ಕೆಸರು ಗದ್ದೆಯಂತಾದ ಹೂವಿನ ಮಾರುಕಟ್ಟೆ
1 min readಕೆಸರು ಗದ್ದೆಯಂತಾದ ಹೂವಿನ ಮಾರುಕಟ್ಟೆ
ವಹಿವಾಟು ನಡೆಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಮಾರುಕಟ್ಟೆ
ರೈತರು, ವ್ಯಾಪಾರಿಗಳಿಗೆ ತೀವ್ರ ತೊಂದರೆ
ಚಿಕ್ಕಬಳ್ಳಾಪುರ ಹೂವಿನ ರೈತರ ಟೈಮೇ ಸರಿಯಿಲ್ಲ ಎಂಬ ಪರಿಸ್ಥಿತಿ ಇದೆ. ಇದೀಗ ಹೂವಿನ ರೈತರು ಮಾತ್ರವಲ್ಲದೆ ವ್ಯಾಪಾರಿಗಳೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಾಗಿದೆ.
ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಹೂವಿನ ಮಾರುಕಟ್ಟೆ ಕೆಸರುಗದ್ದೆಯಂತಾಗಿದೆ. ಇದರಿಂದ ಹೂವಿನ ರೈತರು ಮತ್ತು ವ್ಯಾಪಾರಿಗಳು ತೀವ್ರ ಪರದಾಡುತ್ತಿದ್ದು, ಆದಷ್ಟು ಶೀಘ್ರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಿಕೊಡುವ ಮೂಲಕ ವ್ಯಾಪಾರಿಗಳು ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟ ಪಾರುಮಾಡುವಂತೆ ಕೋರಿದ್ದಾರೆ.
ಸತತವಾಗಿ ಎರಡು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಹೂವಿನ ಮಾರುಕಟ್ಟೆ ಕೆಸರುಗದ್ದೆಯಂತಾಗಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊ0ಡು ಆಳ ತಿಳಿಯದೆ ಹೂವಿನೊಂದಿಗೆ ಮಾರುಕಟ್ಟೆಗೆ ಬರುವ ರೈತರ ವಾಹನಗಳು ಮುಗುಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗೌರಿಗಣೇಶ, ದಸರಾ ಹಬ್ಬಗಳು ಮುಗಿದ ಕಾರಣ ಹೂವಿನ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಅತ್ತ ಬೆಲೆಯೂ ಸಿಗದೆ, ಇತ್ತ ಸುರಕ್ಷಿತವೂ ಇಲ್ಲದ ಸ್ಥಿತಿಯನ್ನು ರೈತರು ಮತ್ತು ವ್ಯಾಪಾರಿಗಳು ಎದುರಿಸುತ್ತಿದ್ದಾರೆ.
ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಕ್ಯಾಂಪಸ್ ಬಳಿ ಇರುವ ತಾತ್ಕಾಲಿಕ ಹೂವಿನ ಮಾರುಕಟ್ಡೆ ಕೆಸರುಗಯಾಗಿದೆ. ಐದಾರು ಎಕೆರೆ ಪ್ರದೇಶದ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಹೂವಿನ ಮಾರುಕಟ್ಟೆ ಯಲ್ಲಿ ಎಲ್ಲಂದರಲ್ಲಿ ಮಳೆ ನೀರು ನಿಂತಿದೆ. ಹಳ್ಳ ಹಾಗೂ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನಿಂತಿರೋದ್ರಿ0ದ ರೈತರು ಮಾರುಕಟ್ಟೆಯಲ್ಲಿ ಓಡಾಡಲು ಪರದಾಡುವಂತಾಗಿದೆ. ಜಡಿಮಳೆಯಿಂದ ರೈತರು ಹೂ ಕಟಾವು ಮಾಡಲು ಅಡ್ಡಿಯಾಗುತ್ತಿದೆ.