ಮೊಹಮ್ಮದ್ ಶಮಿ ಅಂತಹ ಪರಿಣಾಮಕಾರಿ ಬೌಲರ್‌ನ ನೋಡೆ ಇಲ್ಲ – ಗೌತಮ್ ಗಂಭೀರ್!
1 min read
1 year ago
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾದ ಅನುಭವಿ ವೇಗಿಯನ್ನು ಮಾಜಿ ಆರಂಭಿಕ ಗೌತಮ್ ಗಂಭೀರ್ ಪ್ರಶಂಸಿಸಿದ್ದಾರೆ. ಆರಂಭಿಕ 4 ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಶಮಿ, ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 5 ವಿಕೆಟ್ ಪಡೆದು ಬಲವಾಗಿ ಕಮ್ ಬ್ಯಾಕ್ ಮಾಡಿದರು. ಇದೀಗ ಇಂಗ್ಲೆಂಡ್ ವಿರುದ್ಧವೂ 4 ವಿಕೆಟ್ ಪಡೆದು ಟೀಮ್ ಇಂಡಿಯಾದ 100 ರನ್ ಗಳ ಗೆಲುವಿಗೆ ಬಲ ತುಂಬಿದ್ದನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ
ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿ 22ಕ್ಕೆ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಮಾಜಿ ಆರಂಭಿಕ ಗೌತಮ್ ಗಂಭೀರ್ ಮುಕ್ತ ಕಂಠದಿಂದ ಪ್ರಶಂಸಿಸಿದ್ದು, ಕಮ್ ಬ್ಯಾಕ್ ಪಂದ್ಯಗಳಲ್ಲಿ ಇಷ್ಟೊಂದು ಪರಿಣಾಮಕಾರಿ ಬೌಲಿಂಗ್ ಮಾಡಿದ ಬೌಲರ್ ಅನ್ನು ನಾನು ನೋಡಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ (ಅಕ್ಟೋಬರ್ 29) ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ (87ರನ್) ಅರ್ಧಶತಕ ನೆರವಿನಿಂದ ಭಾರತ ನೀಡಿದ 230 ರನ್ ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ತಂಡವನ್ನು ಅನ್ನು 129 ರನ್ ಗಳಿಗೆ ತಮ್ಮ ಬೌಲಿಂಗ್ ಚಮತ್ಕಾರದಿಂದ ಮೊಹಮ್ಮದ್ ಶಮಿ (22ಕ್ಕೆ4) ಕಟ್ಟಿಹಾಕುವ ಮೂಲಕ ಟೀಮ್ ಇಂಡಿಯಾದ 100 ರನ್ ಗಳ ಬೃಹತ್ ಅಂತರದ ಗೆಲುವಿಗೆ ಬಲತುಂಬಿದ್ದರು.