ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಶಾಸಕರ ಭೇಟಿ

1 min read

ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಶಾಸಕರ ಭೇಟಿ
ಕೈಗಾರಿಕಾ ಪ್ರದೇಶದ ಕೆಮಿಕಲ್ ಘಟಕದಲ್ಲಿ ಶಾಸಕರ ಪರಿಶೀಲನೆ
ನಿರ್ವಹಣೆ ಇಲ್ಲದೆ ಸೊರಗಿದ ಪ್ಲಾಂಟ್ ಕಂಡು ಶಾಕ್ ಆದ ಶಾಸಕರು

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನೀರನ್ನ ಕೆರೆಗಳಿಗೆ ಹರಿಸುತ್ತಿರುವ ದೂರುಗಳು ಮತ್ತು ಕೆರೆಗಳು ಮಲಿನಗೊಂಡು ಕೆರೆಗಳಲ್ಲಿನ ಮೀನು ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಶಾಸಕ ಧೀರಜ್ ಮುನಿರಾಜು ಕೆಐಎಡಿಬಿಯ ಕೆಮಿಕಲ್ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ದಿರ್ಢೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನೀರನ್ನ ಕೆರೆಗಳಿಗೆ ಹರಿಸುತ್ತಿರುವ ದೂರುಗಳು ಮತ್ತು ಕೆರೆಗಳು ಮಲಿನಗೊಂಡು ಕೆರೆಗಳಲ್ಲಿನ ಮೀನು ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಶಾಸಕ ಧೀರಜ್ ಮುನಿರಾಜು ಕೆಐಎಡಿಬಿಯ ಕೆಮಿಕಲ್ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ದಿರ್ಢೀ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟಕವನ್ನ ಸಂಪೂರ್ಣ ಪರಿಶೀಲನೆ ನಡೆಸಿದ ಶಾಸಕರು ಕಳಪೆ ನಿರ್ವಹಣೆ ಕಂಡು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಶಾಸಕರು, ಕೆಮಿಕಲ್ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕ 2011ರಲ್ಲಿ ನಿರ್ಮಾಣವಾಗಿ ಉದ್ಘಾಟನೆಯಾಗಿದು, ಈವರೆಗೂ ಒಮ್ಮೆಯೂ ಕೆಲಸ ಮಾಡಿದ ಉದಾಹರಣೆ ಇಲ್ಲ. ಕೆಐಎಡಿಬಿಯಿಂದ ಗುತ್ತಿಗೆ ಪಡೆದಿರುವವರು ಈ ಘಟಕವನ್ನ ಸಮರ್ಪಕವಾಗಿ ನಡೆಸಿಲ್ಲ. ಕೆಐಎಡಿಬಿ ಅಧಿಕಾರಿಗಳ ನಿರ್ಲಕ್ಷದ ಕುರಿತು ಕಳೆದ ಅಧಿವೇಶನದಲ್ಲಿಯೂ ಸಚಿವರಿಗೆ ಪ್ರಶ್ನೆ ಮಾಡಿದ್ದೇನೆ. ಈವರೆಗೂ ಅವರು ಏನೂ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸತ್ತು ಹೋಗಿದೆ ಎಂದರೆ ತಪ್ಪಾಗದು, ಬೆಂಗಳೂರಿನಿoದ ತಾಲ್ಲೂಕಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಸ್ಥಳಾಂತರ ಮಾಡಲು ಆರು ತಿಂಗಳ ಸಮಯ ಕೇಳಿದ್ದು, ವರ್ಷ ಕಳೆದರೂ ಕಿಂಚಿತ್ತೂ ಜವಾಬ್ದಾರಿ ಇಲ್ಲ. ಕಳೆದ ಕೆಡಿಪಿ ಸಭೆಗೂ ಪಿಸಿಬಿಯ ಯಾವೊಬ್ಬ ಅಧಿಕಾರಿ ಹಾಜರಾಗಿಲ್ಲ. ಇವರಿಗೆ ನೋಟಿಸ್ ನೀಡುವಂತೆ ತಾ.ಪಂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಅವರಿಗೆ ಕಳಪೆ ನಿರ್ವಹಣೆ ಬಗ್ಗೆ ತರಾಟೆ ತೆಗೆದುಕೊಂಡು ಕೆಮಿಕಲ್ ಶುದ್ಧೀಕರಣ ಘಟಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೈಫಲ್ಯವಾಗಿದೆ. ಬೀಗ ಹಾಕುವುದೊಂದೆ ಬಾಕಿ ಇದೆ. ಸಂಪೂರ್ಣ ನಿಂತು ಹೋಗಿರುವ ಘಟಕಕ್ಕೆ ಇಬ್ಬರೂ ಸೆಕ್ಯೂರಿಟಿಗಳು ಬಿಟ್ಟರೆ ಏನು ಇಲ್ಲ. ಮುಂದಿನ 6 ತಿಂಗಳಲ್ಲಿ ಪ್ಲಾಂಟ್ ರೆಡಿಯಾಗಿ ಸಂಪೂರ್ಣ ಕಾರ್ಯಾರಂಭ ಮಾಡಬೇಕು. ಮೊದಲಿಗೆ 5 ಎಂ.ಎಲ್.ಡಿ ಇದ್ದ ಸಾಮರ್ಥ್ಯ ಏಕಾಏಕಿ ಎರಡು ಎಂಎಲ್ಡಿಗೆ ಹೇಗೆ ಬಂತು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಸೂಚಿಸಿದರು.

ಈ ಭಾಗದ ಪ್ರತಿ ಕಂಪನಿಗೂ/ಫ್ಯಾಕ್ಟರಿಗೂ ನೋಟಿಸ್ ನೀಡಬೇಕು. ಪಟ್ಟಣ ಪಂಚಾಯತಿ ಅಧಿಕಾರಿಗಳು ಖುದ್ಧು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಕಾರ್ಖಾನೆಗಳು ತ್ಯಾಜ್ಯ ನೀರನ್ನ ಹೇಗೆ ವಿಲೇವಾರಿ ಮಾಡುತ್ತಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನರಸಿಂಹಮೂರ್ತಿಗೆ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

 

About The Author

Leave a Reply

Your email address will not be published. Required fields are marked *