ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್
1 min readಬಿಜೆಪಿಯವರು ಸಿದ್ದರಾಮಯ್ಯರ ರಾಜೀನಾಮೆ ಕೇಳುವುದು ಬಿಡಬೇಕು
ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್
ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದನ್ನು ಬಿಡಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ೪ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಸಮಸ್ಯೆ ಆಲಿಸಲು ಮುಂದಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, 24 ನೇ ವಾರ್ಡ್ಗೆ 14 ಕೋಟಿ ಅನುದಾನ ತರಲಾಗಿದ್ದು, ಅಭಿವೃದ್ದಿ ಕಾರ್ಯ ಶುರುವಾಗಿದೆ. ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ವಾರ್ಡ್ ಅಭಿವೃದ್ದಿಗೆ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಕೆಲವೇ ದಿನಗಳಲಿ ವಾರ್ಡ್ ನಂ ೧ ಹಾಗೂ ೨೪ ನೇ ವಾರ್ಡ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.
ವಾರ್ಡ್ ನಲ್ಲಿ ರಸ್ತೆ ಸಮಸ್ಯೆ ಯುಜಿಡಿ ಸಮಸ್ಯೆ ಹೆಚ್ಚಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ತಿಳಿಸಿದರು. ಈಗಾಗಲೇ ಕೋಟ್ಯಾಂತರ ಹಣ ವಾರ್ಡ ಗಳ ಅಭಿವೃದ್ದಿಗೆ ತರಲಾಗಿದೆ. ಅಭಿವೃದ್ದಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಬಿಜೆಪಿ ನಾಯಕರ ಪಟ್ಟಿನ ವಿಚಾರಕ್ಕೆ ಉತ್ತರಿಸಿ, ಇನ್ನು ಮುಂದೆ ಬಿಜೆಪಿಯವರು ರಾಜೀನಾಮೆ ಕೇಳುವುದನ್ನು ಬಿಡಬೇಕು, ಅವರನ್ನು ಕೇಳುವುದಕ್ಕೂ ಮುಂಚೆ ಕೇಂದ್ರದಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಮನ್ ರಾಜೀನಾಮೆ ಕೊಟ್ಟ ನಂತರ ಸಿದ್ದರಾಮಯ್ಯ ರಾಜೀನಾಮೆ ಕೇಳಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.