ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಜಿಲ್ಲಾ ಕೇಂದ್ರದಲ್ಲಿ ಆರಂಭವಾಯಿತು ನಾಮಕರಣ ಬೇಡಿಕೆ!

1 min read

ಜಿಲ್ಲಾ ಕೇಂದ್ರದಲ್ಲಿ ಆರಂಭವಾಯಿತು ನಾಮಕರಣ ಬೇಡಿಕೆ!

ಬಸ್ ನಿಲ್ದಾಣ, ಪ್ರಮುಖ ರಸ್ತೆಗಳು, ಕಲಾ ಭವನಕ್ಕೆ ಹೆಸರಿಡಲು ಬೇಡಿಕೆ

ಪುತ್ಥಳಿ ನಿರ್ಮಾಣ, ರಸ್ತೆಗೆ ಹೆಸರಿಡಲು ವಿವಿಧ ಸಂಘಗಳಿ0ದ ಮನವಿ

ಚಿಕ್ಕಬಳ್ಲಾಪುರ ಜಿಲ್ಲಾಕೇಂದ್ರವಾಗಿ ಬದಲಾಗಿ 16 ವರ್ಷಗಳು ಕಳೆದಿವೆ. ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಲ್ಲಿ ಇಂದಿಗೂ ಮಹನೀಯರ ಹೆಸರುಗನ್ನು ರಸ್ತೆಗಳಿಗೆ, ಪ್ರಮುಖ ಕಟ್ಟಡಗಳಿಗೆ ಇಡಲು ಈವರೆಗೂ ಸಾಧ್ಯವಾಗಿಲ್ಲ. ಆದರೆ ಇದೀಗ ನಾಮಕರಣ ಬೇಡಿಕೆ ಹೆಚ್ಚಾಗಿದ್ದು, ಹಲವರ ಹೆಸರುಗಳನ್ನು ಸೂಚಿಸಿ ಮನವಿ ಸಲ್ಲಿಸಲಾಗುತ್ತಿದೆ.

ಹೌದು, ಚಿಕ್ಕಬಳ್ಳಾಪುರ ನಗರದಲ್ಲಿರುವ ಎರಡು ಪ್ರಮುಖ ರಸ್ತೆಗಳಿಗೆ ತನ್ನದೇ ಆದ ಸ್ವಂತ ಹೆಸರುಗಳಿಲ್ಲ ಎಂಬುದು ಸತ್ಯ. ಒಂದು ಬಿಬಿ ರಸ್ತೆಯಾದರೆ ಮತ್ತೊಂದು ಎಂಜಿ ರಸ್ತೆ. ಬಿಬಿ ರಸ್ತೆ ಎಂದರೆ ಬೆಂಗಳೂರು, ಬಳ್ಳಾರು ರಸ್ತೆಯಾದರೆ, ಎಂಜು ರಸ್ತೆ ಎಂದರೆ ಮಹಾತ್ಮ ಗಾಂಧಿ ರಸ್ತೆಯಲ್ಲ. ಮುಳಬಾಗಲು, ಗೌರಿಬಿದನೂರು ರಸ್ತೆ. ಇಂತಹ ಪ್ರಮುಖ ರಸ್ತೆಗಳಿಗೆ ಮಹನೀಯರ ಹೆಸರು ನಾಮಕರಣ ಮಾಡಲು ಈವರೆಗೂ ಯಾವುದೇ ನಾಯಕರು ಮುಂದಾಗಿಲ್ಲ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಕಲಾ ಭವನ ಹೀಗೆ ಹಲವು ಕಟ್ಟಡಗಳೂ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿದ್ದು, ಇವುಗಳಿಗೂ ಈವರೆಗೆ ಹೆಸರಿಡುವಲ್ಲಿ ಸಂಬAಧಿಸಿದವರು ಗಮನ ಹರಿಸಿದ ಉದಾಹರಣೆ ಇಲ್ಲ. ಇಂದು ರಾಜ್ಯ ಸಮಗ್ರ ಬಲಿಜ ವೇದಿಕೆಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಜಿಲ್ಲಾಕೇಂದ್ರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶ್ರೀ ಯೋಗಿ ನಾರೇಯಣ ಯತೀಂದ್ರರ ಹೆಸರಿಡುವಂತೆ ಮನವಿ ಮಾಡಲಾಯಿತು.

ಚಿಕ್ಕಬಳ್ಳಾಪುರ ತಾಲೂಕಿನ ಭೋಗ ನಂದೀಶ್ವರ ದೇವಾಲಯ, ಮರಳು ಸಿದ್ಧೇಶ್ವರ ದೇವಾಲಯಗಳ ಬಗ್ಗೆಯೂ ಯೋಗಿ ನಾರೇಯಣ ಯತೀಂದ್ರರು ತಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದು, ಕೈವಾರ ತಾತಯ್ಯನವರು ವರ ಕವಿಗಳಾಗಿ, ಕಾಲನಿಗಳಾಗಿ ಪ್ರಖ್ಯಾತಿ ಪಡೆದಿದ್ದಾರೆ. ಇಂತಹ ಮಹನೀಯರ ಹೆಸರು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವುದರಿಂದ ಜಿಲ್ಲಾಕೇಂದ್ರದ ಖ್ಯಾತಿ ಮತ್ತಷ್ಟು ಹೆಚ್ಚಲಿದೆ ಎಂದು ಸಮಗ್ರ ಬಲಿಜ ವೇದಿಕೆಯ ರಾಜ್ಯಾಧ್ಯಕ್ಷ ಮುನಿಕೃಷ್ಣಪ್ಪ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ಮನವಿ ಮಾಡಿದ್ದಾರೆ.

