ಫುಟ್‌ಪಾತ್ ತೆರುವು ಆರಂಭಿಸಿದ ನಗರಸಭೆ ಅಧಿಕಾರಿಗಳು
1 min read
ಫುಟ್‌ಪಾತ್ ತೆರುವು ಆರಂಭಿಸಿದ ನಗರಸಭೆ ಅಧಿಕಾರಿಗಳು
ಜನಸಂಚಾರಕ್ಕೆ ತೊಂದರೆಯಾಗಿದ್ದ ಫುಟ್‌ಪಾತ್ ಒತ್ತುವರಿ
ಈಗಾಗಲೇ ನೋಟಿಸ್ ನೀಡಿ, ಇಂದು ತೆರುವಿಗೆ ಚಾಲನೆ
ಬೆಳ್ಳಂ ಬೆಳಗ್ಗೆ ಜೆಸಿಬಿ ಮೂಲಕ ತೆರುವು ಕಾರ್ಯಾಚರಣೆ
ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ನಗರಸಭೆ ಅಧಿಕಾರಿಗಳು ಉತ್ತಮ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದಶಕಗಳಿಂದ ಪಾದಚಾರಿ ಮಾರ್ಗ, ರಸ್ತೆ ಒತ್ತುವರಿ ಮಾಡಿಕೊಂಡು ವಾಹನ ಮತ್ತು ಜನ ಸಂಚಾಕ್ಕೆ ತೊಂದರೆ ನೀಡುತ್ತಿದ್ದ ವ್ಯಾಪಾರಿಗಳಿಗೆ ಇಂದು ಶಾಕ್ ನೀಡಲಾಗಿದ್ದು, ಬೆಂಗಳೂರು ರಸ್ತೆಯ ಒತ್ತುವರಿ ತೆರುವು ಮಾಡಲಾಯಿತು.
ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ಮಡಾಇಕೊಂಡ ಪರಿಣಾಮ ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸಬೇಕಾದ ಸ್ಥಿತಿ ಕಳೆದ ಹಲವು ದಶಕಗಳಿಂದಲೂ ಚಿಂತಾಮಣಿಯಲ್ಲಿ ಎದುರಾಗಿತ್ತು. ರಸ್ತೆಯ ಅಕ್ಕಪಕ್ಕದ ಅಂಗಡಿ ಮಾಲೀಕರು ರಸ್ತೆಗೆ ತಗಡಿನ ಶೀಟ್ ಹಾಕಿಕೊಂಡು ಸಂಚಾರಕ್ಕೆ ಕಿರಿಕಿರಿಯಾಗಿತ್ತು. ಈ ಹಿಂದೆ ಇದ್ದ ನಗರಸಭೆ ಅಧಿಕಾರಿಗಳು ಇವುಗಳ ತೆರುವಿನ ಬಗ್ಗೆ ಗಮನವನ್ನೇ ಹರಿಸಿರಲಿಲ್ಲ. ಇದರಿಂದಾಗಿ ನಗರದ ಎಲ್ಲ ರಸ್ತೆಗಳಲ್ಲಿಯೂ ಇದೇ ರೀತಿಯ ಒತ್ತುವರಿ ಮುಂದುವರಿದಿತ್ತು.
ಆದರೆ ನಗರಸಭೆ ಪೌರಾಯುಕ್ತ ಚಲಪತಿ ಅವರು ದಿಟ್ಟ ನಿರ್ಧಾರ ಕೈಗೊಂಡಿದ್ದು, ನಗರದಾದ್ಯಂತ ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ಮಾಡಿಕೊಂಡವರ ವಿರುದ್ಧ ಇಂದಿನಿ0ದ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಗರಸಭೆ ವಾಹನಗಳೊಂದಿಗೆ ಬೆಂಗಳೂರು ರಸ್ತೆಗೆ ಆಗಮಿಸಿದ ನಗರಸಭೆ ಅಧಿಕಾರಿಗಳು, ರಸ್ತೆ ಮತ್ತು ಫುಟ್ ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಆರಂಭಿಸಿದರು.
ಕೆಲ ವ್ಯಾಪಾರಿಗಳು ಫುಟ್‌ಪಾತ್ ಮೇಲೆ ಶೀಟ್‌ಗಳನ್ನು ಹಾಕಿಕೊಂಡು, ವ್ಯಾಪಾರದ ವಸ್ತುಗಳನ್ನು ಜೋಡಿಸುವುದು, ಇನ್ನು ಕೆಲವರು ಗೋಡೆಗಳನ್ನೇ ನಿರ್ಮಿಸಿಕೊಂಡಿದ್ದರು. ಈ ಎಲ್ಲ ಒತ್ತುವರಿಯನ್ನು ಮುಲಾಜಿಲ್ಲದೆ ತೆರುವು ಮಾಡಲಾಯಿತು. ಚಿಂತಾಮಣಿ ನಗರದ ಬೆಂಗಳೂರು ರಸ್ತೆ ಉದ್ದಕ್ಕೂ ದಶಕಗಳಿಂದ ಅಂಗಡಿ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡ ಪರಿಣಾಮ, ರಸ್ತೆ ಕಿರಿದಾಗಿ ಪಾದಚಾರಿಗಳಿಗೆ ಕಿರಿಕಿರಿಯಾಗಿತ್ತು.
ಇಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್, ಪೌರಾಯುಕ್ತ ಚಲಪತಿ ರಸ್ತೆಯಲ್ಲಿ ನಿಂತು ಅತಿಕ್ರಮಣವನ್ನು ನಗರಸಭೆಗೆ ಸೇರಿದ ಜೆಸಿಬಿ, ಟ್ರಾö್ಯಕ್ಟರ್‌ಗಳ ಮೂಲಕ ತೆರುವು ಮಡಾಇದರು. ಕಳೆದ ಒಂದು ವಾರದ ಹಿಂದೆ ಪೌರಾಯುಕ್ತ ಚಲಪತಿ ಅವರು ನಗರದ ಎಲ್ಲಾ ಅಂಗಡಿ ಮಾಲೀಕರಿಗೆ ಪಾದಚಾರಿ ಮಾರ್ಗವನ್ನು ಸ್ವಯಂ ಪ್ರೇರಿತರಾಗಿ ತೆರುವು ಗೊಳಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ ಆಟೋ ಮೂಲಕ ಪ್ರಚಾರ ಮಾಡಿಸಿ ಎಚ್ಚರಿಕೆ ಕೊಟ್ಟಿದ್ದರು.
ಇದರಿಂದ ಕೆಲ ಅಂಗಡಿ ಮಾಲೀಕರು ನಗರಸಭೆ ಎಚ್ಚರಿಕೆಗೆ ಯಾವುದೇ ಗಮನ ನೀಡದೆ ನಿರ್ಲಕ್ಷ ವಹಿಸಿದ್ದರು. ಇಂದು ಬೆಳಗ್ಗೆ ಜೆಸಿಬಿಗಳು ರಸ್ತೆಗೆ ಇಳಿದು ತೆರವುಗೊಳಿಸಿದ್ದನ್ನು ಕಂಡು ಚಿಂತಾಮಣಿ ನಾಗರಿಕರು ಸಂತಸಗೊ0ಡಿದ್ದಾರೆ. ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಚಿಂತಾಮಣಿಯನ್ನು ಅಭಿವೃದ್ಧಿ ಪಡಿಸಲು ಕನಸು ಕಂಡಿರುವ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅಲ್ಲದೆ ಒತ್ತುವರಿ ತೆರುವಿಗೆ ಪಕ್ಷಾತೀತವಾಗಿ ಮುಂದಾಗಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.