ನಗರಸಭಾ ಸದಸ್ಯ ಮಟಮಪ್ಪ ಜೆಡಿಎಸ್‌ನಿಂದ ಉಚ್ಚಾಟನೆ
1 min read
ನಗರಸಭಾ ಸದಸ್ಯ ಮಟಮಪ್ಪ ಜೆಡಿಎಸ್‌ನಿಂದ ಉಚ್ಚಾಟನೆ
ಸದಸ್ಯತ್ವ ರದ್ದುಗೊಳಲಿಸಲು ಡಿಸಿ ಗೆ ಪತ್ರ, ಮುಕ್ತಮುನಿಯಪ್ಪ
ಕಳೆದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಕಾರಣ, ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಆರ್. ಮಟಮಪ್ಪ ಅವರನ್ನ ಜೆಡಿಎಸ್‌ನಿಂದ ಉಚ್ಚಾಟಿಸಲಾಗಿದೆ. ಅವರ ಜತೆಗೆ ವೀಣಾರಾಮು ಅವರನ್ನು ಉಚ್ಚಾಟಿಸಲಾಗಿದ್ದು, ಇಬ್ಬರ ನಗರಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಡಿಸಿಗೆ ಪತ್ರ ಬರೆಯಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ತಿಳಿಸಿದ್ದಾರೆ.
ಜೆಡಿಎಸ್ ಸರ್ವೋಚ್ಚ ನಾಯಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನವನ್ನು ಚಿಕ್ಕಬಳ್ಳಾಪುರ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ, ಕಾರ್ಯಾಧ್ಯಕ್ಷ ಕೆ.ಆರ್ ರೆಡ್ಡಿ ನೇತೃತ್ವದಲ್ಲಿ ಬೃಹತ್ ಕೇಕ್ ಕತ್ತರಿಸಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಚರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಹಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು, ಅವರ ಸೇವೆ ರಾಜ್ಯದ ಜನರಿಗೆ ಮತ್ತಷ್ಟು ಸಿಗಬೇಕು ಎಂದರು.
ಅಲ್ಲದೆ ಚಿಕ್ಕಬಳ್ಳಾಪುರದಲ್ಲಿ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಜೆಡಿಎಸ್‌ನಿಂದ ಗೆದ್ದು, ಉಪಾಧ್ಯಕ್ಷರಾಗಿದ್ದ ವೀಣಾ ರಾಮು ಹಾಗು ೯ನೇ ವಾರ್ಡಿನ ನಗರಸಭಾ ಸದಸ್ಯ ವಿಪ್ ಉಲ್ಲಂಘಿಸಿ ಎನ್‌ಡಿಎ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ. ಇದು ವಿರೋಧಿ ಚಟುವಟಿಕೆಯಾಗಿದ್ದು, ರಾಜ್ಯಾಧ್ಯಕ್ಷರ ಅನುಮತಿ ಮೇರೆಗೆ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈಗ ಅವರ ನಗರಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಕೆ ಬಿ ಮುನಿರಾಜು, ಪ್ರಭಾ ನಾರಾಯಣಗೌಡ, ಬಂಡ್ಲುಶ್ರೀನಿವಾಸ್, ಶ್ರೀಧರ್, ಶಾಂತಮೂರ್ತಿ, ನಾರಾಯಣಸ್ವಾಮಿ ಇದ್ದರು.