ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಬಹು ನಿರೀಕ್ಷಿತ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿದ ನಗರಸಭೆ

1 min read

ಬಹು ನಿರೀಕ್ಷಿತ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿದ ನಗರಸಭೆ

11 ಅಂಗಡಿಗಳು, ಶೌಚಾಲಯ, ಪಾರ್ಕಿಂಗ್ ಬಹಿರಂಗ ಹರಾಜು

ಶೀಘ್ರದಲ್ಲಿಯೇ ಸಂತೆ ಮಾರುಕಟ್ಟೆ 98 ಅಂಗಡಿಗಳ ಹರಾಜು

ಚಿಕ್ಕಬಳ್ಳಾಪುರ ನಗರಸಭೆ ಈ ಹಿಂದೆ ಹರಾಜು ಪ್ರಕ್ರಿಯೆಗಳನ್ನು ಘೋಷಣೆ ಮಾಡಿ, ಹರಾಜು ಮಾಡದೆ ಮುಂದೂಡಿದ ಅನೇಕ ನಿದರ್ಶನಗಳಿವೆ. ಆದರೆ ನಗರಸಭೆ ಆಡಳಿತ ಮಂಡಳಿ ರಚನೆಯಾದ ನಂತರ ಈ ಹರಾಜು ಪ್ರಕ್ರಿಯೆಗಳು ವೇಗ ಹೆಚ್ಚಿಸಿಕೊಂಡಿದ್ದು, ಇದರು ನಗರಸ`ೆ ಆದಾಯ ಹೆಚ್ಚಿಸಲು ಕಾರಣವಾಗಿದೆ.

ಹೌದು, ನಗರಸಭೆ ಮಾಲೀಕತ್ವದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳು, ಶೌಚಾಲಯಗಳು, ಪಾರ್ಕಿ ಶುಲ್ಕ ವಸೂಲಿ ಹೀಗೆ ಹಲವು ನಗರಸಭೆಗೆ ಆದಾಯ ಬರುವ ಮೂಲಗಳತ್ತ ಗಮನ ಹರಿಸುವುದೆಂದರೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅಲರ್ಜಿ ಎಂಬ0ತಾಗಿತ್ತು. ಇದಕ್ಕೆ ನಿದರ್ಶನವಾಗಿ ಬರೋಬ್ಬರಿ ಮೂರು ಬಾರಿ ಹರಾಜು ಪ್ರಕ್ರಿಯೆ ಘೋಷಣೆ ಮಾಡಿ ಮತ್ತು ರದ್ದು ಪಡಿಸಲಾಗಿದೆ. ಆದರೆ ಮೊನ್ನೆಯಷ್ಟೇ ಹಲವು ಆದಾಯದ ಮೂಲಗಳನ್ನು ಹರಾಜು ಮಡಾಇದ ನಗರಸಭೆ ಇಂದು ಮತ್ತೆ ಹಲವು ಮೂಲಗಳನ್ನು ಹರಾಡು ಮಾಡುವಲ್ಲಿ ಯಶಸ್ವಿಯಾಗಿದೆ.

ಚಿಕ್ಕಬಳ್ಳಾಪುರ ನಗರಸಭೆ ಹಿಂಭಾಗದಲ್ಲಿ ಕೃಷ್ಣಾ ಚಿತ್ರಮಂದಿರದ ಮುಂಭಾಗದಲ್ಲಿ ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಕಳೆದ ಹಲವಾರು ವರ್ಷಗಳಿಂದ ಯಾರಿಗೂ ಬಾಡಿಗೆಗೆ ನೀಡದೆ ಬಿದ್ದಿತ್ತು. ಇದರಿಂದ ನಗರಸಭೆಗೆ ಬರುವ ಆದಾಯಕ್ಕೆ ನಷ್ಟವಾಗಿತ್ತು. ಆದರೆ ಇಂದು 11 ಅಂಗಡಿ ಮಳಿಗೆಗಳನ್ನು ಹರಾಜು ಮಾಡಲಾಯಿತು. ಬಹಿರಂಗ ಹರಾಜಿನಲ್ಲಿ 11 ಮಂದಿ ಪಾಲ್ಗೊಂಡಿದ್ದು, 11 ಅಂಗಡಿಗಳನ್ನು ನಗರಸಭೆ ನಿಗಧಿ ಮಾಡಿದ ಬಾಡಿಗೆಯಂತೆ ಪಡೆದಿದ್ದಾರೆ.

ಇನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸೋದು ಸೇರಿದಂತೆ ತೀವ್ರ ಸಮಸ್ಯೆ ಈವರೆಗೂ ಇತ್ತು. ಈಗ ಅದಕ್ಕೆ ಕಡಿವಾಣ ಬೀಳುವ ಸಾಧ್ಯತೆಗಳಿವೆ. ಏಕೆಂದರೆ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡಲು ಇಂದು ಬಹಿರಂಗ ಹರಾಜು ನಡೆಸಲಾಗಿದೆ. ಹಾಗಾಗಿ ಇನ್ನು ಮುಂದೆ ಖಾಸಗಿ ಬಸ್ ನಿಲ್ದಾಣಕ್ಕೆ ಯಾವುದೇ ವಾಹನ ಬಂದರೂ ಅದಕ್ಕೆ ಪಾರ್ಕಿಂಗ್ ಶುಲ್ಕ ಪಾವತಿಸಬೇಕಿದ್ದು, ಇನ್ನು ಅಡ್ಡಾದಿಡ್ಡಿ ವಾಹನ ನಿಲುಗಡೆ ಕಿರಿಕಿರಿಗೆ ತೆರೆ ಬೀಳುವ ಸಾಧ್ಯತೆ ಇದೆ.

ಅಲ್ಲದೆ ಇದೇ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯವನ್ನೂ ಇಂದು ಹರಾಜು ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆ ಒಂದು ವರ್ಷದ ಮಟ್ಟಿಗೆ ಪಾವತಿಸಿ, ಬಳಸುವ ಶೌಚಾಲಯವಾಗಿ ಬದಲಾಗಿದ್ದು, ನಗರದಲ್ಲಿ ಶೌಚಾಲಯಗಳಿಲ್ಲದೆ ಸಾರ್ವಜನಿಕರು ಈವರೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಇದೆ.

ಬಹಿರಂಗ ಹರಾಜು ಪ್ರಕ್ರಿಯೆ ಕುರಿತು ನಗರಸಭೆ ಅಧ್ಯಕ್ಷ ಗಜೇಂದ್ರ ಮಾತನಾಡಿ, ಬಹಿರಂಗ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. 11 ಅಂಗಡಿ ಮಳಿಗೆಗಳ ಹರಾಜು ಇಂದು ನಡೆದಿದೆ. 8 ಅಂಗಡಿಗಳು 4,317 ರುಪಾಯಿ ಮತ್ತು ೩ ಅಂಗಡಿಗಳು 3,700 ರುಪಾಯಿಗೆ ಹರಾಜಾಗಿದ್ದು, ಸಾರ್ವಜನಿಕರು ಇನ್ನು ಮುಂದೆ ಆ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದರು.

ಜೊತೆಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆ ಹರಾಜು ನಡೆದಿದ್ದು, 3.42 ಲಕ್ಷ ರುಪಾಯಿಗೆ ವಾರ್ಷಿಕ ನಿರ್ವಹಣೆಗಾಗಿ ಸಾರ್ವಜನಿಕರು ಶೌಚಾಲಯ ಪಡೆದಿದ್ದಾರೆ. ಅದೇ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಶುಲ್ಕಕ್ಕೂ ಹರಾಜು ನಡೆದಿದ್ದು, 5.25 ಲಕ್ಷಕ್ಕೆ ಹರಾಜಾಗಿದೆ. ಈ ಎಲ್ಲ ಹರಾಜು ಪ್ರಕ್ರಿಯೆಗಳೂ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದ್ದು, ಒಂದು ವರ್ಷದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಕೂಗಿರುವ ಮೊತ್ತ ಪಾವತಿಸಿ ಅವರು ಅಳ್ಲಿ ನಗರಸಭೆ ನಿಗಧಿ ಮಾಮಾಡಿದ ಭರದಂತೆ ವಸೂಲಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಳ್ಲದೆ ಮುಂದಿನ ದಿನಗಳಲ್ಲಿ ಐಡಿಎಎಸ್‌ಎಂಟಿಯಿ0ದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಮತ್ತು ಸಂತೆ ಮಾರುಕಟ್ಟೆಯಲ್ಲಿರುವ 98 ಅಂಗಡಿ ಮಳಿಗೆಗಳ ಹರಾಜು ನಡೆಯಲಿದೆ. ನಾಗರಿಕರು ನಗರಸಭೆಗೆ ಕಟ್ಟಬೇಕಾದ ತೆರಿಗೆಯನ್ನು ಕಾಲ ಕಾಲಕ್ಕೆ ಪಾವತಿಸುವಂತೆ ಅಧ್ಯಕ್ಷರು ಮನವಿ ಮಾಡಿದರು.

ಉಪಾಧ್ಯಕ್ಷ ನಾಗರಾಜ್ ಜೆ ಮಾತನಾಡಿ, ನಗರಸಭೆಯಿಂದ ಅಂಗಢಿ ಮಳಿಗೆಗಳು, ಖಾಸಗಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್, ಶೌಚಾಲಯ ನಿರ್ವಹಣೆಯನ್ನು ಒಂದು ವರ್ಷದ ಅವಧಿಗೆ ಬಹಿರಂಗ ಹರಾಜು ನಡೆಸಲಾಗಿದೆ. ನಗರಸಭೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ನಿರೀಕ್ಷೆಗಿಂತ ಹೆಚ್ಚು ಜನ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಪಾರ್ಕಿಂಗ್ ಶುಲ್ಕ ಕಳೆದ ಬಾರಿ 4.02 ಲಕ್ಷಕ್ಕೆ ಪಡೆದಿದ್ರೆ, ಈ ಬಾರಿ 5.25 ಲಕ್ಷ ಕ್ಕೆ ಹರಾಜಾಗುವ ಮೂಲಕ ನಗರಸಭೆ ಆದಾಯ ಹೆಚ್ಚಳವಾಗಿದೆ ಎಂದರು. ಶೌಚಾಲಯ ಹರಾಜಿನಲ್ಲಿಯೂ ಉತ್ತಮ ಮೊತ್ತಕ್ಕೆ ಕೂಗಿದ್ದು, ತಮ್ಮ ಅವಧಿಯಲ್ಲಿ ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ, ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಸಂಕಲ್ಪದೊ0ದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *