ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಶಾಸಕರಿಂದ ಚಾಲನೆ
1 min readಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಶಾಸಕರಿಂದ ಚಾಲನೆ
ಮಕ್ಕಳಲ್ಲಿ ಪೌಷ್ಟಿಕತೆ ನಿವಾರಣೆಗೆ ಪ್ರತಿ ದಿನ ಕೋಳಿ ಮೊಟ್ಟೆಗೆ ಅವಶ್ಯಕ
ವಾರಕ್ಕೆ ಎರಡು ದಿನ ಅಲ್ಲ 6 ದಿನವೂ ಸಿಗಲಿದೆ ಮಕ್ಕಳಿಗೆ ಪೌಷ್ಟಿಕ ಮೊಟ್ಟೆ
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಉದ್ದೇಶದಿಂದ ಮದ್ಯಾಹ್ನದ ಉಪಾಹಾರ ಯೋಜನೆಯಡಿ ವಾರಕ್ಕೆ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆ ವಿತರಣೆಯನ್ನು ಇನ್ನುಮುಂದೆ ವಾರದ 6 ದಿನವೂ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮೊಟ್ಟೆ ವಿತರಣೆ ಚಾಲನೆ ಮಾಡಿದರು.
ಬಾಗೇಪಲ್ಲಿಯ ಸರ್ಕಾರಿ ಬಾಲಕಿಯರ ಶಾಲೆಯ ಆವರಣದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೌಷ್ಟಿಕ ಆಹಾರವೂ ಮುಖ್ಯವಾಗಿದ್ದು, ಆ ಕಾರಣಕ್ಕೆ ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿತ್ತು. ಅಜೀಂ ಪ್ರೇಮ್‌ಜಿ ಅವರು ತಮ್ಮ ಪ್ರತಿಷ್ಠಾನದಿಂದ ಇನ್ನುಳಿದ ನಾಲ್ಕು ದಿನವೂ ಮೊಟ್ಟೆ ವಿತರಿಸುವ ಯೋಜನೆಗೆ ಸರ್ಕಾರದೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು ೫೫ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದೆ ಎಂದರು.
ಸರ್ವರಿಗೂ ಸಮಾನ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಶಿಕ್ಷಣದ ಭಾಗವಾಗಿ ಪೌಷ್ಟಿಕ ಆಹಾರ ನೀಡುವ ಯೋಜನೆ ಸರ್ಕಾರ ಆರಂಭಿಸಿತ್ತು. ಈ ಯೋಜನೆಯನ್ನು ವಿಸ್ತರಿಸಲು ಅಜೀಂ ಪ್ರೇಮ್‌ಜಿ ಮುಂದೆ ಬಂದಿರುವುದು ಸರ್ಕಾರದ ಯೋಜನೆಗೆ ಬಲ ಬಂದಿದೆ ಎಂದರು.
ಈ ವೇಳೆ ತಹಶಿಲ್ದಾರ್ ಮನೀಷಾ ಮಹೇಶ್ ಪತ್ರಿ, ಇಓ ರಮೇಶ್, ಆರಕ್ಷಕ ವೃತ್ತ ನಿರೀಕ್ಷಿಕ ಪ್ರಶಾಂತ್ ಆರ್ ವರ್ಣಿ,ಆರ್.ವೆಂಕಟರಾಮ್, ಆರ್.ಹನುಮಂತ ರೆಡ್ಡಿ ಪ್ರಭಾವತಿ ಶಾಲಾ ಶಿಕ್ಷಕರು ಮಕ್ಕಳು ಹಾಜರಿದ್ದರು.