ಎಂಜಿ ರಸ್ತೆ ಪರಿಶೀಲಿಸಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರು
1 min readಎಂಜಿ ರಸ್ತೆ ಪರಿಶೀಲಿಸಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರು
4 ದಿನಗಳಿಂದ ಎಂಜಿ ರಸ್ತೆಯಲ್ಲಿ ತೆರುವು ಕಾರ್ಯಾಚರಣೆ
ನಾಗರಿಕರಿಗೆ ತೊಂದರೆಯಾಗದ0ತೆ ನಡೆಸಲು ಸೂಚನೆ
ಎಪಿಎಂಸಿಯಿ0ದ ದರ್ಗಾಮೊಹಲ್ಲಾವರೆಗೂ ಪರಿಶೀಲನೆ
ಸುಮಾರು ಒಂದೂವರೆ ವರ್ಷದಿಂದ ಚಿಕ್ಕಬಳ್ಳಾಪುರ ನಗರಸಭೆಗೆ ಆಡಳಿತ ಮಂಡಳಿಯೇ ಇರಲಿಲ್ಲ. ನೆನ್ನೆ ತಾನೇ ನಗರಸಭೆ ಅಧ್ಯಕ್ಷರಾಗಿ ಗಜೇಂದ್ರ ಮತ್ತು ಉಪಾಧ್ಯಕ್ಷರಾಗಿ ನಾಗರಾಜ್ ಜೆ ಅವರು ಆಯ್ಕೆಯಾಗಿದ್ದಾರೆ. ಹಾಗಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಯಾದ ನಂತರ ಮೊದಲ ಬಾರಿಗೆ ಉಭಯರೂ ಹೊರಬಂದಿದ್ದಾರೆ. ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರುವು ಕಾರ್ಯಾಚರಣೆ ವೀಕ್ಷಿಸಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಉಭಯರೂ ನಗರ ವೀಕ್ಷಣೆಗೆ ಮುಂದಾಗಿದ್ದಾರೆ. ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರುವು ಕಾರ್ಯಾಚರಣೆಯನ್ನು ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಜೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಧಿಕಾರಿಗಳ ಜೊತೆಯಲ್ಲಿಯೇ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ನಗರದ ಎಪಿಎಂಸಿ ಮಾರುಕಟ್ಟೆಯಿಂದ ಎಂಜಿ ರಸ್ತೆಯ ಉಭಯ ಕಡೆಗಳಲ್ಲಿ ನಡೆಯುತ್ತಿರುವ ತೆರುವು ಕಾರ್ಯಾಚರಣೆ ಪರಿಶೀಲಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗ0ದ ರೀತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ನಾಲ್ಕು ದಿನಗಳಿಂದ ಹೆದ್ದಾರಿ ತೆರುವು ಕಾರ್ಯಾಚರಣೆ ನಡೆಯುತ್ತಿದ್ದು, ಕೆಲ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಕಟ್ಟಡಗಳ ತೆರುವಿಗೆ ಮುಂದಾಗಿದ್ದಾರೆ. ಇದು ಉತ್ತ್ತಮ ಬೆಳವಣಿಗೆಯಾಗಿದ್ದು, ರಸ್ತೆ ಕಾಮಗಾರಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ಅಧ್ಯಕ್ಷ ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ನಗರಸಭೆ ನೂತನ ಅಧ್ಯಕ್ಷ ಗಜೇಂದ್ರ, ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇನ್ನೂ 24 ಗಂಟೆಯಷ್ಟೇ ಆಗಿದ್ದು, ಎಂಜಿ ರಸ್ತೆಯಲ್ಲಿ ತೆರುವು ಕಾರ್ಯಾಚರಣೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಾಗರಿಕರು ದೂರು ನೀಡಿದ್ದಾರೆ. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಊಚರ್ಚೆ ನಡೆಸಲಾಗಿದೆ. ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಎಂಜಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಸ್ತುತ ನಡೆಯುತ್ತಿದ್ದು, ರಸ್ತೆ ಅಗಲೀಕರಣ ನಗರಕ್ಕೆ ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಜನರ ಸಹಕಾರವೂ ಇದೆ, ಆದಷ್ಟು ಶೀಘ್ರದಲ್ಲಿ ತೆರುವು ಕಾರ್ಯ ನಡೆದರೆ, ರಸ್ತೆ ಸಿದ್ಧವಾಗಲಿದೆ. ರಸ್ತೆ ಸಿದ್ಧವಾದ ನಂತರ ಚಿಕ್ಕಬಳ್ಳಾಪುರದ ಸೌಂದರ್ಯ ಹೆಚ್ಚಲಿದೆ. ಮಧ್ಯದಲ್ಲಿ ರಸ್ತೆ ವಿಭಜಕ, ಅದರಲ್ಲಿ ವಿದ್ಯುತ್ ದೀಪಗಳು ಅಳವಡಿಸಲಾಗುತ್ತದೆ. ಯಾವುದೇ ಗೊಂದಲ ಇಲ್ಲದೆ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಗಳ ಮಾಲೀಕರು ಹಳದಿ ಗುರುತು ಬದಲು, ಕೆಂಪು ಗುರುತಿನವರೆಗೆ ಕಟ್ಟಡಗಳ ತೆರುವು ಮಾಡುವಂತೆ ಅಧ್ಯಕ್ಷರು ಮನವಿ ಮಾಡಿದರು.
