ಜೆಡಿಎಸ್ ಮುಕ್ತಾ ಮಾಡಲಿದ್ದಾರೆ ಮುಕ್ತಾಮುನಿಯಪ್ಪ
1 min readಜೆಡಿಎಸ್ ಮುಕ್ತಾ ಮಾಡಲಿದ್ದಾರೆ ಮುಕ್ತಾಮುನಿಯಪ್ಪ
ನಗರಸಭಾ ಸದಸ್ಯ ಮಟಮಪ್ಪ ವಾಗ್ದಾಳಿ
ಚಿಕ್ಕಬಳ್ಳಾಪುರ ಜೆಡಿಎಸ್‌ನಲ್ಲಿ ಮುಂದುವರಿದ ಮಾತಿನ ಸಮರ
ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್‌ನ್ನು ಮುಕ್ತಾ ಮಾಡುವ ಉದ್ಧೇಶದಿಂದಲೇ ಮುಕ್ತ ಮುನಿಯಪ್ಪ ಇದ್ದು, ಪಕ್ಷ ಸಂಘಟನೆ ಮಾಡುವ ಬದಲು ಪಕ್ಷ ಹೀನಾಯ ಸ್ಥಿತಿಗೆ ತಲುಪಲು ಮುಕ್ತ ಮುನಿಯಪ್ಪ ಕಾರಣ ಎಂದು ನಗರಸಭಾ ಸದಸ್ಯ ಆರ್. ಮಟಮಪ್ಪ ಆರೋಪಿಸಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್ ನಗರಸಭಾ ಸದಸ್ಯ ಆರ್. ಮಟಮಪ್ಪ, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರೋದು ನಿಜ, ಆದರೆ ಯಾರಿಗೂ ಸುಳ್ಳು ಹೇಳಿಲ್ಲ. ಜೆಡಿಎಸ್ ನಾಯಕರು ಆಡಿರುವುದೆಲ್ಲ ಸುಳ್ಳು ಎಂದು ತಿರುಗೇಟು ನೀಡಿದರು. ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರು ಅಕ್ಟೋಬರ್ 28ರಂದು ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಆದರೆ ಆ ದಿನ ಕುಮಾರಸ್ವಾಮಿ ಬೇರೆಡೆ ಇದ್ದರು. ಅಂದಿನ ಪತ್ರ ಹೇಗೆ ಬರೆದರು ಎಂದು ಪ್ರಶ್ನಿಸಿದರು.
ಅಡ್ಡಮತದಾನದ ಕುರಿತು ಈವರೆಗೂ ತಮ್ಮ ಬಳಿ ಯಾರೂ ಸಮಜಾಯಿಷಿ ಕೇಳಲಿಲ್ಲ. ಇಂದು ತಿರುಚಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ನಾನು ದುಡ್ಡು ಪಡೆದಿರುವುದಾಗಿ ಆರೋಪಿಸಿದ್ದಾರೆ. ಆದರೆ ನಾನು ದೇವರ ಮುಂದೆ ಪ್ರಮಾಣ ಮಾಡುತ್ತೇನೆ, ನೀವು ಮಾಡುತ್ತೀರಾ ಎಂದು ಸವಾಲು ಹಾಕಿದರು. ಬಾಗೇಪಲ್ಲಿ ಮತ್ತು ಚಿಂತಾಮಣಿ ನಗರಸಭೆಗಳಲ್ಲಿ ಅಡ್ಡಮತದಾನ ನಡೆದಾಗ ಏನು ಕ್ರಮ ಕೈಗೊಂಡಿದ್ದೀರಿ, ಇಂತಹುದರಿ0ದ ನ್ಯಾಯ ಪಾಠ ಕೇಳುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಚಿಕ್ಕಬಳ್ಳಾಪುರ ದಲ್ಲಿ ಬೆಳೆದಿದ್ದೇನೆ, ಪಾಕಿಸ್ತಾನದಿಂದ ಬಂದಿಲ್ಲಾ, ಬಾಂಗ್ಲಾದೇಶ ದಿಂದ ಬಂದಿಲ್ಲಾ, ಆದರೆ ನೀವು ಇಂದು ಬೆಳೆಯುತ್ತಿರುವುದು ಬೆಂಗಳೂರಿನಲ್ಲಿ. ನನ್ನ ಬಗ್ಗೆ ತೇಜೋವಧೆ ಮಾಡುತ್ತಿದ್ದಾರೆ. ಆದರೆ ನಾನು ಬೇರೆ ಊರಿನವರು ಎಂದು ನಿಮ್ಮ ಬಳಿ ದಾಖಲೆ ಇದ್ರೆ ಹೇಳಿ, ನಾನು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ. ಇದರ ಬಗ್ಗೆ ಕುಮಾರಸ್ವಾಮಿ ಅವರು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮುಕ್ತಾ ಮುನಿಯಪ್ಪ ಗ್ರಾಪಂ ಚುನಾವಣೆ ಸೋತಿದ್ದಾರೆ. ಇವರು ಜೆಡಿಎಸ್ ಪಕ್ಷವನ್ನು ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಧ್ಯಸ್ಥಿಕೆ ಬಿಟ್ಟು ಪಕ್ಷದ ಒಳಜಗಳದಲ್ಲಿ ದಬ್ಬಾಳಿಕೆ ಮಾತುಗಳ ಮೂಲಕ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ದಬ್ಬಾಳಿಕೆ ಹೇಳಿಕೆ ನೀಡುವುದನ್ನು, ತೆಜೋವಧೆ ಮಾಡುವುದನ್ನು ಬೀಡಬೇಕು. ಮಾಜಿ ಶಾಸಕ ಬಚ್ಚೇಗೌಡರು, ಮುನೇಗೌಡರನ್ನು ತಪ್ಪು ದಾರಿಗೆ ತಳ್ಳಿ ಬೇರೆ ಪಕ್ಷಕ್ಕೆ ಹೋಗಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ಮುಕ್ತ ಮಾಡಲು ಮುಕ್ತಾಮುನಿಯಪ್ಪ ಜಿಲ್ಲೆಯಲ್ಲಿದ್ದಾರೆ ಎಂದು ಆರೋಪ ಮಾಡಿದ್ರು.
ಇಂತಹ ವ್ಯಕ್ತಿ ಇಂದು ನಮಗೆ ನೀತಿ ಪಾಠ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಮುಕ್ತಾ ಮುನಿಯಪ್ಪ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಯಾಕೆ ಹಾಕುತ್ತಿರುವುದು ಎಂದು ಗೋತ್ತಾಗುತ್ತಿಲ್ಲಾ ಎಂದು ತಿರುಗೇಟು ನೀಡಿದರು.