ಶಾಸಕ ಪ್ರದೀಪ್ ಈಶ್ವರ್‌ರಿಂದ ಕಾಮಗಾರಿಗೆ ಗುದ್ದಲಿಪೂಜೆ
1 min readರೆಡ್ಡಿಹಳ್ಳಿಯಲ್ಲಿ 23 ಲಕ್ಷ ರುಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ
ಶಾಸಕ ಪ್ರದೀಪ್ ಈಶ್ವರ್‌ರಿಂದ ಕಾಮಗಾರಿಗೆ ಗುದ್ದಲಿಪೂಜೆ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು 23 ಲಕ್ಷ ರೂಪಾಯಿ ವೆಚ್ಚದಲ್ಲಿ ರೆಡ್ಡಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ 85 ಲಕ್ಷ ರೂಪಾಯಿ ವೆಚ್ಚದ ಕಮ್ಮಗಾನಹಳ್ಳಿಯಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ತಮ್ಮ ಹುಟ್ಟೂರಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿಯೇ ನನ್ನ ಮಂತ್ರ ರಾಜಕಾರಣ ನನ್ನ ಉದ್ದೇಶವಲ್ಲ ಎಂದು ಹೇಳಿದರು. ಚುನಾವಣೆ ವೇಳೆ ಕಮ್ಮಗಾನಹಳ್ಳಿಯ ಕೆಲವೇ ಜನರು ತಮ್ಮ ಬೆಂಬಲದಲ್ಲಿದ್ದರೂ, ಅಧಿಕಾರಕ್ಕೇರಿದ ನಂತರ ಅವರು ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕ್ರಷರ್ ಮಾಫಿಯ ವಿರುದ್ಧ ಸದಾ ಸಜಾಗಿರುವುದಾಗಿ ಶಾಸಕರು ಹೇಳಿದರು. ಕ್ರಷರ್ ಮಾಲೀಕರನ್ನ ಬೆಂಬಲಿಸಲು ಇಲ್ಲ, ನನ್ನ ಶಕ್ತಿ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ ಎಂದರು. 20 ವರ್ಷಗಳ ಕನಸು ಈಡೇರಿದ ಕಮ್ಮಗನಹಳ್ಳಿಯ ಜನರು ತಮ್ಮ ಶಾಸಕರನ್ನು ಪಟಾಕಿ ಸಿಡಿಸಿ, ತಮಟೆ ತಾಳದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಶೀಘ್ರದಲ್ಲೆ 100 ಹಳ್ಳಿಗಳ ಪ್ರಗತಿ ವರದಿ ಪುಸ್ತಕ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ಒಂದು ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಪ್ರದೀಪೇಶ್ವರ್ ಚಾಲನೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಮ್ಮಗಾನಹಳ್ಳಿಯಲ್ಲಿ ೭ ಜನ ಮಾತ್ರ ತಮ್ಮನ್ನು ಬೆಂಬಲಿಸಿದ್ದರು. ಆದರೂ ನಾನು ರಾಜಕಾರಣ ಮಾಡುತ್ತಿಲ್ಲ ಅಭಿವೃದ್ಧಿಯೇ ನನ್ನ ಮಂತ್ರ, ಕಮ್ಮಗಾನಹಳ್ಳಿ ಜನರಿಗೆ ಯಾರದೋ ಭಯ ಇತ್ತು, ಆದರೆ ಮುಂದಿನ ದಿನಗಳಲ್ಲಿ ಆ ಭಯ ದೂರ ಮಾಡುತ್ತೇನೆ ಎಂದರು. ಕ್ರಷರ್ ಮಾಲೀಕರು ದೊಡ್ಡ ದೊಡ್ಡ ಲೆವೆಲ್, ನನ್ನ ಪರಿಮಿತಿಯಲ್ಲಿ ಅವರನ್ನು ಮಟ್ಟ ಹಾಕ್ತಿನಿ ಎಂದು ಶಾಸಕರು ಭರವಸೆ ನೀಡಿದರು.