ಸಹಾನುಭೂತಿಯಿಂದ ಏನೂ ದೊರೆಯುವುದಿಲ್ಲ
1 min readಸಹಾನುಭೂತಿಯಿಂದ ಏನೂ ದೊರೆಯುವುದಿಲ್ಲ
ಪರಣಭೂತಿಯಿಂದ ಮಾತ್ರ ದೊರೆಯಲು ಸಾಧ್ಯ
ಬಜಪನ್ ಬಚಾವೋ ಬೇಟಿ ಸಂಸ್ಥೆ ಸಂಯೋಜಕ ಅಭಿಮತ
ಅಂಗವೈಖಲ್ಯವಿರುವ ಮಕ್ಕಳ ಕೀಳರಿಮೆ ಭಾವನೆ ದೂರ ಮಾಡಿ, ಸಂತೋಷದಿ0ದ ಉತ್ಸಾಹಿಗಳಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಜಪನ್ ಬಚಾವೋ ಬೇಟಿ ಸಂಸ್ಥೆಯ ರಾಜ್ಯ ಸಂಯೋಜಕ ಬಿನು ವರ್ಗೀಸ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇನರ ದಿನಾಚರಣೆ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಬಜಪನ್ ಬಚಾವೋ ಭೇಟಿ ಸಂಸ್ಥೆಯ ರಾಜ್ಯ ಸಂಯೋಜಕ ಬಿನು ವರ್ಗೀಸ್, ನಿಮ್ಮಲ್ಲಿರುವ ಪ್ರತಿಭೆ ಹೊರಗೆಳೆಯಲು, ಆತ್ಮಾಭಿಮಾನದಿಂದ ಕೂಡಿದ ಸ್ಪರ್ಧಾ ಮನೋಭಾವ ವ್ಯಕ್ತ ಪಡಿಸಲು ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಬಾಲ್ಯವಿವಾಹ ವಿಶ್ವದ¯್ಲೆ ನಡೆಯದಂತೆ ಜವಬ್ದಾರಿ ತೆಗೆದುಕೊಳ್ಳಬೇಕು. ಬಾಲ್ಯ ವಿವಾಹ ಪ್ರಕರಣ ಕಂಡು ಬಂದರೇ ಕೂಡಲೇ ತಡೆಯಬೇಕು. ಸಹಾನುಭೂತಿಯಿಂದ ವಿಶೇಷವಾಗಿ ಏನು ದೊರೆಯುವುದಿಲ್ಲ, ಆದರೆ ಪರಾನುಭೂತಿಯಿಂದ ಎಲ್ಲವೂ ಲಭ್ಯ ಎಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಮಾತನಾಡಿ, ಎಲ್ಲರೂ ಸಂತೋಷದಿ0ದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಅಂಗವಿಕಲರು ಯಾವುದೇ ಸಂಕಷ್ಟಗಳನ್ನು ನಮ್ಮ ಗಮನಕ್ಕೆ ತಂದರೆ, ಸಾಧ್ಯವಾದಷ್ಟು ಸಹಾಯಹಸ್ತ ನೀಡಲಾಗುತ್ತದೆ. ಸಮುದಾಯದಲ್ಲಿ ವಿಕಲಚೇತನರ ಸ್ಥಾನದಲ್ಲಿ ನಾವು ಇದ್ದು, ಆಲೋಚನೆ ಮಾಡಿದರೆ ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. ಈ ವೇಳೆ ಬಿನು ವರ್ಗೀಸ್, ಜಗದೀಶ್, ರಿಯಾಜ್, ನಾರಾಯಣಸ್ವಾಮಿ, ಕೆ.ಎನ್ ಮೂರ್ತಿ, ಎನ್. ಶ್ರೀಧರ್, ಅರುಣ್ ಕುಮಾರ್, ಆಶಾ, ಸೌಮ್ಯ ಇದ್ದರು.