ಜಕ್ಕಲಮಡಗು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಪ್ರದೀಪ್ ಈಶ್ವರ್
1 min readಕೋಡಿ ಬಿದ್ದ ಜಕ್ಕಲಮಡಗು ಜಲಾಶಯ
ಜಕ್ಕಲಮಡಗು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಪ್ರದೀಪ್ ಈಶ್ವರ್
ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಬಳ್ಳಾಪುರ ನಗರಗಳಿಗೆ ನೀರು ಪೂರೈಕೆ ಮಾಡುವ ಜಕ್ಕಲಮಡುಗ ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ ಈಶ್ವರ ಇಂದು. ಬೆಳಂ ಬೆಳಗ್ಗೆ ಬಾಗಿನ ಅರ್ಪಿಸಿದರು.
ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಸರಭರಾಜು ಮಾಡುತ್ತಿರುವ ಜಲಾಶಯ ಜಕ್ಕಲಮಡುಗು ಕೋಡಿ ಬಿದ್ದ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾಸಕ ಪ್ರದೀಪ್ ಈಶ್ವರ್ ಜಲಾಶಯಕ್ಕೆ ಬಾಗೀನ ಅರ್ಪಿಸಿದರು
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಜಕಲಮಡುಗು ಜಲಾಶಯ ತುಂಬಿರುವುದರಿ0ದ ಒಂದುವರೆ ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. 1955ರಲ್ಲಿ ಸರ್ ಎಂ ವಿ ರವರ ಯೋಜನೆಯಂತೆ ರೂಪಿಸಿರುವ ಈ ಜಲಾಶಯಕ್ಕೆ ಒಂದು ದೊಡ್ಡ ಇತಿಹಾಸವಿದೆ.
2028ರ ವೇಳೆಗೆ ಈ ಜಲಾಶಯಕ್ಕೆ ಎತ್ತಿನಹೊಳೆ ನೀರು ಬರುವುದರಿಂದ ಶಾಶ್ವತವಾದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಕೋಮಲ್ ನಿರ್ದೇಶಕ ಭರಣಿ ವೆಂಕಟೇಶ್. ತಹಸಿಲ್ದಾರ್ ಅನಿಲ್,ಸ್ತಳೀಯ ಮುಖಂಡರು ಸೇರಿದಂತೆ ಮತ್ತಿತರು ಹಾಜರಿದ್ದರು