ಬೇಡ ಬೇಡ ಪಟಾಕಿ ಬೇಡ ಅಭಿಯಾನ
1 min readಬೇಡ ಬೇಡ ಪಟಾಕಿ ಬೇಡ ಅಭಿಯಾನ
ಪಿಪಿಎಚ್‌ಎಸ್ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ
ಮಣ್ಣಿನ ಹಣತೆ ಹಚ್ಚುವಂತೆ ಅರಿವು ಮೂಡಿಸಿದ ಮಕ್ಕಳು
ಬೆಳಕಿನ ಹಬ್ಬ ದೀಪಾವಳಿ ದಿನ ಪಟಾಕಿ ಹಚ್ಚುವ ಬದಲು ಮಣ್ಣಿನ ಹಣತೆ ಹಚ್ಚುವಂತೆ ಪಂಚಗಿರಿ ಬೋಧನಾ ಪ್ರೌಢ ಶಾಲೆ ಮಕ್ಕಳಿಂದ ಇಂದು ಜಾಗೃತಿ ಜಾಥಾ ನಡೆಸಲಾಯಿತು. ಪಟಾಕಿ ಹಚ್ಚುವುದರಿಂದ ಪರಿಸರಕ್ಕೆ ಮಾರಕವಾಗಲಿದ್ದು, ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಪ್ರೀತಿಯಿಂದ ಆಚರಿಸೋಣ ಎಂದು ಪಿಪಿಎಚ್‌ಎಸ್ ಶಾಲೆ ಮಕ್ಕಳು ಇಂದು ಅರಿವು ಮೂಡಿಸಲಾಯಿತು.
ಬೆಳಕಿನ ಹಬ್ಬ ದೀಪಾವಳಿ ಪ್ರಮುಖ ಹಬ್ಬವಾಗಿದೆ. ಆದರೆ ಹಬ್ಬದ ಆಚರಣೆ ಹೆಸರಿನಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ಬೇಡ. ಪಟಾಕಿ ಬೇಡ, ದೀಪ ಹಚ್ಚಿ ಎಂಬ ಘೋಷಣೆಗಳು ಪಂಚಗಿರಿ ಬೋಧನಾ ಪ್ರೌಢ ಶಾಲೆ ಮಕ್ಕಳಿಂದ ಮೊಳಗಿತು. ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಬಿಬಿ ರಸ್ತೆ ಮೂಲಕ ಶಿಡ್ಲಘಟ್ಟ ವೃತ್ತದವರೆಗೂ ಸಾಗಿತು. ನಂತರ ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ಪಟಾಕಿ ಬೇಡ, ಹಣತೆ ಹಚ್ಚಿ ಎಂದು ಘೋಷಣೆ ಕೂಗಿದರು.
ನಂತರ ಶಿಡ್ಲಘಟ್ಟ ವೃತ್ತದಿಂದ ನ್ಯಾಯಾಲಯದ ಮುಂಭಾಗದ ರಸ್ತೆ ಮೂಲಕ ಮತ್ತೆ ಪಂಚಗಿರಿ ಬೋಧನಾ ಪ್ರೌಢ ಶಾಲೆಗೆ ತಲುಪಿದ ವಿದ್ಯಾರ್ಥಿಗಳಿಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರಸ`ೆ ಪರಿಸರ ಅಭಿಯಂತರ ಉಮಾಶಂಕರ್, ಪ್ರಸ್ತುತ ಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾಲಿನ್ಯ. ಈ ಮಾಲಿನ್ಯದ ಜಗತ್ತಿನಲ್ಲಿ ಪಟಾಕಿ ಹಚ್ಚುವ ಮೂಲಕ ಮತ್ತೊಂದಷ್ಟು ಮಾಲಿನಯ್ವನ್ನು ನಾವು ನಾವು ಮಾಡೋದು ಬೇಡ. ಹಾಗಾಗಿ ಈ ಬಾರಿ ದೀಪಾವಳಿ ಹಬ್ಬವನ್ನು ಪರಿಸರ ಪರವಾಗಿ ಆಚರಿಸೋಣ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಶಿಕ್ಷಕ ಗುಂಪು ಮರದ ಆನಂದ್, ಪ್ರಸ್ತುತ ವಾಯು ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯವೂ ಅಧಿಕವಾಗುತ್ತಿದೆ. ಅಲ್ಲದೆ ಕಸ ನಿರ್ವಹಣೆಯಲ್ಲಿಯೂ ನಾಗರಿಕರು ಹಿಂದೆ ಇದ್ದಾರೆ. ಈ ಎಲ್ಲ ಕಾರಣಗಳಿಂದ ಪ್ರಸ್ತುತ ಮಾಲಿನ್ಯ ಸಮಾಜ ನಿರ್ಮಾಣವಾಗುತ್ತಿದ್ದು, ಮುಂದಿನ ಪ್ರಜೆಗಳಾದ ಮಕ್ಕಳು ಮಾಲಿನ್ಯ ರಹಿತ ಸಮಾಜ ನಿರ್ಮಾಣ ಮಾಡುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದರು.
ದೀಪಾವಳಿ ಹಬ್ಬವನ್ನು ಎಲ್ಲರೂ ಆಚರಿಸೋಣ, ಅದು ಪಟಾಕಿ ರಹಿತವಾಗಿ ಆಚರಿಸಿದರೆ ಮಾಲಿನ್ಯ ರಹಿತ ದೀಪಾವಳಿ ಆಗಲಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಣ್ಣಿನ ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸೋಣ, ಪಟಾಕಿ ತ್ಯೆಜಿಸೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಿಪಿಎಚ್‌ಎಸ್ ಶಾಲೆಯ ಶಿಕ್ಷಕರು, ನಗರಸಭೆ ಅಧಿಕಾರಿಗಳು ಉಸ್ಥಿತರಿದ್ದರು.