ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಸಾರಥಿಗಳು

1 min read

ಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಸಾರಥಿಗಳು

ಅಧ್ಯಕ್ಷರಾಗಿ ಗಜೇಂದ್ರ, ಉಪಾಧ್ಯಕ್ಷರಾಗಿ ನಾಗರಾಜ್ ಅಧಿಕಾರ

ಸಂಸದರ ಸಮ್ಮುಖದಲ್ಲಿ ಪದಗ್ರಹಣ ಮಾಡಿದ ಜೋಡೆತ್ತುಗಳು

ನಗರದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟ ನೂತನ ಸಾರಥಿಗಳು

ಹಲವು ವಿವಾದಗಳ ನಂತರ ಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಸಾರಥಿಗಳು ಆಯ್ಕೆಯಾಗಿದ್ದಾರೆ. ನಗರಸಭೆಯ ಅಧ್ಯಕ್ಷರಾಗಿ ೪ನೇ ವಾರ್ಡಿನ ಗಜೇಂದ್ರ ಮತ್ತು ಉಪಾಧ್ಯಕ್ಷರಾಗಿ ೫ನೇ ವಾರ್ಡಿನ ನಾಗರಾಜ್ ಜೆ ಅವರು ಇಂದು ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಸಂಸದ ಡಾ.ಕೆ. ಸುಧಾಕರ್ ಸಾಕ್ಷಿಯಾದರು.

ಸತತ 16 ತಿಂಗಳ ಜಿಲ್ಲಾಧಿಕಾರಿ ಆಡಳಿತದ ನಂತರ ಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವಾಗಿದೆ. ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ೪ನೇ ವಾರ್ಡಿನ ಗಡೇಂದ್ರ ಮತ್ತು ಉಪಾಧ್ಯಕ್ಷರಾಗಿ ೫ನೇ ವಾರ್ಡಿನ ನಾಗರಾಜ್ ಜೆ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸುವ ವಿಚಾರದಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾರಣ 12 ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದರೂ ಫಲಿತಾಂಶ ಪ್ರಕಟಗೊಳಿಸದೆ ತಡೆ ಹಿಡಿಯಲಾಗಿತ್ತು.

ಆದರೆ ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿದ್ದು, ಫಲಿತಾಂಶ ಘೋಷಣೆಗೆ ಕೋರ್ಟ್ ಹಸಿರು ನಿಶಾನೆ ತೋರಿದ ಪರಿಣಾಮ ಇಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯವರು ಕಳೆದ ೧೨ರಂದು ನಡೆದಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶ ಘೋಷಣೆ ಮಾಡಿದರು. ೧೯ ಮತ ಪಡೆದು ಅಧ್ಯಕ್ಷರಾಗಿ ಗಜೇಂದ್ರ ಮತ್ತು ಉಪಾಧ್ಯಕ್ಷರಾಗಿ ನಾಗರಾಜ್ ಜೆ ಅವರು ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದರು.

ನಂತರ ನಗರಸಭೆ ಸಭಾಂಗಣದಲ್ಲಿ ವಿಶ್ವ ಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರು ಇಂದು ಸಂಸದ ಡಾ.ಕೆ. ಸುಧಾಕರ್ ಅವರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅಧ್ಯಕ್ಷ ಗಜೇಂದ್ರ, ನಮ್ಮ ನಾಯಕರು ಡಾ.ಕೆ. ಸುಧಾಕರ್ ಅವರು. ಅವರ ಆಣತಿಯಂತೆ ನಗರವನ್ನು ಅಭಿವೃದ್ಧಿಯ ಉತ್ತುಂಗದತ್ತ ಕೊಂಡೊಯ್ಯುವುದಾಗಿ ಹೇಳಿದರು.

ಅಲ್ಲದೆ ನಗರಸಭೆ ಅಧ್ಯಕ್ಷರಾಗಲು ಸಹಕರಿಸಿದ ಸಂಸದ ಡಾ.ಕೆ. ಸುಧಾಕರ್ ಸೇರಿದಂತೆ ನಗರಸಭೆಯ ಎಲ್ಲ ಸದಸ್ಯರ ಸಹಕಾರದಿಂದ ತಾವು ಅಧ್ಯಕ್ಷರಾಗಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಇನ್ನು ಸುಧಾಕರ್ ಅವರು ಸಚಿವರಾಗಿದ್ದ ವೇಳೆ ತಂದಿದ್ದ ಅನುದಾನವನ್ನು ವೆಚ್ಚ ಮಾಡಲೂ ನಗರಸಭೆಗೆ ಕಳೆದ ಒಂದೂವರೆ ವರ್ಷದಲ್ಲಿ ಸಾಧ್ಯವಾಗಿಲ್ಲ. ಹಾಗಾಗಿ ಇರುವ ಅನುದಾನ ಬಳಸಿಕೊಂಡು ನಗರದ ಸರ್ವತೋಮುಖ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಜ್ವಲಂತ ಸಮಸ್ಯೆಗಳಿದ್ದು, ಯಾವುದೇ ಪಕ್ಷಬೇಧವಿಲ್ಲದೆ, ನಗರದ ಎಲ್ಲ ೩೧ ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಪಣ ತೊಡುವುದಾಗಿ ಉಪಾಧ್ಯಕ್ಷ ನಾಗರಾಜ್ ಜೆ ಹೇಳಿದರು. ಒಬ್ಬ ಸಮಾನ್ಯ ಕುಟುಂಬದಿAದ ಬಂದ ತಮ್ಮನ್ನು ನಗರಸಭೆ ಸದಸ್ಯರಾಗಿ, ಮೊದಲ ಅವಧಿಗೇ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ತಮ್ಮ ಮೇಲೆ ವಿಶ್ವಾಸ ಇಟ್ಟಿರುವ ಸಂಸದರಿಗೆ ಋಣಿಯಾಗಿರುವುದಾಗಿ ಹೇಳಿದ ನಾಗರಾಜ್, ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಅಲ್ಲದೆ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇಠ್ಟಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ, ಈಗಾಗಲೇ ಶಾಸಕರು ನಗರಸಭೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ಕೆಲಸಕ್ಕೆ ಮುಂದಾಗಿರುವ ಆರೋಪ ಕೇಳಿಬಂದಿದ್ದು, ವರ್ಗಾವಣೆ ಮಾಡುವ ಬೆದರಿಕೆಗಳಿಗೆ ಅಧಿಕಾರಿಗಳು ಹೆದರುವ ಅಗತ್ಯವಿಲ್ಲ ಎಂದು ಅಧಿಕರಿಗಳಿಗೆ ಉಪಾಧ್ಯಕ್ಷರು ಭರವಸೆ ನೀಡಿದರು. ಅಲ್ಲದೆ ನಗರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಶ್ರಮಿಸಲು ಪಣ ತೊಟ್ಟಿದ್ದು, ಇದಕ್ಕೆ ಅಧಿಕರಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಕಳೆದ ೧೬ ತಿಂಗಳಿ0ದ ಆಡಳಿತ ಮಂಡಳಿ ಇಲ್ಲದೆ ನಗರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಸಂಸದರ ಮಾರ್ಗದರ್ಶನದಲ್ಲಿ ಅಧ್ಯಕ್ಷರ ಸಹಕಾರದೊಂದಿಗೆ ಶ್ರಮಿಸಲಾಗುವುದು. ನಗರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿಸಲು ಅಧಿಕಾರಿಗಳು ಸಾಥ್ ನೀಡಬೇಕು ಎಂದು ಅವರು ಕೋರಿದರು. ಅಲ್ಲದೆ ನಗದರದ ನಾಗರಿಕರಿಗೆ ಸದಾ ಸಿಗುವ ರೀತಿಯಲ್ಲಿ ಆಡಳಿತ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ, ನಗರೋತ್ಥಾನ ೫ನೇ ಹಂತದ ಅನುದಾನ ಸೇರಿದಂತೆ ಹಲವು ಅನುದಾನ ನಗರಸಭೆಯಲ್ಲಿ ಸಿದ್ಧವಾಗಿದ್ದರೂ ಅದನ್ನು ಬಳಸುವಲ್ಲಿ ನಗರಸಭೆ ಕಳೆದ ಒಂದೂವರೆ ವರ್ಷದಲ್ಲಿ ವಿಫಲವಾಗಿದೆ. ಕಳೆದ ೧೦ ವರ್ಷದಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧ್ಯಕ್ಷರೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಹಾಗೆಯೇ ಪ್ರಸ್ತುತ ಅಧ್ಯಕ್ಷ ಉಪಾಧ್ಯಕ್ಷರೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ ಗ್ರಾಮದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ೬ ಶಾಲಾ ಕೊಠಡಿಗಳನ್ನು ತಮ್ಮ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅವುಗಳ ಉದ್ಘಾಟನೆಗೆ ಸೌಜನ್ಯಕ್ಕೂ ಮಾಹಿತಿ ನೀಡದೆ ಉದ್ಘಾಟನೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ಸಂಸದರು, ವಿಶ್ವಕರ್ಮರು ಸಾಕ್ಷಾತ್ ಬ್ರಹ್ಮನ ಪುತ್ರರಾಗಿದ್ದಾರೆ. ಅಂತಹ ವಿಶ್ವಕರ್ಮ ಹುಟ್ಟಿದ ದಿನವೇ ಪದಗ್ರಹಣ ಮಾಡಿರುವ ಅಧ್ಯಕ್ಷ, ಉಪಾಧ್ಯಕ್ಷರು ನಗರದ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ವೇಳೆ ಮಾಜಿ ಅಧ್ಯಕ್ಷರಾದ ಕೆ.ವಿ. ಮಂಜುನಾಥ್, ಮುನಿಕೃಷ್ಣ, ಬಿಜೆಪಿ ಬೆಂಬಲಿತ ಎಲ್ಲ ನಗರಸಭಾ ಸದಸ್ಯರು, ನಗರಸಭಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಡರಿದ್ದರು. ವಿಶ್ವ ಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಬೆಂಬಲಿಗರು ನಗರಸಭೆ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

 

About The Author

Leave a Reply

Your email address will not be published. Required fields are marked *