ಒತ್ತುವರಿಯಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗಿದೆ. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಹಿನ್ನಲೆಯಲ್ಲಿ ಒತ್ತುವರಿದಾರರಿಗೆ ಸ್ವಯಂ ತೆರವುಗೊಳಿಸಲು ೩ ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ನಗರಸಭೆಯಿಂದ ದಂಡ ವಿಧಿಸಿ ತೆರವುಗೊಳಿಸಲಾಗುವುದು ಹಾಗೂ ಮೊಕದ್ದಮೆ ಹೂಡಲಾಗುವುದು ಎಂದರು.
ಫುಟ್‌ಪಾತ್ ಒತ್ತುವರಿ ತೆರುವು ಮಾಡುವ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಸುಳ್ಳು ಆರೋಪ ಮಾಡುವುದು ಬೇಡ.ಯಾರ ಹೊಟ್ಟೆ ಮೇಲೆ ಒಡೆಯುವುದು ನಮ್ಮ ಉಸವಲ್ಲ. ಅಪಘಾತಗಳನ್ನು ತಡೆಯಲು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಒತ್ತುವರಿದಾರರಿಗೆ ತಿಳಿ ಹೇಳಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ನಗರದಲ್ಲಿಟ್ ಪಾತ್ ಒತ್ತುವರಿ ತೆರುವು, ವೃತ್ತಗಳ ಅಗಲೀಕರಣ, ದೀಪಾಲಂಕಾರ ಮತ್ತು ಸೌಂದರ್ಯೀಕರಣ ಮಾಡಲು ಕೋಟ್ಯಂತರ ರೂ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ ಎಂದರು.
ಓಟಿ ಕೆರೆಯಿಂದ ಪಿಸಿಆರ್ ಕಾಂಪ್ಲೆಕ್ಸ್ ವರೆಗೂ, ಬೆಂಗಳೂರು ವೃತ್ತ, ಕೋಲಾರ ವೃತ್ತ, ವಾಲ್ಮೀಕಿ ವೃತ್ತ ಅಜಾದ್ ಚೌಕದ ಅಭಿವೃದ್ಧಿಗೆ ನಗರಸಭೆ ಕ್ರಮಕೈಗೊಂಡಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಒಟ್ಟಾಗಿ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.