ಚಿಕ್ಕಬಳ್ಳಾಪುರದಲ್ಲೂ ನವರಾತ್ರಿ ಉತ್ಸವ ಜೋರಾಗಿದೆ
1 min readಮೈಸೂರಿನಲ್ಲಿ ನಾಡ ಹಬ್ಬದ ಸಂಭ್ರಮ ಜೋರು
ಚಿಕ್ಕಬಳ್ಳಾಪುರದಲ್ಲೂ ನವರಾತ್ರಿ ಉತ್ಸವ ಜೋರಾಗಿದೆ
ದಸರಾ ಅಂದರೆ ನಾಡಿನಾದ್ಯಂತ ಸಂಭ್ರಮ ಮನೆ ಮಾಡುತ್ತೆ. ಅದರಲ್ಲೂ ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಮೈಸೂರಿನಲ್ಲಂತೂ ಒಂಬತ್ತು ದಿನಗಳ ನವರಾತ್ರಿ ಹಬ್ಬ ಅದ್ಧೂರಿ. ಚಿಕ್ಕಬಳ್ಳಾಪುರದಲ್ಲಿಯೂ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಎಲ್ಲೆಲ್ಲೂ ದಸರಾ ಹಬ್ಬದ ಮೆರುಗು ನೀಡುವ ರೀತಿಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ನವರಾತ್ರಿಗಳೆಂದರೆ ಒಂಬತ್ತು ದಿನಗಳ ವಿಶೇಷ ಹಬ್ಬ. ಅದರಲ್ಲೂ ದಸರಾ ಎಂದರೆ ವಿಶ್ವದಲ್ಲಿಯೇ ಖ್ಯಾತಿ. ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ಇಡೀ ವಿಶ್ವಕ್ಕೆ ಮಾದರಿ. ನಾಡಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ ದಸರಾ ಚಿಕ್ಕಬಳ್ಳಾಪುರದಲ್ಲಿಯೂ ಕಡಿಮೆಯೇನಲ್ಲ. ನಗರದ ಓಂಕಾರ ಗಣಪತಿ ಗೆಳೆಯರ ಬಳಗದಿಂದ ಸತತವಾಗಿ 9 ವರ್ಷಗಳಿಂದ ದಸರಾ ಆಚರಿಸಲಾಗುತ್ತಿದೆ. 9ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಓಂಕಾರ ಗಣಪತಿ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದೆ.
ಈ ಉತ್ಸವದಲ್ಲಿ ರಂಗೋಲಿ ಸ್ಪರ್ಧೆ, ನೃತ್ಯ ಕಾರ್ಯಕ್ರಮ, ಲೆಮನ್ ಅಂಡ್ ಸ್ಪೂನ್, ಮ್ಯಾಜಿಕಲ್ ಚೇರ್, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿ ಈ ಎಲ್ಲ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಲಾಗಿದ್ದು, ಗಣೇಶ ಹಬ್ಬ, ನಾಡ ದೇವಿ ಚಾಮುಂಡಿ ಮತ್ತು ದುರ್ಗಾದೇವಿ ಪೂಜೆಯನ್ನು ಸತತವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ.
ಸತತ ಮೂರನೇ ದಿನಕ್ಕೆ ನವರಾತ್ರಿ ಉತ್ಸವಗಳು ಕಾಲಿಟ್ಟಿದ್ದು, ೯ ದಿನಗಳ ಕಾಲ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಳೆ ಬೆಳಗ್ಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಾಳೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಆಗಮಿಸಲಿದ್ದಾರೆ, ದೇವಿಗೆ ಪ್ರತಿದಿನ ಹೂವಿನ ಅಲಂಕಾರ, ಹೋಮ, ಮತ್ತು ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ನವರಾತ್ರಿ ಬಂದರೆ ಹಳ್ಳಿ ನಗರ ಎನ್ನದೆ ದೇಶದ ಉದ್ದಗಲಕ್ಕೂ ಶಕ್ತಿ ದೇವತೆಗಳ ಆರಾಧನೆಗೆ ಜನತೆ ಮುಂದಾಗುತ್ತಾರೆ. ಚಿಕ್ಕಬಳ್ಳಾಪುರ ನಗರದಲ್ಲೂ ಓಂಕಾರ ಗೆಳೆಯರ ಬಳಗದಿಂದ ನಾಡ ದೇವತೆ ದುರ್ಗಾಮಾತೆ ಪೂಜೆ ಹಾಗೂ ಗಣೇಶೋತ್ಸವವನ್ನು ಅದ್ದೂರಿಯಾಗಿ ಮಾಡುವ ಮೂಲಕ ಜನಕ್ಕೆ ಭಕ್ತಿಯ ಸಿಂಚನ ಹರಿಸಿದ್ದಾರೆ.