ನವೀನ್ ಕಿರಣ್ ಹುಟ್ಟುಹದ್ದ ಪ್ರಯುಕ್ತ ಅಭಿಮಾನಿಗಳಿಂದ ಸೇವೆ
1 min readಮುಂದುವರಿದ ನವೀನ್ ಕಿರಣ್ ಸಮಾಜಸೇವೆ ಸಪ್ತಾಹ
ಕಳೆದ ನಾಲ್ಕು ದಿನಗಳಿಂದ ಸತತವಾಗಿ ನಡೆಯುತ್ತಿರೋ ಸಪ್ತಾಹ
ನವೀನ್ ಕಿರಣ್ ಹುಟ್ಟುಹದ್ದ ಪ್ರಯುಕ್ತ ಅಭಿಮಾನಿಗಳಿಂದ ಸೇವೆ
ಇಂದು ಉಚಿತವಾಗಿ ತಟ್ಟೆ ವಿತರಿಸುವ ಮೂಲಕ ಕಾರ್ಯಕ್ರಮ
ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ನಿಯೋಜಿಸಿರುವ ನವೀನ್ ಕಿರಣ್ ಸಮಾಜಸೇವೆ ಸಪ್ತಾಹ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಒಂದು ಸೇವೆ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿರುವ ಅಭಿಮಾನಿಗಳು ಇಂದು ಮಕ್ಕಳಿಗೆ ಉಚಿತವಾಗಿ ತಟ್ಟೆ ವಿತರಣೆ ಮಾಡಿದರು.
ಶಿಕ್ಷಣ ಸೇವೆ, ಸಾಮಾಜಿಕ ಸೇವೆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೀಡಿಸಿರುವ ಕೆ.ವಿ. ನವೀನ್ ಕಿರಣ್ ಅವರು ೪೬ನೇ ವಸಂತಕ್ಕೆ ಕಾಲಿಡಲಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸತತ 7 ದಿನಗಳ ಕಾಲ ಸಾಮಾಜಿಕ ಸೇವೆಯ ಮೂಲಕವೇ ಅವರ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ. ಇದರ ಭಾಗವಾಗಿ ಮೊದಲ ದಿನ ಗುಡಿಬಂಡೆಯಲ್ಲಿ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಮಾಡುವ ಮೂಲಕ ಸ್ತಾಹಕ್ಕೆ ಚಾಲನೆ ನೀಡಲಾಗಿತ್ತು.
ನಂತರ ಎರಡನೇ ದಿನ ಕಂದವಾರಪೇಟೆಯ ಗುರುಕುಲಾಶ್ರಮದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆ, ನಾಲ್ಕನೇ ದಿನವಾದ ಇಂದು ಚಿಕ್ಕಬಳ್ಳಾಪುರ ದ ಪಂಚಗಿರಿ ಬೋಧನಾ ಪ್ರೌಢಶಾಲೆಯ ಮಕ್ಕಳಿಗೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆಯಿಂದ ಉಚಿತವಾಗಿ 50 ಊಟದ ತಟ್ಟೆಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಮಹೇಶ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ಉದ್ಯಮಿ ಮಹೇಶ್, ಕೆವಿ ನವೀನ್ ಕಿರಣ್ ಅವರು ಚಿಕ್ಕಬಳ್ಳಾಪುರದ ವರಪುತ್ರ, ಅವರು ಸಹಾಯ ಮಾಡುವ ಗುಣ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಅದೇ ರೀತಿ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವರು ಸದಾ ಬಡವರ ಬಗ್ಗೆ ಯೋಚನೆ ಮಾಡುವ ಧೀಮಂತ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಸಮಾನ ನಮಸ್ಕಾರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯ ನರ್ಮದಾ ರೆಡ್ಡಿ ಮಾತನಾಡಿ, ನವೀನ್ ಕಿರಣ್ ಅವರ ಅಭಿಮಾನಿಗಳಾಗಿದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇವೆ ವಿದ್ಯಾರ್ಥಿಗಳಾದ ನೀವು ಒಳ್ಳೆಯ ಗುಣ ಹೊಂದಿ ಸಮಾಜಕ್ಕೆ ಹಾಗೂ ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ತಿಳಿಸಿದರು. ಕೆ ವಿ ನವೀನ್ ಕಿರಣ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ಮಾತನಾಡಿ, ಕೆ ವಿ ನವೀನ್ ಕಿರಣ್ ಅವರ ದಯಾ ಗುಣಗಳು ಜಿಲ್ಲಾಧ್ಯ0ತ ಹೆಸರು ಮಾಡಿದೆ. ಜಿಲ್ಲೆಯಲ್ಲಿ ಯಾರು ಮಾಡದ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ, ರಕ್ತದಾನ ವಿದ್ಯಾದಾನ, ಶಿಕ್ಷಣ ದಾನ, ಮಾಡಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ಅಂತಹವರ ಹುಟ್ಟುಹಬ್ಬವನ್ನು ಏಳು ದಿನಗಳ ಕಾಲ ಜಿಲ್ಲಾಧ್ಯ0ತ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಹೆನ್ರಿ ಪ್ರಸನ್ನ ಕುರ್ಮಾ. ಹೋಟೆಲ್ ರಾಮಣ್ಣ. ಲೀಡ್ ಬ್ಯಾಂಕ್ ಕವಿತಾ, ಶಿಕ್ಷಕರಾದ ಅಶ್ವತ್ಥಣ್ಣ, ಪಿಪಿ ಹೆಚ್ ಎಸ್ ಶಾಲೆಯ ಮುಖ್ಯ ಶಿಕ್ಷಕ ಎಂ ನಾರಾಯಣಸ್ವಾಮಿ, ಶ್ರೀನಿವಾಸಮೂರ್ತಿ, ಮಹಾಂತೇಶ್, ಪ್ರತಿಭಾ, ಮಂಜುಳಾ, ನರಸಿಂಹಮೂರ್ತಿ, ಶಿವಣ್ಣ ಇದ್ದರು.