ಅಲ್ಲದೆ ಜಿಲ್ಲಾ ಕೇಂದ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಂಭೀರವಾಗಿ ಚಿಂತನೆ ಮಾಡಿ, ಕೂಡಲೇ ಬಸ್ ನಿಲ್ದಾಣಕ್ಕೆ ಯೋಗಿ ನಾರೇಯಣ ಯತೀಂದ್ರರ ಹೆಸರು ನಾಮಕರಣ ಮಾಡಲು ಕೋರಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು, ಒಂದು ತಿಂಗಳಿನಲ್ಲಿ ತೀರ್ಮಾನ ತಿಳಿಸುವ ಭರವಸೆ ನೀಡಿದ್ದಾರೆ.

ಇನ್ನು ಡೀವೈಎಸ್‌ಪಿ ವೃತ್ತಕ್ಕೆ ಕನಕದಾಸರ ವೃತ್ತ ಎಂದು ಹೆಸರಿಟ್ಟು, ಅಲ್ಲಿ ಕನಕ ದಾಸರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಕೋರಿ 27ನೇ ವಾರ್ಡಿನ ನಗರಸಭೆ ಸದಸ್ಯೆ ನೇತ್ರಾವತಿ ಮನವಿ ಮಾಡಿದ್ದಾರೆ. ಅಲ್ಲದೆ ಅಂಬೇಡ್ಕರ್ ಭವನ ಇರುವ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ಹೆಸರಿಡುವ ಜೊತೆಗೆ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಸಿ.ವಿ. ವೆಂಕಟರಾಯಪ್ಪ, ಮಾಜಿ ಸಚಿವೆ ರೇಣುಕಾ ರಾಜೇಂದ್ರನ್, ಬಾಲ ಗಂಗಾಧರ ನಾಥ ಸ್ವಾಮೀಜಿ ಸೇರಿದಂತೆ ಪ್ರಮುಖರ ಹೆಸರುಗಳನ್ನು ಇಡುವ ಮೂಲಕ ಮಹನೀಯರ ಸ್ಮರಣೆ ನಿರಂತರವಾಗಿರಲು ಸಹಕರಿಸುವಂತೆ ಕೋರಿ ನಗರಸಭೆಗೆ ನೇತ್ರಾವತಿಯವರು ಮನವಿ ಸಲ್ಲಿಸಿದ್ದಾರೆ.

ಎಂಜಿ ರಸ್ತೆ ನಗರದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಗೆ ಬಾಲಗಂಗಾಧರ ನಾಥ ಸ್ವಾಮೀಜಿಯವರು ಹೆಸರಿಟ್ಟಲ್ಲಿ ಅವರ ಹೆಸರು ನಗರದಲ್ಲಿ ಅಜರಾಮರವಾಗಲಿದೆ. ಅಲ್ಲದೆ ಬಿಬಿ ರಸ್ತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿಟ್ಟಲ್ಲಿ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹಾಗಾಗಿ ಪ್ರಮುಖರ ಹೆಸರುಗಳನ್ನು ರಸ್ತೆಗೆ ಇಡುವ ಜೊತೆಗೆ ಅವಕಾಶ ಇರುವ ಕಡೆಗಳಲ್ಲಿ ಗಣ್ಯರ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ನಗರಸಭೆ ಮಾಡಬೇಕೆಂದು ಅವರು ಕೋರಿದ್ದಾರೆ.

ಇನ್ನು ಬಲಿಜ ಜಾಗೃತಿ ವೇದಿಕೆಯಿಂದ ನಗರಸಭೆಗೆ ಮತ್ತೊಂದು ಬೇಡಿಕೆಯನ್ನೂ ಸಲ್ಲಿಸಲಾಗಿದೆ. ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಯೋಗಿ ನಾರೇಯಣ ಯತೀಂದ್ರರ ದೇವಾಲಯ ಇದ್ದು, ಈ ರಸ್ತೆಗೆ ಯೋಗಿ ನಾರೇಯಣ ಯತೀಂದ್ರರ ರಸ್ತೆ ಎಂದು ಹೆಸರಿಡುವಂತೆ ಕೋರಿದ್ದಾರೆ. ಬಲಿಜ ಜಾಗೃತಿ ವೇದಿಕೆಯ ಮಂಜುನಾಥ್ ಅವರು ನಗರಸಭೆಗೆ ಮನವಿ ಸಲ್ಲಿಸಿದ್ದು, ಜಿಲ್ಲಾಸ್ಪತ್ರೆ ರಸ್ತೆಯನ್ನು ಯೋಗಿ ನಾರೇಯಣ ಯತೀಂದ್ರರ ರಸ್ತೆ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಚಿಕ್ಕಬಳ್ಳಾಪುರದ ನಾಗರಿಕರು ಈಗ ಎಚ್ಚೆತ್ತುಕೊಂಡಿದ್ದು, ಪ್ರಮುಖರ ಪುತ್ಥಳಿಗಳನ್ನು ಸ್ಥಾಪಿಸುವ ಮತ್ತು ಪ್ರಮುಖ ರಸ್ತೆಗಳು, ಕಟ್ಟಡಗಳಿಗೆ ಪ್ರಮುಖರ ಹೆಸರು ನಾಮಕರಣ ಮಾಡುವ ಕುರಿತು ಮನವಿ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿಯ ಕ್ರಮ ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *