ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 27, 2024

Ctv News Kannada

Chikkaballapura

ಕೆವಿ ಕ್ಯಾಂಪಸ್‌ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನಿವೀನ್ ಕಿರಣ್

1 min read

ಕೆವಿ ಕ್ಯಾಂಪಸ್‌ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನಿವೀನ್ ಕಿರಣ್
ಸಿವಿವಿ ದತ್ತಿ ಜಯಂತಿ ಅಂಗವಾಗಿ ನಡೆಯುವ ಕ್ರೀಡಾಕೂಟ
ವಿವಿಧ ಸಮಾಜಿಕ ಕಾರ್ಯಗಳ ಮೂಲಕ ದತ್ತಿ ದಿನಾಚರಣೆ

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಕ್ರೀಡೆ ಅಗತ್ಯ, ಸೋಲು ಗೆಲುವು ಬದಿಗಿಟ್ಟು, ಕ್ರೀಡಾಮನೋಭಾವದಿಂದ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು, ಕೆವಿ ಶಿಕ್ಷಣ ಸಂಸ್ಥೆಗಳು ಮೊದಲಿನಿಂದಲೂ ಕ್ರೀಡೆ, ಸಾಮಾಜಿಕ ಸೇವೆ ಜೊತೆಗೆ ಇತರೆ ಸಮಾಜಮುಖಿಕಾರ್ಯಗಳಲ್ಲಿ ತೊಡಗಿರುವುದಾಗಿ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ ನವೀನ್ ಕಿರಣ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಹೊರವಲಯದ ಕೆವಿ ಕ್ಯಾಂಪಸ್‌ನಲ್ಲಿ ಸಿವಿವಿ 28ನೇ ದತ್ತಿ ದಿನಾಚರಣೆ ಅಂಗವಾಗಿ ಕೆವಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನಡೀಇ ಮಾತನಾಡಿದ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೈ.ವಿ. ನವೀನ್ ಕಿರಣ್, ಸಿ.ವಿ. ವೆಂಕಟರಾಯಪ್ಪನವರು ನಮ್ಮನ್ನು ಅಗಲಿ 25 ವರ್ಷಗಳಾಗಿದೆ. ಅವರು ಇದ್ದಾಗಲಿಂದಲೂ ಸಿಬ್ಬಂದಿ ಎಲ್ಲಾ ಒಂದು ಕಡೆ ಸೇರಿ ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬ ಕನಸು ಹೊಂದಿದ್ದರು. ಅವರ ಕನಸನ್ನು ಮುಂದುವರಿಸಿಕೊoಡು ಹೋಗುತ್ತಿರುವುದಾಗಿ ನವೀನ್ ಕಿರಣ್ ಹೇಳಿದರು.

ಕೆವಿ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕಾಗಿ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣಕ್ಕೂ ಮೀರಿ ಸೇವೆಗೆ ಹೆಸರಾಗಿದೆ. ಇಡೀ ರಾಜ್ಯವೇ ತಿರುಗಿ ನೋಡುವ ರೀತಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಮ್ಮ ಸಂಸ್ಥೆಗಳಿoದ ಆಯೋಜಿಸಲಾಗುತ್ತಿದೆ. ಪ್ರತಿ ದತ್ತಿ ದಿನಾಚರಣೆ ವೇಳೆಯೂ ರಕ್ತದಾನ ಶಿಬಿರ ಆಯೋಜಿಸಿ, ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಹಣೆ ಮಾಡುವ ಮೂಲಕ ಸಹಸ್ರಾರು ಮಂದಿಗೆ ಜೀವದಾನ ಮಾಡುವ ಕೆಲಸವನ್ನು ಸಂಸ್ಥೆಯ ಸಿಬ್ಬಂದಿ ಮಾಡುತ್ತಿರೋದು ಹೆಮ್ಮೆಯ ವಿಷಯವಾಗಿದೆ ಎಂದರು.

ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ವಿವಿದ ಸಮಾಜಪರ ಕಾರ್ಯಗಳನ್ನು ಮೊದಲಿನಿಂದಲೂ ಕೈಗೊಳ್ಳುತ್ತಿದ್ದು, ಈ ಬಾರಿಯೂ ರಕ್ತದಾನ ಶಿಬಿರ, ಪರಿಸರ ಉಳಿಸಿ ಅಭಿಯಾನ, ಸಿಬ್ಬಂದಿ, ಮಕ್ಕಳು ಮತ್ತು ಪತ್ರಕರ್ತರಿಗೆ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಮೊದಲಿನಿಂದಲೂ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಕೆವಿ ಸಂಸ್ಥೆ ಈಗಲೂ ಅದನ್ನು ಮುಂದುವರಿಸಿಕೊಡ ಹೋಗುತ್ತಿದ್ದು, ಇದಕ್ಕೆ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಹೃದಯ ತುಂಬಿ ಅಭಿನಂದನೆ ಎಂದರು.

ಮಾನವ ಪ್ರಸ್ತುತ ಒತ್ತಡದ ಜೀವನ ನಡೆಸುತ್ತಿದ್ದಾನೆ. ಇಂತಹ ಒತ್ತಡದ ಜೀವನದ ಜೊತೆಗೆ ತಿನ್ನುವ ಆಹಾರ, ಗಾಳಿಯೂ ಕಲುಷಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದು ದಿನಕ್ಕೆ ಒಬ್ಬ ಮನುಷ್ಯ ಕನಿಷ್ಠ ೪ ಕೆಜಿಯಷ್ಟು ಆಮ್ಲಜನಿಕ ಸೇವಿಸುತ್ತಿದ್ದು, ಪ್ರತಿ ಕೆಜಿ ಆಮ್ಲಜನಕದ ಬೆಲೆ ಈಗ ಮಾರುಕಟ್ಟೆಯಲ್ಲಿ ೪೦೦ ರುಪಾಯಿ ಇದೆ. ಇಂತಹ ಅಮೂಲ್ಯವಾದ ಆಮ್ಲಜನಕ ಪರಿಸರದಿಂದ ಮಾತ್ರ ಲಭಿಸುತ್ತಿದ್ದು, ಅದನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕೆAದು ಕರೆ ನೀಡಿದರು.

ನೀರು, ಬೆಳಕು, ಗಾಳಿ, ಭೂಮಿ ಎಲ್ಲವನ್ನೂ ನಮಗೆ ಪ್ರಕೃತಿ ಉಛಿತವಾಗಿ, ಕೊಡುಗೆಯಾಗಿ ನೀಡಿದೆ. ಇಂತಹ ಪ್ರಕೃತಿಯ ಮೇಲೆ ನಾವು ನಿರಂತರವಾಗಿ ದಾಳಿ ಮಾಡುತ್ತಿರುವುದು ಭವಿಷ್ಯದ ಅಪಾಯಕ್ಕೆ ದಾರಿಯಾಗಲಿದೆ. ಹಾಗಾಗಿ ಪ್ರತಿಯೊಬ್ಬರಕೂ ಸಮಾಜಕ್ಕೆ ಋಣಿಯಾಗಿರಬೇಕು, ಆ ಮೂಲಕ ಪರಿಸರ ರಕ್ಷಣೆ ಮಾಡಬೇಕು. ಅಲ್ಲದೆ ಇಷ್ಟೆಲ್ಲ ನೀಡಿದ ಸಮಾಜಕ್ಕೆ ನಾವು ಪ್ರತಿಯಾಗಿ ಸಹಕಾರ ನೀಡಬೇಕು ಹೊರತು ಅಪಕಾರ ಮಾಡಲು ಮುಂದಾಗಬಾರದು ಎಂದರು.

ಕ್ರೀಡೆಗಳಿoದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಲಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡದಿಂದ ದೂರವಾಗಬಹುದು. ಸೋಲು ಗೆಲುವು ಬದಿಗಿಟ್ಟು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು, ವಯಸ್ಸಿಗೆ ಅಂಜದೆ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವಂತೆ ನವೀನ್ ಕಿರಣ್ ಸಲಹೆ ಕರೆ ನೀಡಿದರು. ಅಲ್ಲದೆ ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ಜೂಲೆ ತಿಂಗಳು ಪೂರ್ತಿ ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈ ಜೋಡಿಸುವಂತೆ ಮನವಿ ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ಸಿವಿವಿ ಟ್ರಸ್ಟಿ ನಿರ್ಮಲಾ ಪ್ರಭು, ಕೆವಿ ಶಿಕ್ಷಣ ಸಂಸ್ಥೆಗಳೆoದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿಯೇ ಒಂದು ಬ್ರಾಡ್ ಆಗಿವೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಈಗಲೂ ನೂಕುನುಗ್ಗಲು ಇದೆ. ಅಷ್ಟೇಲ್ಲ, ಕೆವಿ ಶಿಕ್ಷಣ ಸಂಸ್ಥೆಗಳು ಎಂದೂ ಸಿಬ್ಬಂದಿಯನ್ನು ಕೈ ಬಿಟ್ಟಿಲ್ಲ. ಕೊರೋನಾದಂತಹ ಭೀಕರ ಸ್ಥಿತಿಯಲ್ಲಿಯೂ ಸಿಬ್ಬಂದಿಗೆ ವೇತನ ಸಂಪೂರ್ಣವಾಗಿ ಪಾವತಿಸುವ ಮೂಲಕ ಮನವೀಯತೆ ಮೆರೆಯಲಾಗಿದೆ ಎಂದರು.

ಅಲ್ಲದೆ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಗೆ ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸುವಷ್ಟು ಮಾನವೀಯತೆ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರಿಗಿದೆ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವವರೆಲ್ಲರೂ ಒಂದೇ ಕುಟುಂಬ. ಕುಟುಂಬದವರೆಲ್ಲಾ ಸೇರಿ ಆಡಿ ನಲಿಯೋದೆ ಕ್ರಿಡೋತ್ಸವ. ಈ ಕ್ರೀಡೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಮತ್ತು ರಕ್ತದಾನ ಶಿಬಿರದಲ್ಲಿ ಎಲ್ಲರೂ ರಕ್ತದಾನ ಮಾಡುವ ಜೊತೆಗೆ ಇತರರಿಂದ ರಕ್ತದಾನ ಮಾಡಿಸಿ ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟಗಳಿಗೆ ಚಾಲನೆ ನೀಲಾಯಿತು. ಮುಂದಿನ ೨೦ ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಯಲಿದ್ದು, ಇದರಲ್ಲಿ ಕೆವಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಕೆ.ವಿ. ನವೀನ್ ಕಿರಣ್ ಅವರ ಅಭಿಮಾನಿ ಬಳಗ ಶ್ರಮಿಸುತ್ತಿದ್ದು, ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆ ಹೇಳುವುದಾಗಿ ನವೀನ್ ಕಿರಣ್ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *