ವಿದ್ಯಾರ್ಥಿನಿಲಯದ ಪಕ್ಕದಲ್ಲಿ ಶವಾಗಾರ.
1 min readಈ ಕುರಿತು ವಿದ್ಯಾರ್ಥಿ ನಿಲಯದ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಲಯದಲ್ಲಿ ೭೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.ಮುಂದೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ೩೦ ಮಂದಿ ವಿದ್ಯಾರ್ಥಿಗಳಿದ್ದಾರೆ. ನಿಲಯದ ಗೋಡೆಯ ಪಕ್ಕದಲ್ಲೆ ಶವಾಗಾರವಿದೆ. ಮೃತದೇಹಗಳನ್ನು ತಂದು ಶವಾಗಾರದಲ್ಲಿಟ್ಟು ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಕೆಲವೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವುದು ತಡವಾದಾಗ, ದುರ್ವಾಸನೆ ಬರುತ್ತಿರುತ್ತದೆ. ಮೃತರ ಸಂಬAಧಿಕರು ಬಂದು ಕಿರುಚಾಡುವುದನ್ನು ನೋಡುವ ವಿದ್ಯಾರ್ಥಿಗಳು ಭಯಭೀತರಾಗುತ್ತಿದ್ದಾರೆ. ಅವರ ಕೂಡಲೇ ಶವಾಗಾರವನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು. ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗವಾಗುತ್ತಿದ್ದು, ಅವರ ಮಾನಸಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ಎಂದು ಒತ್ತಾಯಿಸಿದರು.
ಇಲ್ಲಿನ ವಿದ್ಯಾರ್ಥಿ ರೆಡ್ಡಿಶೇಖರ್ ಮಾತನಾಡಿ, ನಾನು ಅಂತಿಮ ಪದವಿಯಲ್ಲಿ ಓದುತ್ತಿದ್ದೇನೆ. ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಪ್ರಥಮ ಪಿಯುಸಿಯಿಂದ ಹಿಡಿದು, ಎಂಜಿನಿಯರಿAಗ್ ವಿದ್ಯಾರ್ಥಿಗಳು ಇದ್ದೇವೆ. ನಮ್ಮ ಹಾಸ್ಟೆಲ್ ಗೋಡೆಯ ಪಕ್ಕದಲ್ಲೆ ಶವಾಗಾರವಿದೆ. ಯಾರಾದರೂ ಮೃತಪಟ್ಟಿರುವವರನ್ನು ತಂದು ರಾತ್ರಿಯಿಡಿ ಇಲ್ಲೆ ಇಟ್ಟಿರುತ್ತಾರೆ. ಕಿಟಕಿಗಳ ಮೂಲಕ ನೇರವಾಗಿ ಕಾಣಿಸುತ್ತದೆ. ರಕ್ತಸಿಕ್ತವಾಗಿರುವ ದೇಹಗಳನ್ನು ನೋಡಲು ತುಂಬಾ ಭಯವಾಗುತ್ತದೆ. ರಾತ್ರಿಯಿಡಿ ನಿದ್ರೆ ಹತ್ತುವುದಿಲ್ಲ. ತಿಂಡಿ, ಊಟ ಮಾಡುವುದಕ್ಕೂ ಆಗಲ್ಲ. ಶವಾಗಾರ ಸ್ಥಳಾಂತರ ಮಾಡಬೇಕು, ಇಲ್ಲವೇ ನಮ್ಮ ಹಾಸ್ಟೆಲ್ ಕಾಂಪೌAಡ್ ಗೋಡೆಯನ್ನು ಎತ್ತರಿಸಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಗೋಡೆಯ ಪಕ್ಕದಲ್ಲಿರುವ ಶವಾಗಾರವನ್ನು ಸ್ಥಳಾಂತರ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.