ಬೆಂಗಳೂರು ಏರ್‌ಪೋರ್ಟ್ನಲ್ಲೂ ನಾಡಹಬ್ಬ ದಸರಾ ಸಂಭ್ರಮ..!
1 min readಬೆಂಗಳೂರು ಏರ್‌ಪೋರ್ಟ್ನಲ್ಲೂ ನಾಡಹಬ್ಬ ದಸರಾ ಸಂಭ್ರಮ..!
ಕೇ0ಪೇಗೌಡ ಏರ್‌ಪೋರ್ಟ್ನಲ್ಲಿ ದಸರಾ ಸಂಸ್ಕೃತಿಯ ವೈಭವ
ದಸರಾ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ಪ್ರಯಾಣಿಕರ ಮನಸೆಳೆಯುತ್ತಿವೆ ಏರ್‌ಪೋರ್ಟ್ ದಸರಾ ಗೊಂಬೆಗಳು
ವಿದೇಶಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಆಕರ್ಷಕ ಬೊಂಬೆಗಳು
ನಾಡಿನೆಲ್ಲೆಡೆ ನಾಡ ಹಬ್ಬ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ…ಅಂತೆಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಾಡ ಹಬ್ಬ ದಸರಾ ಹಬ್ಬದ ಸಂಸ್ಕೃತಿ-ಸಾ0ಸ್ಕೃತಿಕ ಸೊಬಗು ಮೆಳೈಸಿದ್ದು, ದೇಶ-ವಿದೇಶಿ ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ….ಹಾಗಾದ್ರೆ ಏರ್ ಪೋರ್ಟ್ನಲ್ಲಿ ಹೇಗಿದೆ ದಸರಾ ವೈಭವ ಅಂದ್ರಾ ಈ ಸ್ಟೋರಿ ನೋಡಿ…
ಹೀಗೆ….ಒಂದೆಡೆ ಯಕ್ಷಗಾನ ನೃತ್ಯ….ಮತ್ತೊಂದು ಕಡೆ ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ಭರ್ಜರಿ ಸ್ಟೆಪ್ಸ್ ಹಾಕುತ್ತಿರೋ ಏರ್‌ಫೋರ್ಟ್ನ ಸಿಬ್ಬಂದಿಗಳು…ಇನ್ನೂ ಪ್ರಯಾಣಿಕರನ್ನ ಕೈ ಬೀಸಿ ಕರೆಯುತ್ತಿರೋ ದಸರಾ ಬೊಂಬೆಗಳು..ಅ0ದಹಾಗೆ ಈ ಎಲ್ಲಾ ದೃಶ್ಯಗಳು ಕಂಡುಬ0ದಿದ್ದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ಹೌದು ನಾಡಿನೆಲ್ಲೆಡೆ ನಾಡ ಹಬ್ಬ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ದಸರಾ ಹಬ್ಬದ ಸಂಭ್ರಮ ಮೆಳೈಸಿದೆ…ದಸರಾ ಹಬ್ಬದ ಹಿನ್ನಲೆಯಲ್ಲಿ ಏರ್ಪೋರ್ಟ್ ನ ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಲ್ಲಿ, ನವರಾತ್ರಿಯ ವಿಶೇಷತೆಯನ್ನು ಸಾರುವ ದಸರಾ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.. ಏರ್ಪೋರ್ಟ್ ನ ಹೊರಗೆ ವೇದಿಕೆಯನ್ನು ನಿರ್ಮಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದ್ದು, ಡೊಳ್ಳು ಕುಣಿತ, ಯಕ್ಷಗಾನ, ತಮಟೆ ವಾದ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು ಪ್ರಯಾಣಿಕರ ಪ್ರೀತಿಗೆ ಪಾತ್ರವಾಗಿವೆ.
ದಸರಾ ಹಬ್ಬ ಅಂದ್ರೆ ಬೊಂಬೆಗಳ ಪ್ರದರ್ಶನ ಅಚ್ಚು ಮೆಚ್ಚು ಹಾಗಾಗಿ ಏರ್‌ಪೋರ್ಟ್ನ ಟರ್ಮಿನಲ್ 2 ರಲ್ಲಿ ದಸರಾ ಬೊಂಬೆಗಳ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯುತ್ತಿದೆ. ದೇಶ ವಿದೇಶಿಗಳಿಂದ ಬರುವ ಹಾಗೂ ನಿರ್ಗಮಿಸುವ ಎಲ್ಲಾ ಪ್ರಯಾಣಿಕರು ದಸರಾ ಗೊಂಬೆಗಳನ್ನ ಕಣ್ತುಂಬಿಕೊ0ಡು ಪೋಟೋ ಸೆಲ್ಪಿ ತೆಗೆದುಕೊಂಡು ಸಂತಸಗೊಳ್ಳುತ್ತಿದ್ದಾರೆ. ಇನ್ನೂ ಪ್ರಮುಖವಾಗಿ ವಿದೇಶಿ ಪ್ರಯಾಣಿಕರು ಬೆಂಗಳೂರಿಗೆ ಎಂಟ್ರಿ ಆಗುತ್ತಿದ್ದಂತೆ ಈ ನೆಲದ ಸಂಸ್ಕೃತಿಯನ್ನು ಕಣ್ತುಂಬಿಕೊ0ಡು ಪ್ರಯಾಣ ಬೆಳೆಸುತ್ತಿದ್ದು, ಏರ್‌ಪೋರ್ಟ್ ದಸರಾ ಸಂಭ್ರಮಕ್ಕೆ ಮನಸೋಲುತ್ತಿದ್ದಾರೆ.
ಕನ್ನಡ ಸಂಸ್ಕೃತಿ ಇಲಾಖೆಯೊಂದಿಗೆ ಜೊತೆಗೂಡಿರುವ ಏರ್ಪೋರ್ಟ್ ಆಡಳಿತ ಮಂಡಳಿ ಏರ್‌ಪೋರ್ಟ್ನಲ್ಲಿ ದಸರಾ ಹಬ್ಬದ ವಾತಾವರಣ ಸೃಷ್ಟಿ ಮಾಡಿ ಜನರನ್ನು ರಂಜಿಸುವ ಕಾಯಕ ಮಾಡಿದ್ದು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ.