ಕೃಷ್ಣಾ ಮೇಲ್ದಂಡೆ ಯೋಜನೆ ೫೨೪ ಎತ್ತರ ಆಗದಿದ್ದರೆ ಶಾಸಕ ರಾಜಿನಾಮೆ?
1 min readಕೃಷ್ಣಾ ಮೇಲ್ದಂಡೆ ಯೋಜನೆ ೫೨೪ ಎತ್ತರ ಆಗದಿದ್ದರೆ ಶಾಸಕ ರಾಜಿನಾಮೆ?
ಸುದ್ದಿಗೋಷ್ಠಿಯಲ್ಲಿ ತಮ್ಮದೇ ಸರ್ಕಾರ ಎಚ್ಚರಿಕೆ ರವಾನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ 524 ಎತ್ತರ ಆಗದಿದ್ದರೆ ಸರ್ಕಾರದ ಭಾಗವಾಗಿರಲು ಇಚ್ಛೆಪಡಲ್ಲ ಎಂದ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಎಚ್ಚರಿಕೆ ರವಾನಿಸಿದ್ದಾರೆ.
ವಿಜಯಪುರ ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, ತಮ್ಮ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ. ನೇತೃತ್ವದ ಸರ್ಕಾರವಿರಲಿ ಇದು ನಮ್ಮ ಜನರಿಗಾಗಿ ಕಮಿಟ್ಮೆಂಟ್. ನಮಗೆ ಅವಕಾಶ ಇದೆ ನಾವ್ ಅದನ್ನ ಮಾಡ್ಕೊಳ್ಳಲೆಬೇಕು. ಮಾಡಿಕೊಳ್ಳುತ್ತೇವೆ. ಮಾಡಿಕೊಳ್ಳದಿದ್ದರೆ ನಾನು ಸರಕಾರದ ಭಾಗವಾಗಿ ಇರಲ್ಲ ಎಂದು ಹೇಳಿದ್ದಾರೆ. ರಾಜೀನಾಮೆ ಕೊಡ್ತೀರ ಎಂಬ ಪ್ರಶ್ನೆಗೆ ಸರ್ಕಾರದ ಭಾಗವಾಗಿ ಇರಲ್ಲ ಎಂದರೆ ಅದನ್ನ ನಿರೀಕ್ಷೆ ಮಾಡಿ ನೀವು. ಒಂದು ವೇಳೆ ಅದು ಆಗದಿದ್ದರೆ ಸರ್ಕಾರದ ಭಾಗವಾಗಿ ಇರಲ್ಲ ಎಂದಿದ್ದಾರೆ.
ನಾವು ಜನಪರವಾದ ರಾಜಕಾರಣ ಮಾಡಿದವರು. ನನಗೆ ಅಧಿಕಾರ ಸಿಕ್ಕಿಲ್ಲವೆಂದು ಮಾಧ್ಯಮದ ಮುಂದೆ ಬಂದಿಲ್ಲ. ನನಗೆ ಕೆಲವೊಬ್ಬರು ದೆಹಲಿಗೆ ಹಾಗೂ ಬೆಂಗಳೂರಿಗೆ ಕರೆಯಿಸಿ ಮಾತು ಕೊಟ್ಟಿದ್ದರು. ಈ ರೀತಿ ನಾವು ನಿಮ್ಮನ್ನು ಮಾಡುತ್ತೇವೆ. ಕಳೆದ ಬಾರಿ ಮೂರು ಜನ ಶಾಸಕರಿದ್ದೆವು. ಮೂರು ಜನರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು. ಆದರೆ ಇಬ್ಬರನ್ನು ಮಾಡಿದರು ನನ್ನನ್ನ ಮಾಡಿಲ್ಲ ನಾ ಏನರ ಅಂದಿನಿ ಏನು, ಮಾದ್ಯಮಗಳ ಮುಂದೆ ಬಂದು ಮಾತನಾಡಿಲ್ಲ. ಸರ್ವಜನಿಕರ ಬದುಕಿನ ಕಳಕಳಿ ಇಲ್ಲದಿದ್ದರೆ ನಾವು ಸಾರ್ವಜನಿಕ ಬದುಕಿನಲ್ಲಿ ಇರಲು ಅನರ್ಹರಾಗುತ್ತೇವೆ. ಸಾರ್ವಜನಿಕರ ಹಿತದೃಷ್ಟಿ ಬಲಿ ಕೊಡುವುದು ಬಂದರೆ ಜಿಲ್ಲೆ ಇರಲಿ ನಾಡಿನಂದಿರಲಿ ಇರಲಿ ಅಲ್ಲಿ ಮೊದಲು ನಾನಿರುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆದ್ರೆ ಸರ್ಕಾರದಲ್ಲಿ ಯಾರಿಗೆ ಏನು ಕೊಡಬೇಕೆಂಬುದು ನಿರ್ಣಯಗಳಾಗಿವೆ. ಅದನ್ನ ಅವರು ನೆನಪಿನಲ್ಲಿಟ್ಟು ನಿರ್ವಹಿಸುತ್ತಾರೆಂದು ನಾವು ತಿಳಿದುಕೊಂಡಿದ್ದೇವೆ.
ವಿಜಯಪುರ ನಗರದಲ್ಲಿ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.