ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ, ಬೆಳಗ್ಗೆ 11.15 ಆದರೂ ತೆಗೆದಿಲ್ಲ ಬಾಗಿಲು
1 min readಅಧಿಕಾರಿಗಳ ಕರ್ತವ್ಯ ನಿರ್ಲಕ್ಷ, ಬೆಳಗ್ಗೆ 11.15 ಆದರೂ ತೆಗೆದಿಲ್ಲ ಬಾಗಿಲು
ಕಛೇರಿಗೆ ಬೀಗ ತೆಗೆಯದ ಕಾರ್ಮಿಕ ಅಧಿಕಾರಿಗಳ ವಿರುದ್ಧ ಆಕ್ರೋಶ
ಯಾವುದೇ ಸರ್ಕಾರಿ ಕಛೇರಿ ಬೆಳಗ್ಗೆ ಹತ್ತು ಗಂಟೆಗೆ ತೆರೆದು, ಸಾರ್ವಜನಿಕರ ಸೇವೆಗೆ ಸಿದ್ದವಾಗಿರಬೇಕೆಂಬ ಸರ್ಕಾರದ ಆದೇಶ ಇದ್ದರೂ ಚಿಂತಾಮಣಿ ನಗರದ ಕಾರ್ಮಿಕ ಇಲಾಖೆ ಮಾತ್ರ ಕಚೇರಿಗೆ ಬಾಗಿಲು ತೆಗೆಯದೆ ನಿರ್ಲಕ್ಷ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಆದೇಶದಂತೆ ಬೆಳಗ್ಗೆ ಹತ್ತು ಗಂಟೆಗೆ ಎಲ್ಲ ಸರ್ಕಾರಿ ಕಚೇರಿಗಳು ತೆಗೆಯಬೇಕು. ಆದರೆ 11.15 ಆದರೂ ಚಿಂತಾಮಣಿ ಕಾರ್ಮಿಕ ಇಲಾಖೆ ಕಚೇರಿ ಮಾತ್ರ ಬಾಗಿಲು ತೆಗೆಯದೆ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಕಾರ್ಮಿಕರ ಹತ್ತಾರು ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಗಮನ ಹರಿಸದ ಅಧಿಕಾರಿಗಳು, ಕರ್ತವ್ಯ ಹಾಜರಾತಿ ಸಮಯ ಮುಗಿದರೂ ಕಛೇರಿಗೆ ಬೀಗ ತೆಗೆಯದೆ ಇರುವುದು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ ಕ್ಕೆ ಸಾಕ್ಷಿಯಾಗಿದೆ.
ಈ ಕುರಿತು ಕಛೇರಿ ಮುಂಬಾಗದಿAದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ, ಕಚೇರಿಗೆ ಬೀಗ ಜಡದಿದ್ದರೂ ಬೀಗ ತೆಗೆದಿದ್ದೆವೆ ಎಂದು ಸುಳ್ಳು ಹೇಳಿದ್ದು, ಅಧಿಕಾರಿಗಳ ಬೆಜವಾಬ್ದಾರಿ ತನಕ್ಕೆ ಸಾಕ್ಷಿಯಾಯಿತು.