ನರಗುಂದ ಬಂಡಾಯ ರೈತರ ಸ್ವಾಭಿಮಾನದ ಹೋರಾಟ
1 min readನರಗುಂದ ಬಂಡಾಯ ರೈತರ ಸ್ವಾಭಿಮಾನದ ಹೋರಾಟ
ರೈತ ಹುತಾತ್ಮರ ದಿನಾಚರಣಯೆಲ್ಲಿ ನಾರಾಯಣಸ್ವಾಮಿ
ರೈತರ ಮೇಲೆ ಗೋಲಿಬಾರ್ ಮಾಡಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಕರ್ನಾಟಕದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದ್ದರೂ, ರೈತರ ಪಾಲಿಗೆ ಇದೊಂದು ಸ್ವಾಭಿಮಾನದ ಹೋರಾಟವಾಗಿತ್ತು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ಹೇಳಿದರು.
ರೈತರ ಮೇಲೆ ಗೋಲಿಬಾರ್ ಮಾಡಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಕರ್ನಾಟಕದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದ್ದರೂ, ರೈತರ ಪಾಲಿಗೆ ಇದೊಂದು ಸ್ವಾಭಿಮಾನದ ಹೋರಾಟವಾಗಿತ್ತು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ಹೇಳಿದರು. ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ೪೪ನೇ ವರ್ಷದ ನರಗುಂದ ರೈತರ ಹುತಾತ್ಮ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಪೂರ್ವದಿಂದ ನಮ್ಮನ್ನಾಳುವ ಸರಕಾರಗಳು ದೇಶಕ್ಕೆ ಅನ್ನ ನೀಡುವ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿಕೊಂಡೇ ಬಂದಿವೆ. ರೈತರಿಗೆ ನೀರು, ಗೊಬ್ಬರ, ವಿದ್ಯುತ್ ನೀಡಿದರೆ ಸಾಕು ಕಷ್ಟಪಟ್ಟು ದುಡಿದು ಅನ್ನದ ಜತೆಗೆ ಚಿನ್ನ ಬೆಳೆದುಕೊಡುವ ಶಕ್ತಿ ರೈತರಿಗೆ ಇದೆ. ನಿಮ್ಮ ಯಾವ ಸಬ್ಸಿಡಿಗಳು ನಮಗೆ ಬೇಡ, ನಮ್ಮ ಉತ್ಪನ್ನಗಳಿಗೆ ಬೆಲೆ ಕಟ್ಟುವ ಹಕ್ಕು ನಮಗೆ ನೀಡಿದರೆ ಸಾಕು. ಇದನ್ನು ಮಾಡಲಾಗದ ವ್ಯವಸ್ಥೆ ರೈತನ ಲವತ್ತಾದ ಭೂಮಿ ಕಸಿದು ಕೈಗಾರಿಕೆಗಳಿಗೆ ಕೊಡುವ ಮೂಲಕ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ನೆಪದಲ್ಲಿ ಜಂಗಮಕೋಟೆ ಬಳಿ 3,500 ಎಕರೆ, ನಂದಿ ಗ್ರಾಮದ ಬಳಿ 300 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ರೈತರು ಸ್ವಯಂ ಪ್ರೇರಿತವಾಗಿ ಭೂಮಿ ನೀಡಲು ಮುಂದಾದರೆ ಅದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ ಒತ್ತಾಯ ಪೂರ್ವಕವಾಗಿ, ಯಾವ ಯಾವುದೋ ನೆಪ ಹೇಳಿ ವಶಕಡಿಸಿಕೊಳ್ಳಲು ಮುಂದಾಗುವುದಕ್ಕೆ ತೀವ್ರ ಖಂಡನೆಯಿದೆ. ಪಾರದರ್ಶಕ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಅವರ ಸರಕಾರ ಸಂಪೂರ್ಣ ಹಗರಣದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಹಿಂದಿನ ಸರಕಾರದ ತಪ್ಪುಗಳನ್ನು ಎತ್ತಿತೋರಿಸುವುದು ಸರಿಯಾದ ಪ್ರಜಾತಾಂತ್ರಿಕ ನಡೆಯಲ್ಲ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಗ ನೀಡಿದ ಜನಪರ ಆಡಳಿತವನ್ನೇ ಈಗಲೂ ನೀಡಲು ಮುಂದಾಗಬೇಕು. ನಮಗೆ ವಿದ್ಯುತ್ ನೀರು ಭೂಮಿ ಗೊಬ್ಬರ ಕೊಡಿ ನಾವು ನಿಮ್ಮನ್ನು ಸಾಕುತ್ತೇವೆ. ದೇವನಹಳ್ಳಿ ತಾಲೂಕು ಚೆನ್ನರಾಯಪಟ್ಟಣದಲ್ಲಿ ೮೫೦ ದಿನಗಳಿಂದ ಸತತವಾಗಿ ಹೋರಾಟ ನಡೆದಿದೆ. ಈ ಹಿಂದೆ ನೀವು ವಿರೋಧ ಪಕ್ಷದ ನಾಯಕರಾಗಿಗ ಫ್ರೀಡಂ ಪಾರ್ಕಿನಲ್ಲಿ ನಮಗೆ ನೀಡಿದ ವಾಗ್ದಾನ ಈಡೇರಿಸಿ. ನಿಮ್ಮ ಮಾತನ್ನು ಮರೆತು ನಡೆಯುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆ ಕುಡಿತಿನಿ ಬಳಿ ೧,೫೦೦ ಎಕರೆಗಾಗಿ ರೈತರು ಹೋರಾಟ ಮುಂದುವರೆಸಿದ್ದಾರೆ. ಇದನ್ನು ಮನಗಂಡು ರೈತಪರ ನಿಲುವು ತಾಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಜಿಲ್ಲಾಧ್ಯಕ್ಷ ಜಿ.ವಿ.ಶ್ರೀನಿವಾಸ್ ಸೇರಿ ನೂರಾರು ಮಂದಿ ರೈತರು ಹುತಾತ್ಮ ದಿನಾಚರನೆಯಲ್ಲಿ ಭಾಗವಹಿಸಿದ್ದರು.