ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕ ಸಹಕಾರ ಕೋರಿದ ಸಂಸದ ಡಾ. ಕೆ ಸುಧಾಕರ್
1 min readಎಂಜಿ ರಸ್ತೆ ಅಗಲೀಕರಣ ಸ್ಥಳಕ್ಕೆ ಭೇಟಿ ನೀಡಿದ ಸಂಸದರು
ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕ ಸಹಕಾರ ಕೋರಿದ ಸಂಸದ ಡಾ. ಕೆ ಸುಧಾಕರ್
ಗೌರಿಬಿದನೂರು ಟು ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಬಿರುಸಿನಿಂದ ಸಾಗಿದ್ದು ಇಂದು ನಗರದ ಎಂಜಿ ರಸ್ತೆಗೆ ಸಂಸದ ಕೆ. ಸುಧಾಕರ್ ಭೇಟಿ ಕೊಟ್ಟು ಅಧಿಕಾರಿಗಳ ಜೊತೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಹೌದು ಚಿಕ್ಕಬಳ್ಳಾಪುರ ಬಿಬಿ ರಸ್ತೆಯ ಮೂಲಕ ಗೌರಿಬಿದನೂರು ಟು ಚಿಕ್ಕಬಳ್ಳಾಪುರ ವರೆಗೂ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಕೆಲಸ ಗೌರಿಬಿದನೂರು ಕಡೆಯಿಂದ ರಸ್ತೆ ಅಗಲೀಕರಣ ಮಾಡಿಕೊಂಡು ಬಂದಿದ್ದು ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ಆಗಲಿಕರಣ ಕೆಲಸ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಆಗಲೀಕರಣಕ್ಕೆ ಸರ್ವೆ ಮಾಡಿ ಗುರುತುಗಳನ್ನು ಮಾಡಿ ಈಗಾಗಲೇ ಜೆಸಿಬಿಗಳ ಮೂಲಕ ಕಟ್ಟಡಗಳ ತೆರವು ಕಾರ್ಯ ಮಾಡುತ್ತಿದ್ದಾರೆ. ಸರ್ಕಾರಿ ಕಟ್ಟಡಗಳು ಮತ್ತು ಖಾಸಗಿ ಕಟ್ಟಡಗಳನ್ನು ತೆರವು ಕರ್ಯ ನಡೆಯುತ್ತಿದೆ. ಇನ್ನೂ ಖಾಸಗಿ ಕಟ್ಟಡಗಳ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳು ಕಾಲಾವಕಾಶ ನೀಡಿತ್ತು ಅದರಂತೆ ಕೆಲವರು ಮಾಲೀಕರು ಅಂಗಡಿಗಳನ್ನು ಮಾರ್ಕ್ ಮಾಡಿದ್ದ ಜಾಗಕ್ಕೆ ತೆರವು ಮಾಡಿಕೊಂಡಿದ್ದು ಉಳಿದ ಜಾಗಗಳನ್ನು ಜೆಸಿಬಿ ಮೂಲಕ ತೆರವು ಕಾರ್ಯ ಮಾಡುತ್ತಿದ್ದಾರೆ. ಇಂದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್ ಅವರು ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡು ರಸ್ತೆ ಕೆಲಸ ವೀಕ್ಷಣೆ ಮಾಡಿದ್ದಾರೆ.
ಇನ್ನೂ ಸಂಸದ ಸುಧಾಕರ್ ಎಪಿಎಂಸಿ ಮಾರುಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿಯ ಕೆಲಸ ಅಧಿಕಾರಿಗಳ ಜೊತೆ ವೀಕ್ಷಣೆ ಮಾಡಿದ್ದು.. ಇದು ರಾಷ್ಟ್ರೀಯ ಹೆದ್ದಾರಿ ಕೆಲಸ ವಾಗಿದ್ದು ೩೯೮ ಕೋಟಿ ಅನುಧಾನ ಬಿಡುಗಡೆಯಾಗಿ ಕಾಮಗಾರಿ ಕೆಲಸ ಬಿರುಸಿನಿಂದ ನಡೆಯುತ್ತಿದೆ. ರಸ್ತೆಯ ಮದ್ಯ ಭಾಗದಿಂದ ಎರಡು ಕಡೆಗೆ ೫೦ ಅಡಿಗಳಷ್ಟು ರಸ್ತೆ ಮಾಡುವುದಕ್ಕೆ ಕಾಮಗಾರಿ ನಡೆಯುತ್ತಿದೆ. ೩೦ ಅಡಿಗಳಷ್ಟು ರಸ್ತೆ, ಮದ್ಯದಲ್ಲಿ ೫ ಅಡಿಗಳಷ್ಟು ನಗರಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಇದಕ್ಕೆ ಚಿಕ್ಕಬಳ್ಳಾಪುರ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಸಂಸದ ಸುಧಾಕರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಎಪಿಎಂಸಿ ಮಾರುಕಟ್ಟೆಯಿಂದ ಶಿಡ್ಲಘಟ್ಟ ವೃತ್ತದ ವರೆಗೂ ಕಾಲ್ನಡಿಗೆಯಲ್ಲಿ ರಸ್ತೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.