ಉಪಾಧ್ಯಕ್ಷ ನಾಗರಾಜ್ ಜೆ ಮಾನಾಡಿ, ಎಂಜಿ ಅಗಲೀಕರಣ ಕಾಮಗಾರಿ ವಿಚಾರದಲ್ಲಿ ನಗರಸಭೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಜನರಿಗೆ ಮೂಲ ಸೌಕರ್ಯಗಳ ತೊಂದರೆಯಾಗದ ರೀತಿಯಲ್ಲಿ ಅಗಲೀಕರಣ ಕಾಮಗಾರಿ ನಡೆಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಚ್ಚುಕಟ್ಟಾಗಿ ಕೆಲಸ ನಡೆಯುತ್ತಿದೆ, ಅಗತ್ಯ ಬಿದ್ದರೆ ನಗರಸಭೆ ಎಂಜಿನಿಯರ್‌ಗಳನ್ನು ಕರೆಯಿಸಿ ಆಗಿರುವ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ಈ ಹಿಂದೆ ಡಾ.ಕೆ. ಸುಧಾಕರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ೩೫೦ ಕೋಟಿಗೂ ಹೆಚ್ಚು ಅನುದಾನ ತಂದು ರಾಷಟ್‌ರೀಯ ಹೆದ್ದಾರಿ ೨೩೪ರ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದಾರೆ. ಡಾ.ಕೆ. ಸುಧಾಕರ್ ಅದರು ದೂರದೃಷ್ಟಿ ಉಳ್ಳ ನಾಯಕರಾಗಿದ್ದಾರೆ. ಅವರ ಕಾಲದಲ್ಲಿ ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತದೆ. ಅವರ ಗಕರಡಿಯಲ್ಲಿ ನಾವು ಸದಸ್ಯರು, ಉಪಾಧ್ಯಕ್ಷರಾಗಿರುವುದು ಖುಷಿ ತಂದಿದೆ ಎಂದರು.
ಎಪಿಎ0ಸಿ ಮಾರುಕಟ್ಟೆಯಿಂದ ದರ್ಗಾ ಮೊಹಲ್ಲಾದವರೆಗೂ ಅಧ್ಯಕ್ಷ ಉಪಾಧ್ಯಕ್ಷರು ಹೆದ್ದಾರಿ ಅಗಲೀಕರಣ ಕಾಮಗಾರಿ ವೀಕ್ಷಣೆ ಮಾಡಿದರು. ಅಲ್ಲದೆ ದರ್ಗಾ ಮೊಹಲ್ಲಾ ಬಳಿ ಚರಂಡಿ ನೀರಿನ ಸಮಸ್ಯೆ ಇದ್ದು, ಅಲ್ಲಿ ಮೋರಿ ನಿರ್ಮಾಣದ ಬಗ್ಗೆಯೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅದರ ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನರಿಗೆ ಸತತವಾಗಿ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಅಧಿಕಾರಿಗಳು ಒಪ್ಪಿರುವುದಾಗಿ ಅವರು ಹೇಳಿದರು.