ಕೊಳವೆ ಬಾವಿಗಳಿಗೆ ಆಯುಧ ಪೂಜೆ ನೆರವೇರಿಸಿದ ನಗರಸಭೆ
1 min readಕೊಳವೆ ಬಾವಿಗಳಿಗೆ ಆಯುಧ ಪೂಜೆ ನೆರವೇರಿಸಿದ ನಗರಸಭೆ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಂದ ವಿಶೇಷ ಪೂಜೆ
ಜನಪರ ಆಡಳಿತ ನಡೆಸುವ ಭರವಸೆ ನೀಡಿದ ಅಧ್ಯಕ್ಷ, ಉಪಾಧ್ಯಕ್ಷರು
ವಿಜಯ ದಶಮಿ ನಂತರ ನಗರದ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿರುವ ಕೊಳವೆ ಬಾವಿಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಇಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಹಮ್ಮಿಕೊಂಡಿದ್ದರು. ಆಯುಧ ಪೂಜೆ ಪ್ರಯುಕ್ತ ನಾಗರಿಕರ ದಾಹ ತೀರಿಸುತ್ತಿರುವ ಕೊಳವೆ ಬಾವಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಕ್ಕಲ ಮಡಗು ಜಲಾಶಯದ ನೀರು ಮಾತ್ರ ನಗರದ ನಾಗರಿಕರಿಗೆ ಒದಗಿಸಿದರೆ ಅದು ವರ್ಷ ಪೂರ್ತಿ ಒದಗಿಸಲು ಸಾಧ್ಯವಿಲ್ಲ. ಅಲ್ಲದೆ ಜಲಾಶಯದಲ್ಲಿ ನೀರು ಮುಗಿದರೆ ನಾಗರಿಕರ ಪಾಡೇನು ಎಂಬ ಆತಂಕ ಬೇರೆ. ಹಾಗಾಗಿಯೇ ಚಿಕ್ಕಬಳ್ಳಾಪುರ ನಗರಸಭೆ ಮೊದಲಿನಿಂದಲೂ ಕೊಳವೆ ಬಾವಿಗಳನ್ನು ನೆಚ್ಚಿಕೊಂಡಿದೆ. ನಗರದಾದ್ಯಂತ ಮಾತ್ರವಲ್ಲದೆ, ನಗರದ ಹೊರಭಗದಲ್ಲಿರುವ ಕಂದವಾರ ಕೆರೆ ಅಚ್ಚುಕಟ್ಟು ಮತ್ತು ಆಯಕಟ್ಟು ಪ್ರದೇಶಗಳಲ್ಲಿಯೂ ಕೊಳವೆ ಬಾವಿಗಳನ್ನು ಕೊರೆಯಿಸಿ, ನಾಗರಿಕರಿಗೆ ನೀರು ಒದಗಿಸಲಾಗುತ್ತಿದೆ.
ಹಾಗಾಗಿ ನಾಗರಿಕರ ದಾಹ ತೀರಿಸುತ್ತಿರುವ ಕೊಳವೆ ಬಾವಿಗಳಿಗೆ ಇಂದು ನಗರಸಬೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಜೆ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರಿಕ ದಾಹ ತೀರಿಸಲು ಪ್ರಾರ್ಥನೆ ಮಾಡಿದರು. ಮೊದಲಿಗೆ ೧ನೇ ವಾರ್ಡಿನ ವಾಪಸಂದ್ರದಲ್ಲಿರುವ ೫ ಕೊಳವೆ ಬಾವಿಗಳ ಬಳಿ ಅಧ್ಯಕ್ಷ, ಉಪಾಧ್ಯಕ್ಷರು ಪೂಜೆ ಸಲ್ಲಿಸಿದರು. ಅಲ್ಲಿಂದ ನಗರದ ಎಲ್ಲ ಕೊಳವೆ ಬಾವಿಗಳಿಗೂ ಪೂಜೆ ಸಲ್ಲಿಸಲಾಯಿತು.
ನವಗರದಲ್ಲಿ ಪ್ರಸ್ತುತ 1 ಲP್ಷÀಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಎಲ್ಲರ ದಾಹ ತೀರಿಸುತ್ತಿರುವುದು ಜಕ್ಕಲಮಡಗು ಜಲಾಶಯ ಮಾತ್ರವಲ್ಲದೆ ನಗರದಾದ್ಯಂತ ಕೊರೆದಿರುವ 140ಕ್ಕೂ ಹೆಚ್ಚು ಕೊಳವೆ ಬಾವಿಗಳಾಗಿವೆ. ಪ್ರಸ್ತುತ 126 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, 8 ಕೊಳವೆ ಬಾವಿಗಳು ಮಣ್ಣು ತುಂಬಿಕೊ0ಡ ಕಾರಣ ಅವುಗಳನ್ನು ಮೇಲೆತ್ತಲು ಆಗದೆ ಪಂಪು, ಮೋಟಾರುಗಳು ಸಿಕ್ಕಿಕೊಂಡಿವೆ. ಇನ್ನು ಉಳಿದ 6 ಕೊಳವೆ ಬಾವಿಗಳು ವಿವಿಧ ಕಾರಣಗಳಿಂದ ದುರಸ್ತಿಯಲ್ಲಿವೆ.
ಒಟ್ಟಾರೆಯಾಗಿ ಪ್ರಸ್ತುತ 126 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಕೊಳವೆ ಬಾವಿಗಳಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, 1ನೇ ವಾರ್ಡಿನ ನಗರಸಭೆ ಸದಸ್ಯರಾದ ಸುಮಾ ಶಶಿ ಶೇಖರ್ ಅವರು ಇಂದು ವಾರ್ಡಿನಲ್ಲಿ ಆಯುಧ ಪೂಜೆ ಹಮ್ಮಿಕೊಂಡಿದ್ದು, ವರ್ಷ ಪೂರ್ತಿ ವಾರ್ಡಿನ ಜನತೆಗೆ ಕುಡಿಯುವ ನೀರು ಒದಗಿಸುವ ಕೊಳವೆ ಬಾವಿಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಪ್ರಸ್ತುತ ನಗರದ ನಾಗರಿಕರಿಗೆ ಉತ್ತಮ ಸೇವೆಯ ಜೊತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ನಗರಸಭೆ ಆಡಳಿತ ಕೈ ಹಿಡಿದಿದ್ದು, ನಗರ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ನಿರ್ವಹಿಸುವ ಉದ್ದೇಶ ಹೊಂದಿದ್ದಾವೆ. ಜೊತೆಗೆ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ನಾಗರಿಕರಿಗೆ ಎಲ್ಲ ರೀತಿಯ ಸೇವೆ ಒದಗಿಸುವುದಾಗಿ ಭರವಸೆ ನೀಡಿದರು.