ಚಿತ್ರಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಸುಬ್ಬಾರೆಡ್ಡಿ
1 min readಚಿತ್ರಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಸುಬ್ಬಾರೆಡ್ಡಿ
ಪ್ರತಿ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಲಿ
ರೈತರು ಸಮೃದ್ಧಿಯಾಗಿರಲಿ ಎಂದು ಹಾರೈಸಿದ ಶಾಸಕ
ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ರೈತರು ಸೇರಿದಂತೆ ಜನರು ತೀವ್ರ ಸಮಸ್ಯೆ ಎದುರಿಸಿದ್ದು, ಈ ಬಾರಿ ಉತ್ತಮ ಮಳೆಯಾಗಿ ಚಿತ್ರಾವತಿ ಜಲಾಶಯ ತುಂಬಿ ಹರಿಯುತ್ತಿರುವುದು ರೈತರು ಮತ್ತು ಪಟ್ಟಣದ ಜನತೆಯಲ್ಲಿ ಸಂತಸ ತಂದಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ಪಟ್ಟಣ ಹೊರವಲಯದ ರಾಷ್ಟಿಯ ಹೆದ್ದಾರಿಯಲ್ಲಿರುವ ಪರಗೋಡು ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪೂಜೆ ಆರತಿ ನೆರವೇರಿಸಿ ಮಾತನಾಡಿದ ಶಸಾಕ ಸುಬ್ಬಾರೆಡ್ಡಿ, ಪ್ರತಿನಿತ್ಯದ ಜೀವನದಲ್ಲಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವ ತನಕ ನೀರಿನ ಅವಶ್ಯಕತೆ ಇದ್ದೆ ಇರುತ್ತದೆ. ಅಷ್ಟು ಪ್ರಾಮುಖ್ಯತೆ ನೀರಿಗಿದೆ ಹಾಗಾಗಿ ಈ ಬಾರಿ ಚಿತ್ರಾವತಿ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ಮುಖ್ಯವಾಗಿ ಪಟ್ಟಣದ ಜನತೆಗೆ ನೀರು ಸರಬರಾಜು ಮಾಡಲು ಸಮಸ್ಯೆ ಇರುವುದಿಲ್ಲ ಎಂದರು.
ಪ್ರತಿ ವರ್ಷ ಇದೇ ರೀತಿಯಲ್ಲಿ ಮಳೆ ಚೆನ್ನಾಗಿ ಅಗಿ, ಬೆಳೆಗಳು ಸಮೃದ್ಧವಾಗಿ ಬೆಳೆಯಲಿ ರೈತರು ಈ ಕ್ಷೇತ್ರದ ಜನತೆ ಸುಖ ಸಂತೋಷದಿ0ದ ನೆಮ್ಮದಿಯಾಗಿರಲಿ ಎಂದು ಎಂದು ಶಸಾಕರು ಹಾರೈಸಿದರು. ವೇದ ಪಂಡಿತ್ ಗುರೂಜಿ ಡಾ. ಅಶ್ವತ್ಥನಾರಾಯಣ ಸ್ವಾಮಿ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ವೇದ ಮಂತ್ರ ಘೋಷಣೆಗಳೊಂದಿಗೆ ಗಂಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಮನಿಷಾ ಮಹೇಶ್ ಪತ್ರಿ, ಪುರಸಭೆ ಅಧ್ಯಕ್ಷ ಎ. ಶ್ರೀ ನಿವಾಸ್,ಉಪಾಧ್ಯಕ್ಷ ಸುಜಾತ ನರಸಿಂಹ ನಾಯ್ಡು, ಪುರಸಭೆ ಸದಸ್ಯರಾದ ಎಂ.ನ0ಜುಡಪ್ಪ, ಶ್ರೀನಿವಾಸ್ ರೆಡ್ಡಿ, ಅಶೋಕ್ ರೆಡ್ಡಿ, ಗಂಗರತ್ನಮ್ಮ, ರಂಗಪ್ಪ, ಗಡ್ಡಂ ರಮೇಶ್ , ನಿಸಾರ್, ರೇಷ್ಮಾ ಬಾನು. ಸುಶೀಲ .ಪಿ.ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಪ್ರಭಕರ ರೆಡ್ಡಿ ಇದ್ದರು.