ಚೇಳೂರಿನಲ್ಲಿ ನಡೆದ ಜನಸ್ಪಂಧನಾ ಸಬೆಯಲ್ಲಿ ಶಾಸಕ ಸುಬ್ಬಾರೆಡ್ಡಿ
1 min readಸರ್ಕಾರಿ ಸೌಲಭ್ಯ ತಲುಪಿಸುವುದೇ ಜನಸ್ಪಂದನದ ಉದ್ದೇಶ
ಚೇಳೂರಿನಲ್ಲಿ ನಡೆದ ಜನಸ್ಪಂಧನಾ ಸಬೆಯಲ್ಲಿ ಶಾಸಕ ಸುಬ್ಬಾರೆಡ್ಡಿ
ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯ ಪಟ್ಟರು. ಚೇಳೂರು ತಾಲ್ಲೂಕಿನ ಪಾಳ್ಯಕರೆ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯ ಪಟ್ಟರು. ಚೇಳೂರು ತಾಲ್ಲೂಕಿನ ಪಾಳ್ಯಕರೆ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಜನತೆಯ ಹಿತ ಕಾಯುವುದು ನಮ್ಮ ಕೆಲಸ. ಈ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇವೆ ಎಂದರು.
ಸರ್ಕಾರಿ ಸೌಲಭ್ಯಗಳನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವುದೇ ಜನಸ್ಪಂದನ ಕಾರ್ಯಕ್ರಮ, ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಯೋಜಿಸಿರುವ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ನಾಗರಿಕರು ಸಲ್ಲಿಸಿರುವ ಅರ್ಜಿಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಕಲ್ಪಿಸಿ ಜನರ ಕೆಲಸ ಮಾಡುವುದೇ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ೪೦ ಕಿ.ಮೀ ದೂರದ ಬಾಗೇಪಲ್ಲಿಗೆ ಬಂದು ಅಧಿಕಾರಿಗಳಿಗಾಗಿ ಕಾದು ಕೊನೆಗೆ ವಾಪಸ್ ಹೋಗುವುದನ್ನು ತಪ್ಪಿಸಲು ಸಂಬ0ದಪಟ್ಟ ಎಲ್ಲಾ ಅಧಿಕಾರಿಗಳನ್ನು ಇಲ್ಲಿಗೆ ಕರೆ ತಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು, 23 ಜನರಿಗೆ ವಿವಿಧ ಪಿಂಚಣಿಗಳ ಆದೇಶ ಪತ್ರಗಳು, 16 ಹೆಲ್ತ್ ಕಾರ್ಡುಗಳು, ಭಾಗ್ಯಲಕ್ಷ್ಮಿ ಬಾಂಡ್‌ಗಳು ಹಾಗೂ ಎನ್‌ಆರ್‌ಎಲ್ ಎಂ ಯೋಜನೆಯಡಿ ಸ್ತಿ ಶಕ್ತಿ ಸಂಘಗಳಿಗೆ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು. ನಂತರ ಗ್ರಾಮದ ಅಂಗನವಾಡಿ ಹಾಗೂ ಆರೋಗ್ಯ ವಸತಿ ಗೃಹ ಉದ್ಘಾಟನೆ ಮಾಡಿ, ಜಲಜೀವನ್ ಕಾಮಗಾರಿ. ಚೀಗಟೀಗಲಗುಟ್ಟ ಗ್ರಾಮಕ್ಕೆ ರಸ್ತೆ, ಪೆದ್ದರಾಜಪಲ್ಲಿ ಗ್ರಾಮದ ಬಳಿ ೫೦ ಲಕ್ಷ ರೂ ವೆಚ್ಚದಲ್ಲಿ ಮೋರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಇತರೆ ಗ್ರಾಮಗಳಲ್ಲಿ ಶುದ್ದ ನೀರಿನ ಘಟಕಗಳ ಉದ್ಘಾಟನೆ ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಚೇಳೂರು ತಹಸೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು, ಉಪ ತಹಶಿಲ್ದಾರ ಈಶ್ವರ್, ತಾಪಂ ಇಒ ಜಿ.ವಿ.ರಮೇಶ್, ವೃತ್ತ ನಿರೀಕ್ಷಕ ಪಿ.ಆರ್ ಜನಾರ್ಧನ, ಕೃಷಿ ಇಲಾಖೆಯ ಎ.ಡಿ ಲಕ್ಷ್ಮೀ, ಸಾರಿಗೆ ನಿಯಂತ್ರಣಾಧಿಕಾರಿ ಎ.ಎನ್. ಬೈರವ, ಬೆಸ್ಕಾಂ ಎ.ಇ ಸೋಮಶೇಖರ್, ಲೋಕೊಪಯೋಗಿ ಇಲಾಖೆ ಎ.ಇ.ಪ್ರದೀಪ್, ಬಿಇಒ ಎನ್.ವೆಂಕಟೇಶಪ್ಪ, ತಾಲೂಕು ಕಂದಾಯ ಇಲಾಖೆ ಆಡಳಿತಾಧಿಕಾರಿಗಳು ಇದ್ದರು.