ಹೊಸ ವರ್ಷದ “ಕಿಕ್’: 193 ಕೋ. ರೂ. ಗಳಿಕೆ
1 min readಹೊಸ ವರ್ಷದ ಸಂಭ್ರಮಾಚರಣೆಯಿಂದ ಸರಕಾರದ ಬೊಕ್ಕಸಕ್ಕೆ ಒಂದೇ ದಿನದಲ್ಲಿ 193 ಕೋಟಿ ರೂ. ಆದಾಯ ಹರಿದುಬಂದಿದ್ದು, ಒಂದೇ ದಿನದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ರವಿವಾರ ಒಂದೇ ದಿನಕ್ಕೆ 3.07 ಲಕ್ಷ ಪೆಟ್ಟಿಗೆ ಐಎಂಎಲ್ ಮತ್ತು 1.95 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.
ಆದಾಯ 388
ಕೋಟಿ ರೂ. ಹೆಚ್ಚಳ
ಕಳೆದ ವರ್ಷ ಡಿಸೆಂಬರ್‌ನಲ್ಲಿ 63.35 ಲಕ್ಷ ಪೆಟ್ಟಿಗೆ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮತ್ತು 36.03 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದರೆ, 2023ರ ಡಿಸೆಂಬರ್ ತಿಂಗಳಲ್ಲಿ 64.35 ಲಕ್ಷ ಪೆಟ್ಟಿಗೆ ಐಎಂಎಲ್ ಹಾಗೂ 41.76 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟ ವಾಗಿದೆ. 2022ರ ಡಿಸೆಂಬರ್ ನಲ್ಲಿ 2,612 ಕೋಟಿ ರೂ. ಸಂಗ್ರಹ ವಾಗಿದ್ದರೆ, ಈ ಬಾರಿ 3,000 ಕೋಟಿ ರೂ. ಆದಾಯ ಹರಿದು ಬಂದಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿ ಇದ್ದು, 2023ರಿಂದ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ 533.26 ಲಕ್ಷ ಪೆಟ್ಟಿಗೆ ಐಎಂಎಲ್ ಮತ್ತು 324.40 ಲಕ್ಷ ಪೆಟ್ಟಿಗೆ ಬಿಯರ್ ವ್ಯಾಪಾರವಾಗಿದೆ. ಇದರಿಂದಾಗಿ 25,168 ಕೋಟಿ ರೂ. (ಶೇ.69.91) ಆದಾಯ ಬಂದಿದೆ.
2022ರ ಡಿ.31ರಂದು 14.51 ಕೋ. ರೂ. ಮೊತ್ತದ ಮದ್ಯ ಮಾರಾಟ ವಾಗಿತ್ತು. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು 4.34 ಕೋ. ರೂ. ಹೆಚ್ಚಳವಾಗಿದೆ. ರಾಯಚೂರಿನ ರೈಲು ನಿಲ್ದಾಣದ ಬಳಿಯ ಮಳಿಗೆಯಲ್ಲಿ ಅತ್ಯಂತ ಹೆಚ್ಚು ಅಂದರೆ, 11.66 ಲಕ್ಷ ರೂ.ಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷದ ಮದ್ಯ ಬಿಕರಿಯಾಗಿ 2ನೇ ಸ್ಥಾನದಲ್ಲಿದೆ. ಜಿÇÉಾವಾರು ಮಾರಾಟದಲ್ಲಿ ಬೆಂಗಳೂರು ನಗರದಲ್ಲಿ 1.82 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಇಲ್ಲಿ 1.35 ಕೋ.ರೂ. ಸಂಗ್ರಹವಾಗಿತ್ತು.