ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಡಾ. ಕೆ ಸುಧಾಕರ್
1 min read2023-24 ಸಾಲಿ 81ನೇ ಸರ್ವ ಸದಸ್ಯರ ಸಭೆ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಡಾ. ಕೆ ಸುಧಾಕರ್
ಚಿಕ್ಕಬಳ್ಳಾಪುರ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2023-24ನೇ ಸಾಲಿನ 81ನೇ ಸರ್ವ ಸದಸ್ಯರ ಸಭೆ ಸಂಸದ ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು..
ಚಿಕ್ಕಬಳ್ಳಾಪುರ ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2023-24ನೇ ಸಾಲಿನ 81ನೇ ಸರ್ವ ಸದಸ್ಯರ ಸಭೆ ಸಂಸದ ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,
ಈ ವೇಳೆ ಮಾತನಾಡಿದ ಅವರು ಕೃಷಿಯಲ್ಲಿ ತೊಡಗಿರುವ ರೈತರಿಗೆ ಆರ್ಥಿಕ ನೆರವು ನೀಡುವಲ್ಲಿ ಸಹಕಾರಿ ಬ್ಯಾಂಕುಗಳು ಪಾತ್ರ ಬಹಳ ದೊಡ್ಡದಿದ್ದು, ಸುಮಾರು ೮,೫೦೦ಕ್ಕೂ ಹೆಚ್ಚು ರೈತರು ಸದಸ್ಯರಾಗಿರುವ ಈ ಬ್ಯಾಂಕ್ ಅಕ್ಷರಶಃ ರೈತರ ಬ್ಯಾಂಕ್ ಆಗಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತರು ಬೆಳೆಯುವ ತರಕಾರಿ, ಹಣ್ಣು, ಹೈನುಗಾರಿಕೆಯಿಂದ ಉತ್ಪಾದನೆ ಮಾಡುವ ಹಾಲು ಇಡೀ ಬೆಂಗಳೂರು ಮಹಾನಗರಕ್ಕೆ ದಿನನಿತ್ಯದ ಆಹಾರ ಒದಗಿಸುತ್ತಿದ್ದು, ನಮ್ಮ ರಾಜ್ಯದ ಮತ್ತು ದೇಶದ ಅಭಿವೃದ್ದಿಯಲ್ಲಿ, ಆರ್ಥಿಕ ಪ್ರಗತಿಯಲ್ಲಿ ಈ ಭಾಗದ ರೈತರ ಪಾತ್ರ ಬಹಳ ದೊಡ್ಡದಿದೆ. ಅತ್ಯುತ್ತಮ ನಿರ್ವಹಣೆ ಮೂಲಕ ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭವೃದ್ದಿ ಬ್ಯಾಂಕನ್ನು ಲಾಭದಲ್ಲಿ ನಡೆಸುತ್ತಿರುವ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷ ಪ್ರಸಾದ್, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ ನಾಗರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಮರಳುಕುಂಟೆ ಕೃಷ್ಷಮೂರ್ತಿ, ಜಗಧೀಶ್, ಕೇಶವರೆಡ್ಡಿ, ಮುನೇಗೌಡ ಇನ್ನಿತರರು ಉಪಸ್ಥಿತರಿದ್ದರು.