ಅಧಿಕಾರಿಗಳ ನಿರ್ಲಕ್ಷ ಚಾಲಕರು, ಪ್ರಯಾಣಿಕರ ಪರದಾಟ
1 min readಅಧಿಕಾರಿಗಳ ನಿರ್ಲಕ್ಷ ಚಾಲಕರು, ಪ್ರಯಾಣಿಕರ ಪರದಾಟ
ರಸ್ತೆ ದುರಸ್ತಿಗೆ ಆಗ್ರಹಿಸಿ ರೈತಸಂಘದಿoದ ಪ್ರತಿಭಟನೆ
ಅರಸೀಕೆರೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿ ವಾಹನಗಳು ಓಡಾಡಲು ಆಗದೆ ಗುಂಡಿಗಳು ಬಿದ್ದಿದ್ದು, ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದಿoದ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಅರಸೀಕೆರೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿ ವಾಹನಗಳು ಓಡಾಡಲು ಆಗದೆ ಗುಂಡಿಗಳು ಬಿದ್ದಿದ್ದು, ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದಿoದ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷ ದಯಾನಂದ್, ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಮಧ್ಯೆ ಚರಂಡಿಗೆ ಹಾಕಿರುವ ಸ್ಲಾಬ್ ಗಳು ಮುರಿದು ವಾಹನಗಳು ಚಲಿಸುವಾಗ ಚಕ್ರಗಳು ಸಿಲುಕಿ ಚಾಲಕರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಸ್ತೆಗೆ ಹೊಂದಿಕೊoಡಿರುವ ಚರಂಡಿ ತುಂಬಿಕೊoಡು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ರಸ್ತೆ ರಾಷ್ಟಿಯ ಹೆದ್ದಾರಿ ಆಗಿರುವುದರಿಂದ ನೂರಾರು ಬಸ್‌ಗಳು ಒಳಹೋಗಲು ಮತ್ತು ಹೊರ ಹೋಗಲು ಪ್ರಮುಖ ಮಾರ್ಗವಾಗಿದೆ. ರಸ್ತೆಯಲ್ಲಿ ಗುಂಡಿ ಇರುವುದರಿಂದ ರಸ್ತೆ ಉದ್ದಕ್ಕೂ ವಾಹನಗಳು ಉಜ್ಜಿಕೊಂಡು ಹೋಗಿ ಅಪಘಾತಗಳು ಸಂಭವಿಸುತ್ತವೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ಟ್ಯಾಕ್ಸಿ ಚಾಲಕರ ನಿಲ್ದಾಣವಿದೆ. ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನಹರಿಸಿದೆ ನಿರ್ಲಕ್ಷ ಮಾಡಿದ್ದು, ರಸ್ತೆ ಸರಿಪಡಿಸಿದಿದ್ದರೆ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂಬoಧ ಹಲವು ಬಾರಿ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಹಾಗಾಗಿ ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.