ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ ಸಂಸದ ಸುಧಾಕರ್
1 min readಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ ಸಂಸದ ಸುಧಾಕರ್
ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿಯಲ್ಲಿ ಅಮೃತಗಂಗೆ
ದೇವಾಲಯ ಅಭಿವೃದ್ಧಿಗೂ ಸಹಕಾರ ನೀಡಿದ್ದ ಸಂಸದರು
ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿಯಲ್ಲಿ ಅಮೃತ ಗಂಗೆ ಶುದ್ಧ ನೀರಿನ ಘಟಕಕ್ಕೆ ಇಂದು ಸಂಸದ ಡಾ.ಕೆ. ಸುಧಾಕರ್ ಚಾಲನೆ ನೀಡಿದರು. ಈ ಹಿಂದೆ ಸುಧಾಕರ್ ಅವರು ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಅವಧಿಯಲ್ಲಿ ಈ ಗ್ರಾಮದಲ್ಲಿ ಅಮೃತಗಂಗೆ ಶುದ್ಧ ನೀರಿನ ಘಟಕವನ್ನು ತಮ್ಮದೇ ಟ್ರಸ್ಟ್ನಿಂದ ಸ್ಥಾಪಿಸಿದ್ದರು. ಹಾಗಾಗಿ ಇಂದು ಆಗಮಿಸಿ, ಘಟಕಕ್ಕೆ ಚಾಲನೆ ನೀಡಿದರು.
ಕಳೆದ ಎರಡು ವಾರಗಳಿಂದ ಆಸ್ಟೆಲಿಯಾದ ಸಿಡ್ನಿಯಲ್ಲಿ ನಡೆದ ೬೭ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಸದರು, ಆಸ್ಟೆಲಿಯಾದಿಂದ ವಾಪಸ್ ಬಂದ ನಂತರ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು. ತಾಲೂಕಿನ ಗೇರಹಳ್ಳಿ ಗ್ರಾಮದಲ್ಲಿ ಸುಧಾಕರ್ ಚಾರಿಟಬಲ್ ಟ್ರಸ್ಟ್ನಿಂದ ಸ್ಥಾಪಿಸಿರುವ ಅಮೃತ ಗಂಗೆ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದ ಸಂಸದರು, ಗ್ರಾಮಸ್ಥರು ಇನ್ನು ಮುಂದೆ ಶುದ್ಧ ನೀರು ಸೇವಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಸದ ಡಾ.ಕೆ. ಸುಧಾಕರ್, ಗೇರಹಳ್ಳಿಯಲ್ಲಿ ಅಮೃತಗಂಗೆ ಶುದ್ಧ ನೀರಿನ ಘಟಕದ ಉದ್ಘಾಟನೆ ಮಾಡಲಾಗಿದೆ. ಈ ಹಿಂದೆ ತಮ್ಮದೇ ಟ್ರಸ್ಟ್ನಿಂದ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ, ಈ ಗ್ರಾಮದಲ್ಲಿ ನೆನ್ನೆ ತಾನೆ ಉದ್ಘಾಟನೆಯಾದ ದೇವಾಲಯಕ್ಕೂ ಸಹಕಾರ ನೀಡಲಾಗಿದೆ. ಅಲ್ಲದೆ ಗೇರಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕೋಟ್ಯಾಂತರ ರುಪಾಯಿ ಅನುದಾನ ನೀಡಿ ಅಭಿವೃದ್ದಿ ಮಾಡಲಾಗಿದೆ, ಹಾಗಾಗಿ ಜನರ ಪ್ರೀತಿ, ವಿಶ್ವಾಸ ತಮ್ಮ ಮೇಲೆ ಹೆಚ್ಚಾಗಿದ್ದು, ಅವರ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದರು.
ಇನ್ನು ಕೋವಿಡ್ ಹಗರಣಕ್ಕೆ ಸಂಬ0ಧಿಸಿ ಸರ್ಕಾರ ಎಸ್‌ಐಟಿ ರಚನೆ ಮಾಡಿರುವ ವಿಚಾರಕ್ಕೆ ಸಂಬ0ಧಿಸಿ ಪ್ರತಿಕ್ರಿಯೆ ನೀಡಿದ ಸಂಸದರು. ನ್ಯಾಯಮೂರ್ತಿ ಮೈಕೆಲ್ ಕುನ್ಙಾ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ಕೋವಿಡ್ ಹಗರಣ ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ಆ ಸಮಿತಿ ಪೂರ್ಣ ಪ್ರಮಾಣದ ವರದಿ ನಡೀಉವುದಕ್ಕೂ ಮೊದಲೇ ಸರ್ಕಾರ ಮಧ್ಯಂತರ ವರದಿಯನ್ನು ಬಲವಂತವಾಗಿ ಪಡೆದಿದೆ. ಆ ಸಮಿತಿ ಇನ್ನೂ ಅಂತಿಮ ವರದಿ ನೀಡಿಲ್ಲ ಎಂದರು.
ಇನ್ನು ನ.ಆ. ಮೂರ್ತಿಗಳ ಸಮಿತಿಯಿಂದ ಅಂತಿಮ ವರದಿ ಬರುವುದಕ್ಕೂ ಮೊದಲೇ ಏಳು ಪ್ರಭಾವಿ ಸಚಿವರನ್ನೊಳಗೊಂಡ ಸಂಪುಟ ಉಪ ಸಮಿತಿಯೊಂದನ್ನು ಸರ್ಕಾರ ರಚನೆ ಮಾಡಿದೆ. ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಿದ್ದು, ಈ ಉಪ ಸಮಿತಿ ತನಿಖೆ ಮಾಡುವುದಕ್ಕೂ ಮುನ್ನವೇ ಎಸ್‌ಐಟಿ ರಚನೆ ಮಾಡಿದ್ದಾರೆ. ಉಪ ಸಮಿತಿ ಮೇಲೆ ನಂಬಿಕೆ ಇಲ್ಲದ ಕಾರಣ ಎಸ್‌ಐಟಿ ರಚನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಸಂಸದರು.ಯಾವ ಆಯಾಮದಲ್ಲಾದರೂ ತನಿಖೆ ಮಾಡಿ, ಆದರೆ ಸತ್ಯ ಹೊರ ಬರಲಿ ಎಂದು ಹೇಳಿದರು.
ಅಲ್ಲದೆ ಅನೇಕ ವರ್ಷಗಳ ಹಿಂದೆ ನ್ಯಾಯಮೂರ್ತಿ ಕೆಂಪಯ್ಯ ಅವರ ವರದಿ ನೀಡಲಾಗಿದೆ. ಆ ವರದಿಯನ್ನೂ ಜನರ ಮುಂದೆ ಇಡಬೇಕು, ಜೊತೆಗೆ 2013ರಿಂದ 18ರವರೆಗೆ ನಡೆದ ಘಟನಾವಳಿಗಳ ಸಾಕ್ಷಿ ಇದೆ, ಅದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಸಂಸದ ಡಾ.ಕೆ. ಸುಧಾಕರ್ ಟಾಂಗ್ ನೀಡಿದರು.