ಅರ್ಹರಿಗೆ ನಿವೇಶನ ನೀಡಲು ಶಾಸಕರ ಸೂಚನೆ
1 min readಅರ್ಹರಿಗೆ ನಿವೇಶನ ನೀಡಲು ಶಾಸಕರ ಸೂಚನೆ
ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಸಲಹೆ
ಆಶ್ರಯ ಸಮಿತಿ ಸದಸ್ಯರು ನಗರದಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ನೀಡಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ಗೌರಿಬಿದನೂರು ನಗರಸಭೆ ಸಭಾಂಗಣದಲ್ಲಿ ತಾಲ್ಲೂಕು ಆಶ್ರಯ ಸಮಿತಿಗೆ ಸರ್ಕಾರದಿಂದ ಆಯ್ಕೆಯಾದ ಸದಸ್ಯರಿಗೆ ಪರಿಚಯಾತ್ಮಕ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ನಗರದಲ್ಲಿ ಕಡು ಬಡತನದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವ ಸಮಿತಿಯೇ ಆಶ್ರಯ ಸಮಿತಿ. ಈ ಸಮಿತಿಗೆ ಆಯ್ಕೆಯಾದ ಸದಸ್ಯರು ಶಾಸಕರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರೀಶೀಲನೆ ಮಾಡಿ ಪಟ್ಟಿ ಮಾಡಬೇಕು ಎಂದರು.
ಸಮಿತಿ ಸದಸ್ಯರು ಯಾವುದೇ ಲೋಪದೋಷಗಳಾಗದಂತೆ, ಭ್ರಷ್ಟಾಚಾರ ನೆಡಸದೆ, ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ನೂತನವಾಗಿ ಆಯ್ಕೆಯಾದ ಆಶ್ರಯ ಸಮಿತಿ ಸದಸ್ಯ ನಾಗೇಂದ್ರ ಮಾತನಾಡಿ, ನಮ್ಮನ್ನು ಆಯ್ಕೆ ಮಾಡಿದ ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ೨೦ ವರ್ಷಗಳಾಗಿವೆ, ಆಟೋ ಚಾಲಕರು, ಹೂವು ಮಾರುವವರು, ಬೀದಿ ಬದಿ ವ್ಯಾಪಾರ ಮಾಡುವವರ ಪರಿಸ್ಥಿತಿ ಗೊತ್ತಿದೆ. ಶಾಸಕರು ಮಾರ್ಗದರ್ಶನದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ನಗರಸಭೆ ಅಧ್ಯ ಲಕ್ಷಿö್ಮÃನಾರಾಯಣಪ್ಪ, ಉಪಾಧ್ಯಕ್ಷ ಪರೀಪ್ ಆಶ್ರಯ ಸಮಿತಿ ಸದಸ್ಯರಾದ ಕಲಂದರ್, ಗೋವಿಂದರಾಜು, ಲಕ್ಷಿö್ಮÃದೇವಮ್ಮ, ಶ್ರೀನಿವಾಸಗೌಡ, ಅಲ್ತಾಧ್, ಅಸ್ಲಾಂ ಇದ್ದರು.