ನಟ ದರ್ಶನ್ ಪ್ರಕರಣದ ಬಗ್ಗೆ ಯಾರೂ ಮಾತನಾಡಬೇಡಿ: ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
1 min readರೇಣುಕಸ್ವಾಮಿ ಪ್ರಕರಣದ ಬಗ್ಗೆ ಯಾರೂ ಕೂಡ ಮಾತನಾಡಬಾರದು ಕಾನೂನು ಅದರ ಕೆಲಸ ಮಾಡುತ್ತದೆ, ಯಾರು ಆದ್ರೂ ಪ್ರಕರಣ ಸಂಬಂಧ ಒಂದೇ ಒಂದು ಹೇಳಿದ್ದರು ಕೂಡ ಅದರ ಪರಿಣಾಮ ಸರಿಯಾಗಿ ಇರೋದಿಲ್ಲ ಅಂಥ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎನ್ನಲಾಗಿದೆ.
ಅವರು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಇನ್ನೂ ಘಟನೆ ಬಗ್ಗೆ ಇಂಥಹ ಕೃತ್ಯದ ಬಗ್ಗೆ ನಾನು ಎಂದೂ ಕೂಡ ನೋಡಿರಲಿಲ್ಲ ಅಂತ ಬೇಸರವನ್ನು ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದರು ಎನ್ನಲಾಗಿದೆ. ಸಭೆಯ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸಚಿವರಿಗೆ ಕಿವಿ ಮಾತು ಹೇಳಿದ್ದು, ಇದೇ ವೇಳೆ ಅವರು ಯಾರು ಕೂಡ ಪ್ರಕರಣದ ಬಗ್ಗೆ ಪರವಿರೋಧವಾಗಿ ಮಾತನಾಡಿ ಅಂತ ತಿಳಿಸಿದ್ದಾರೆ ಎನ್ನಲಾಗಿದೆ.